ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ರನ್ನ ಬೆಳಗಲಿಯಲ್ಲಿ “ರನ್ನ ವೈಭವ” ಕಾರ್ಯಕ್ರಮ ಅದ್ದೂರಿಯಾಗಿ ಉದ್ಘಾಟನೆಗೊಂಡಿದೆ. ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ್ ರನ್ನವೈಭವಕ್ಕೆ ಚಾಲನೆ ನೀಡಿದರು.
ಕವಿ ರನ್ನನ ಗತವೈಭವ ಸಾರುವ ಗತವೈಭವ ಜಾನಪದ ಕಲಾತಂಡುಗಳು ಅದ್ದೂರಿಯಾಗಿ ಪ್ರದರ್ಶನ ನೀಡಿದವು. ರನ್ನ ಬೆಳಗಲಿಯ ಬಂದಲಕ್ಷ್ಮಿ ದೇವಸ್ಥಾನದಿಂದ ಕವಿ ಚಕ್ರವರ್ತಿ ರನ್ನ ವೇದಿಕೆವರೆಗೂ ಅದ್ದೂರಿಯಾಗಿ ಮೆರವಣಿಗೆ ನಡೆಯಿತು. ಈ ಮೆರವಣಿಗೆಯಲ್ಲಿ ಡೊಳ್ಳು ಕುಣಿತ ಕರಡಿಮಜಲು ಶಹನಾಯಿ ಕೋಲಾಟ ಜಾಂಜ್ ಮೇಳ ಪುರವಂತಿಕೆ ವೀರಗಾಸೆ ಸೇರಿದಂತೆ 30ಕ್ಕೂ ಹೆಚ್ಚು ಕಲಾ ತಂಡಗಳು ಇದರಲ್ಲಿ ಭಾಗವಹಿಸಿದವು.
ಬಾಗಲಕೋಟೆ ಜಿಲ್ಲಾಧಿಕಾರಿ ಜಾನಕಿ ಮತ್ತು ವಿವಿಧ ಮಹಿಳಾ ಅಧಿಕಾರಿಗಳು ಸೇರಿದಂತೆ ಕೆಂಪು ಮತ್ತು ಹಳದಿ ಬಣ್ಣದ ಸೀರೆಯನ್ನು ಹುಟ್ಟು ಗಮನ ಸೆಳೆದರು.