ಹಾಸನ: ಇದೇ ತಿಂಗಳು 4, 5 ನೇ ತಾರೀಖು ಸಿಎಂ, ಡಿ.ಸಿಎಂ ದೆಹಲಿಗೆ ಹೋಗುತ್ತಿದ್ದಾರೆ. ಲೋಕಸಭಾ ಅಭ್ಯರ್ಥಿ, ನಿಗಮ ಮಂಡಳಿ ಬಗ್ಗೆಯೂ ಚರ್ಚೆ ಮಾಡುತ್ತಾರೆ. ಕೆ.ಎಂ.ಶಿವಲಿಂಗೇಗೌಡರು ನಿಗಮ ಮಂಡಳಿ ಅಧ್ಯಕ್ಷರಾಗುತ್ತಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ ಭವಿಷ್ಯ ನುಡಿದರು.
ಮಾಧ್ಯಮದೊಂದಿಗೆ ಮಾತನಾಡಿ, ಮುಂದಿನ ಸಚಿವರ ಬದಲಾವಣೆ ಸಂದರ್ಭ ಶಿವಲಿಂಗೇಗೌಡ ಸಚಿವಾರಾಗುತ್ತಾರೆ ಎಂದು ರಾಜಣ್ಣ ಅವರು ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ಸಿಗುವ ವಿಶ್ವಾಸ ವ್ಯಕ್ತಪಡಿಸಿದರು.
Cashews Benefits: ಪ್ರತಿದಿನ ಗೋಡಂಬಿ ತಿನ್ನುವುದರಿಂದ ಎಷ್ಟೊಂದು ಪ್ರಯೋಜನವಿದೆ ಗೊತ್ತಾ..?
‘ಕಾರ್ಯಕರ್ತರಿಗೂ ನಿಗಮ ಮಂಡಳಿ ಸ್ಥಾನ ಕೊಡಬೇಕು. ಅವರಿಂದಲೇ ನಾವೆಲ್ಲಾ ಗೆದ್ದಿರೋದು. ಕಾರ್ಯಕರ್ತರು ಇರುವುದರಿಂದಲೇ ನಾವೆಲ್ಲಾ ಶಾಸಕರಾಗಿರೋದು. ಕಾರ್ಯಕರ್ತರು, ಶಾಸಕರು ಇಬ್ಬರಿಗೂ ಸ್ಥಾನ ಕೊಟ್ಟು ಸಮತೋಲನ ಕಾಪಾಡುವ ಬಗ್ಗೆ ಪಕ್ಷ ಮತ್ತು ಅಧ್ಯಕ್ಷರ ನಿರ್ಣಯ ಇದೆ’ ಎಂದು ಹೇಳಿದರು.