ಮುಂಬೈ: ಮಹಾರಾಷ್ಟ್ರದ ಯವತ್ಮಾಲ್ನಲ್ಲಿ ಮಂಗಳವಾರ ಮಧ್ಯಾಹ್ನ ಲೋಕಸಭಾ ಚುನಾವಣಾ ರ್ಯಾಲಿ ವೇಳೆ ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಪ್ರಜ್ಞೆ ತಪ್ಪಿದರು. ಶಿವಸೇನೆಯ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಬಣದ ರಾಜಶ್ರೀ ಪಾಟೀಲ್ ಪರ ಪ್ರಚಾರ ನಡೆಸುತ್ತಿದ್ದರು. ಈ ವೇಳೆ ಪ್ರಜ್ಞೆ ತಪ್ಪಿದ್ದಾರೆ. ಗಡ್ಕರಿ ಅವರು ಬಿಜೆಪಿಯ ನಾಗ್ಪುರ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಯ ಮೊದಲ ಹಂತದಲ್ಲಿ ಸ್ಪರ್ಧಿಸಿದ್ದರು.
Union Minister #NitinGadkari fainted while speaking at an election rally in Maharashtra's Yavatmal this afternoon.
He later tweeted saying that he is "completely healthy and leaving for Varud to attend the next meeting". pic.twitter.com/8aUfPBYDOM
— The Times Of India (@timesofindia) April 24, 2024
ಪ್ರಜ್ಞೆ ತಪ್ಪಿದ ಕುರಿತು ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ನಿತಿನ್ ಗಡ್ಕರಿ, ಮಹಾರಾಷ್ಟ್ರದ ಪುಸಾದ್ನಲ್ಲಿ ನಡೆದ ರ್ಯಾಲಿ ವೇಳೆ ಬಿಸಿಲಿನ ತಾಪದಿಂದ ಅನಾನುಕೂಲವಾಗಿತ್ತು. ಆದರೆ ಈಗ ನಾನು ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ. ಮುಂದಿನ ಸಭೆಗೆ ಹಾಜರಾಗಲು ವರುದ್ಗೆ ಹೊರಡುತ್ತಿದ್ದೇನೆ. ನಿಮ್ಮ ಪ್ರೀತಿ ಮತ್ತು ಶುಭ ಹಾರೈಕೆಗಳಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.