ಹಾವೇರಿ: ಹಾವೇರಿ ನಗರದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಪ್ರವಾಸಿ ಮಂದಿರಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಶಿವಾನಂದ ಪಾಟೀಲ್ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ವೇಳೆ ಕಟ್ಟಡದ ಶೇಕಡ 70% ಕಾಮಗಾರಿ ಪೂರ್ಣಗೊಂಡಿದ್ದರು ಸಹ, ಅನುದಾನ ಬಿಡುಗಡೆಯಾಗದ ವಿಚಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೇ ಪಿಡಬ್ಲ್ಯೂಡಿ ಇಂಜಿನಿಯರ್ ಗಳನ್ನ ತರಾಟೆಗೆ ತೆಗೆದುಕೊಂಡರು. ತಕ್ಷಣವೇ ಲೋಕೋಪಯೋಗಿ ಸಚಿವರಿಗೆ ದೂರವಾಣಿ ಮೂಲಕ ಕರೆ ಮಾಡಿ ಅನುದಾನ ಬಿಡುಗಡೆಮಾಡುವಂತೆ ಮನವಿ ಮಾಡಿದರು. ಜೊತೆಗೆ ಸಿಟಿಗೆ ಅಪ್ರೋಚ್ ಆಗುವ ರೋಡ್ ಗಳನ್ನ ಅಭಿವೃದ್ಧಿ ಪಡಿಸುವಂತೆ ಸಚಿವರಿಂದ ಸೂಚನೆ ನೀಡಿದರು.
ಈ ತಕ್ಷಣವೇ ತಾತ್ಕಾಲಿಕವಾಗಿ ರಾಷ್ಟ್ರೀಯ ಹೆದ್ದಾರಿಯಿಂದ ಸಿಟಿಗೆ ಸಂರ್ಪಕಿಸುವ ರಸ್ತೆಯ ಕಾಮಗಾರಿಗೆ ಸೂಚಿಸಿದರು. ಫ್ರಾನ್ಸಿ ಯೋಜನೆ ಮತ್ತು ಆಸ್ತಿ ನಿರ್ವಾಹಣೆ ಕೇಂದ್ರದ ಅನುದಾನದಲ್ಲಿ ರಸ್ತೆ ಮತ್ತು ವೃತ್ತಗಳನ್ನ ಅಭಿವೃದ್ಧಿ ಮಾಡುವಂತೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸೂಚನೆ ನೀಡಿದರು.