ಧಾರವಾಡ: ಧಾರವಾಡದ ಸಿಬಿಟಿ ನವೀಕರಣ ಕಾರ್ಯಕ್ರಮಕ್ಕೆಂದು ಬಂದಿದ್ದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸಿಬಿಟಿ ನವೀಕರಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅಲ್ಲಿಂದ ಬಿಆರ್ಟಿಎಸ್ ಬಸ್ನಲ್ಲಿ ಹುಬ್ಬಳ್ಳಿಯತ್ತ ತೆರಳಿದರು.
ಕಾರ್ಯಕ್ರಮ ಮುಗಿಸಿಕೊಂಡು ತಮ್ಮ ವಾಹನದಲ್ಲಿ ಅವರು ಹುಬ್ಬಳ್ಳಿಗೆ ಹೋಗಬೇಕಿತ್ತು. ಆದರೆ, ಸಚಿವ ರಾಮಲಿಂಗಾರೆಡ್ಡಿ ಅವರು ಬಿಆರ್ಟಿಎಸ್ ಬಸ್ ಹತ್ತಿ ಅದರ ಮೂಲಕ ಹುಬ್ಬಳ್ಳಿಯತ್ತ ತೆರಳಿದರು.
ರಾಮಲಿಂಗಾರೆಡ್ಡಿ ಅವರ ಜೊತೆ ಸಚಿವ ಸಂತೋಷ ಲಾಡ್, ಶಾಸಕ ಎನ್.ಎಚ್.ಕೋನರಡ್ಡಿ ಹಾಗೂ ಕೆಎಸ್ಆರ್ಟಿಸಿ ಅಧಿಕಾರಿಗಳು ಕೂಡ ಅದೇ ಬಸ್ನಲ್ಲಿ ತೆರಳಿದರು.