ಕೆ.ಆರ್.ಪುರ: ಕೇಂಬ್ರಿಡ್ಜ್ ತಾಂತ್ರಿಕ ಮಹಾವಿದ್ಯಾಲಯವು ಸೆಮಿಕಂಡಕ್ಟರ್ ತಯಾರಿಕೆಯ “ಸೆಂಟರ್ ಆಫ್ ಎಕ್ಸಲೆನ್ಸ್” ತೆರೆದ ದೇಶದ ಪ್ರಪ್ರಥಮ ಶೈಕ್ಷಣಿಕ ಸಂಸ್ಥೆಯಾಗಿದ್ದು, ಕರ್ನಾಟಕ ಸರ್ಕಾರವು ಇದಕ್ಕೆ ಉತ್ತೇಜನ ನೀಡುವುದು ಹಾಗು ಜಾಗತಿಕ ಸೆಮಿಕಂಡಕ್ಟರ್ ತಯಾರಿಕಾ ಕಂಪನಿಗಳಿಂದ ಮುಂದಿನ ವರ್ಷಗಳಲ್ಲಿ 10 ಲಕ್ಷ ಸೆಮಿಕಂಡಕ್ಟರ್ ಚಿಪ್ ಡಿಸೈನರ್-ಗಳಿಗೆ ಬೇಡಿಕೆಯಿದೆ ಎಂದು ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಮತ್ತು ಐಟಿಬಿಟಿ ಸಚಿವರಾದ ಪ್ರಿಯಾಂಕ್ ಖರ್ಗೆಯವರು ತಿಳಿಸಿದರು.
ಕೆ.ಆರ್.ಪುರ ಕ್ಷೇತ್ರದ ಕೇಂಬ್ರಿಡ್ಜ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕೇಂದ್ರ ಸರ್ಕಾರದ ಅನುದಾನದಲ್ಲಿ ಸ್ಥಾಪಿತವಾಗಿರುವ ಸೆಮಿಕಂಡಕ್ಟರ್ ಚಿಪ್ ತಯಾರಿಕೆಯ ‘ಸೆಂಟರ್ ಆಫ್ ಎಕ್ಸಲೆನ್ಸ್” ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ಇಂದು ಬೆಂಗಳೂರು ಜಾಗತಿಕ ಮಟ್ಟದಲ್ಲಿ ನಾಲ್ಕನೇ ಅತಿದೊಡ್ಡ ತಂತ್ರಜ್ಞಾನ ಹಬ್ ಆಗಿ ಬೆಳೆದಿದ್ದು, ವರ್ಷಕ್ಕೆ ಸುಮಾರು 4.52 ಬಿಲಿಯನ್ ಡಾಲರ್ ಎಲಕ್ಟ್ರಾನಿಕ್ ಸಾಮಾಗ್ರಿಗಳು ರಫ್ತಾಗುತ್ತಿದೆ. ಭಾರತದ ಸಾಫ್ಟ್ರ್ ಅಭಿವೃದ್ಧಿಯಲ್ಲಿ ಕರ್ನಾಟಕದ ಪಾಲು ಶೇ. 63 ರಷ್ಟಿದೆ ಹಾಗು 50ಕ್ಕೂ ಹೆಚ್ಚು ಯೂನಿಕಾರ್ನ್ ಕಂಪನಿಗಳು ಬೆಂಗಳೂರಿನಲ್ಲಿಯೇ ಇವೆ. ಕರ್ನಾಟಕ ಸರ್ಕಾರವು 33 ದೇಶಗಳೊಂದಿಗೆ ಗ್ಲೋಬಲ್ ಇನ್ನೋವೇಶನ್ ಅಲೆಯನ್ಸ್ ಒಪ್ಪಂದ ಮಾಡಿಕೊಂಡಿದ್ದು ಅದರಡಿಯಲ್ಲಿ ಕೇಂಬ್ರಿಡ್ಜ್ ನಂತಹಕಾಲೇಜುಗಳು ತಯಾರಿಸುವ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಒದಗಿಸಲು ಸಹಾಯ ಮಾಡಲಾಗುವುದು ಎಂದರು.
ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಹಲವಾರು ಸಭೆಗಳಲ್ಲಿ ಪಾಲ್ಗೊಂಡಿದ್ದೆ. ಅಲ್ಲಿ ಅವರು ಮುಂದಿಟ್ಟ ಬೇಡಿಕೆ ಒಂದೇ, ಅದು ಪ್ರತಿಭಾನ್ವಿತರ ಬೇಡಿಕೆ. ಭಾರತದಿಂದ ಮಾತ್ರ ಅದನ್ನು ಪೂರೈಸಲು ಸಾಧ್ಯ ಎಂಬುದು ಅವರ ನಂಬಿಕೆ. ದೇಶದಿಂದ ಅಂದರೆ ಅದು ರಾಜ್ಯದಿಂದ ಎಂಬುದು ನಮಗೆ ಸ್ಪಷ್ಟವಾಗಿದೆ. ಅದಕ್ಕಾಗಿಯೇ ‘ಕೌಶಲ ಸಲಹಾ ಸಮಿತಿ’ಯ ನೇತೃತ್ವವನ್ನು ನಾನೇ ವಹಿಸಿದ್ದೇನೆ. ದೇಶದ ಮೊದಲ ಇಂಥ ಸಮಿತಿ ಇದಾಗಿದೆ. ಉದ್ಯಮಗಳ ಬೇಡಿಕೆಗೆ ಪೂರಕವಾಗಿ ನುರಿತ ಕೆಲಸಗಾರರನ್ನು ಪೂರೈಸುವ ಸಾಮರ್ಥ್ಯ ನಮ್ಮ ರಾಜ್ಯಕ್ಕಿದೆ. ಉಳಿದೆಲ್ಲ ರಾಜ್ಯಗಳಿಗಿಂತ ನಾವು ಮುಂದಿದ್ದೇವೆ,ಎಂದು ಹೇಳಿದರು.
ಪ್ರಗತಿಯ ಹಾದಿಯಲ್ಲಿ ಹೆಚ್ಬಿಡಿ ಕ್ಲಸ್ಟರ್ ಹೆಚ್ಬಿಡಿ ಕ್ಲಸ್ಟರ್ನಲ್ಲಿ 16 ಹೊಸ ಕಂಪನಿಗಳು ತಲೆ ಎತ್ತಿದ್ದು, 4 ಕಂಪನಿಗಳು ತಮ್ಮ ಉದ್ಯಮಗಳ ವಿಸ್ತರಣೆ ಮಾಡಿವೆ. ಕ್ಲಸ್ಟರ್ ಉದ್ಯಮ ಸ್ಥಾಪಿಸಲು 40 ಕಂಪನಿಗಳು ಮುಂದೆ ಬಂದಿವೆ. ಜತೆಗೆ, ಒಂದು ಉತ್ಪಾದನಾ ಘಟಕ ಸಹ ಆರಂಭವಾಗಿದ್ದು ಇದರಿಂದ 3,000 ಜನರಿಗೆ ಉದ್ಯೋಗ ಲಭಿಸಿದೆ. ಬರೋಬ್ಬರಿ 25 ಕೋಟಿ ರೂ. ಬಂಡವಾಳದೊಂದಿಗೆ 150 ಸ್ಟಾರ್ಟ್ಅಪ್ಗಳು ಕಾರ್ಯಾರಂಭಿಸಿವೆ ಈ ಕಂಪನಿಗಳಲ್ಲಿ
ನಮ್ಮ ರಾಜ್ಯದ ವಿದ್ಯಾರ್ಥಿಗಳು ಉದ್ಯೋಗ ಪಡೆದು ಉತ್ತಮ ಸೇವೆಯನ್ನ ನೀಡಬೇಕು ಎಂದರು.
ಕೇಂಬ್ರಿಡ್ಜ್ ವಿದ್ಯಾಸಂಸ್ಥೆ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದು,ಈ ಸಂಸ್ಥೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಹೆಚ್ಚು ಆದ್ಯತೆ ನೀಡುತ್ತಿರುವುದು ಸಂತಸ ತಂದಿದೆ, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಹೊಸ ಹೊಸ ಸಹಾಸಗಳಿಗೆ ಕೈ ಹಾಕಿದ್ದು ಈ ಸಂಸ್ಥೆ ಜೊತೆಗೆ ನಮ್ಮ ಸರ್ಕಾರ ಯಾವಾಗಲೂ ಜೊತೆ ಇರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಿನಾಪ್ಟಿಸ್ ಇಂಡಿಯಾದ ಉಪಾಧ್ಯಕ್ಷರಾದ ಡಾ.ಶಿವಾನಂದ ಕೋಟೇಶ್ವರ,ಸಿಇಒ
ನಿತಿನ್ ಮೋಹನ್, ಪ್ರೊಫೆಸರ್ ಸಿರಿಲ್ ಪ್ರಸನ್ನರಾಜ್, ಸಿನಾಪ್ಟಿಸ್ ಸಂಸ್ಥೆಯ ಟೆಕ್ನಿಕಲ್ ಪಬ್ಲಿಕೇಷನ್ ನಿರ್ದೇಶಕರಾದ ತನುಜಾ ಸತೀಶ್, ಯೂನಿವರ್ಸಿಟಿ ಪ್ರೊಗ್ರಾಂ ಕೋಆಡಿನೇಟರ್ ಡಾ. ಸಂಕಲ್ಸ್ ಸಿಂಗ್ ಉಪಸ್ಥಿತರಿದ್ದರು