ಬಳ್ಳಾರಿ: ಬಳ್ಳಾರಿ ತಾಲೂಕಿನ ಮಿಂಚೇರಿ, ಸಂಜೀವರಾಯನಕೋಟೆಯ ಜಮೀನುಗಳಿಗೆ ಚಿವ ನಾಗೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತೋಗರಿ, ಮೆಕ್ಕೆಜೋಳ, ಸಜ್ಜೆ, ರಾಗಿ ಸೇರಿದಂತೆ ಇತರೆ ಒಣಗಿರುವ ಬೆಳೆ ಪರಿಶೀಲಿಸಿದ ಸಚಿವರು, ಬರದಿಂದ ನಷ್ಟ ಅನುಭವಿಸಿರುವ ರೈತರನ್ನು ಮಾತನಾಡಿಸಿ ಧೈರ್ಯ ತುಂಬಿದರು.
ಪ್ರತಿ ಹೆಕ್ಟರ್ ಬೆಳೆ ನಷ್ಟಕ್ಕೆ 8000 ಪರಿಹಾರ ನೀಡಲಾಗುತ್ತದೆ, ಪರಿಹಾರ ನೀಡಲು ಕೂಡಲೇ ಕ್ರಮಕೈಗೊಳ್ಳುವಂತೆ ಕೃಷಿ ಅಧಿಕಾರಿಗಳಿಗೆ ಸಚಿವ ನಾಗೇಂದ್ರ ಸ್ಥಳದಲ್ಲೆ ಸೂಚನೆ ನೀಡಿದರು. ನೀವು ಬೆಳೆಗಳಿಗೆ ಇನ್ಯೂರೆನ್ಸ್ ಮಾಡಿಸಿದ್ದೀರಾ ಎಂದು ಕೇಳಿದರು. ಬೆಳೆಗೆ ಇನ್ಯೂರೆನ್ಸ್ ಮಾಡಿಸಿದ್ದೇವೆ,
ಆದರೆ ಸಂಬಂಧಪಟ್ಟ ಅಧಿಕಾರಿಗಳು ತಲೆಕೆಡಿಸಿಕೊಳ್ತಿಲ್ಲ ಎಂದು ಆರೋಪಿಸಿದ ರೈತರು, ಬೆಳೆಗಳ ಇನ್ಸೂರೆನ್ಸ್ ಮಾಡಿಸುವಂತೆ ರೈತರಿಗೆ ಸಲಹೆ ನೀಡಿದ್ದು, ಇಂತಹ ಸಮಯದಲ್ಲಿ ರೈತರಿಗೆ ಇನ್ಯೂರೆನ್ಸ್ ಅನುಕೂಲವಾಗಲಿದೆ. ಇನ್ನೂ ಬೆಳೆ ವಿಮೆಗೆ ಇದುವರಿಗೂ ಅಧಿಕಾರಿಗಳು ಪರಿಹಾರ ನೀಡುತ್ತಿಲ್ಲವೆಂದು ಸಚಿವರೆದುರೆ ರೈತರು ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಪರಿಶೀಲಿಸಿವುದಾಗಿ ರೈತರಿಗೆ ಸಚಿವ ನಾಗೇಂದ್ರ ಭರವಸೆ ಕೊಟ್ಟರು.