ಧಾರವಾಡ : ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಹುಟ್ಟು ಹಬ್ಬದ ಅಂಗವಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ ಕಲಘಟಗಿ ಅಮೃತ ನಿವಾಸ ಮಡಿಕೆ ಹೊನ್ನಳ್ಳಿ ಮಂಜುನಾಥ ಮುರಳಿ ಅವರು ಮಾತನಾಡಿ ಸಂತೋಷ್ ಲಾಡ್ ಅವರ 50ನೇ ವರ್ಷದ ಹುಟ್ಟು ಹಬ್ಬವನ್ನು ರಾಜ್ಯಾದ್ಯಂತ ಮಾಡಲಾಗುತ್ತದೆ ಎಂದರು. ಶ್ರೀ ಸಂತೋಷ್ ಲಾಡ್ ಅಭಿಮಾನಿಗಳು ಅವರ 50ನೇ ಹುಟ್ಟುಹಬ್ಬದ ಪ್ರಯುಕ್ತ ಬ್ಲಾಕ್ ಕಾಂಗ್ರೆಸ್ ಅಭಿಮಾನಿಗಳು ಹಾಗೂ ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಕಲಘಟಗಿ ತಾಲೂಕಿನ ಪದವಿ ತರಗತಿಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹ ಧನ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಜೊತೆಗೆ ಸಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಲಘಟಗಿ ಮತಕ್ಷೇತ್ರದ ಸರ್ವರು, ಎಲ್ಲಾ ಘಟಕಗಳ ಸದಸ್ಯರು ಪಕ್ಷದ ಹಿರಿಯ ಮುಖಂಡರು ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದರು.
ಬೀದರ್ ಯಾತ್ರಿಕರ ವಾಹನ ಅಪಘಾತ ಪ್ರಕರಣ ; ಮೃತರ ಕುಟುಂಬಸ್ಥರ ಭೇಟಿಯಾದ ಸಚಿವ ರಹೀಂಖಾನ್
ಈ ವೇಳೆಯಲ್ಲಿ ಮಾತನಾಡಿದ ಎಸ್ಆರ್ ಪಾಟೀಲ್ ಕೂಡ ಸಂತೋಷ್ ಲಾಡ್ ಅವರ ಹುಟ್ಟು ಹಬ್ಬವನ್ನು ಅದ್ದೂರಿಯಿಂದ ಆಚರಿಸುತ್ತಿದ್ದೇವೆ. ಕಲಘಟಗಿಯ ಹೆಮ್ಮೆಯ ಪುತ್ರನಾದ ಕಲಘಟಗಿ ಅಭಿವೃದ್ಧಿಯ ಹರಿಕಾರ ಸಂತೋಷ್ ಲಾಡ್ ಸಾಹೇಬರು ಕಲಘಟಗಿಯ ಹಳ್ಳಿ ಹಳ್ಳಿಗಳಲ್ಲಿಯೇ ಕೃಷಿ ಹೊಂಡ ಯೋಜನೆಗಳನ್ನು ಹಾಗೂ ರಸ್ತೆ ಕಾಮಗಾರಿಗೆ ಕಲಘಟಗಿ ಮಾಡಲು ಮುಂದಾಗಿದ್ದಾರೆ ಅವರಿಗೆ ಆರೋಗ್ಯ ಐಶ್ವರ್ಯ ಕೊಡಲಿ ಎಂದು ಶುಭ ಹಾರೈಸಿದರು. ಇದೇ ಫೆ 24ರಂದು ಸಂಜೆ ಕಾರ್ಯಕ್ರಮ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಎಸ್ ಆರ ಪಾಟೀಲ, ಹರೀಶ್ ಮಠದ, ಬಾಳು ಖಾನಾಪುರ, ಸೋಮಶೇಖರ ಬೆನ್ನೂರ, ಬಿ.ಯ. ಪಾಟೀಲ, ಯಲ್ಲಪ್ಪ ಚೌರಗಿ, ಮಾಲಾ ತುರಿಯಳ, ಹನುಮಂತ ಚವರ ಗೌಡ, ಮಂಜುಳಾ ದೇವಲಾಪುರ ಮತ್ತು ಕಾಂಗ್ರೆಸ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.