ಬೆಳಗಾವಿ: ಕರ್ನಾಟಕದಲ್ಲಿ ರೇಷನ್ ಕಾರ್ಡ್ ಜಾಸ್ತಿ ಆಗಿರೋದಕ್ಕೆ ಎಲ್ಲಾ ಸರ್ಕಾರಗಳು ಕಾರಣ ಎಂದು ಸಚಿವ ಮುನಿಯಪ್ಪ ಹೇಳಿದ್ದಾರೆ. ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಮೊದಲ ದಿನವೇ ಸುರ್ವಣಸೌಧ ಸಾಲು ಸಾಲು ಪ್ರತಿಭಟನೆಗೆ ಸಾಕ್ಷಿಯಾಗುತ್ತಿದೆ. ಇದರ ಬೆನ್ನಲ್ಲೇ ಕಲಾಪದಲ್ಲಿ ರೇಷನ್ ಕಾರ್ಡ್ ಹಂಚಿಕೆಯಲ್ಲಿ ಗೊಂದಲ ಆಗಿದೆ. ಅನೇಕ ಜನರ ರೇಷನ್ ಕಾರ್ಡ್ ರದ್ದು ಆಗಿದೆ. ಈ ಗೊಂದಲ ಸರಿ ಮಾಡಿ, ಮಾಹಿತಿ ಪ್ರಕಾರ 25 ಲಕ್ಷ ರೇಷನ್ ಕಾರ್ಡ್ ರದ್ದು ಆಗಿದೆ ಎಂದು ಜೆಡಿಎಸ್ನ ತಿಪ್ಪೇಸ್ವಾಮಿ ಆರೋಪ ಮಾಡಿದ್ದಾರೆ.
ಇದಕ್ಕೆ ಉತ್ತರ ನೀಡಿದ ಸಚಿವ ಮುನಿಯಪ್ಪ, ಆಹಾರ ಭದ್ರತಾ ಕಾಯ್ಡೆ ಯುಪಿಎ ಸರ್ಕಾರ ಜಾರಿ ಮಾಡಿತು. ಕರ್ನಾಟಕದಲ್ಲಿ 2014 ಎಲ್ಲಿ ಜಾರಿ ಆಯ್ತು? BPL, APL ಕಾರ್ಡ್ಗಳು ಸೇರಿ ಒಟ್ಟು 1,53,64,648 ಕಾರ್ಡ್ ಗೆ ರೇಷನ್ ಕೊಡ್ತಿದ್ದೇವೆ. ಒಟ್ಟು 5,29,01,752 ಫಲಾನುಭವಿಗಳಿಗೆ ರೇಷನ್ ಕೊಡಲಾಗ್ತಿದೆ. BPL ಕಾರ್ಡ್ ಗಳನ್ನ ರದ್ದು ಮಾಡಿಲ್ಲ. ಆದಾಯ 1.20 ಲಕ್ಷ ಇರೋರಿಗೆ, ತೆರಿಗೆ ಕಟ್ಟೋರಿಗೆ ಮಾತ್ರ ಕಾರ್ಡ್ ರದ್ದು ಆಗಿದೆ. ಉಳಿದ ಯಾರಿಗೂ ಕಾರ್ಡ್ ರದ್ದು ಮಾಡೊಲ್ಲ ಅಂತ ಭರವಸೆ ನೀಡಿದ್ದಾರೆ.
ಪಿರಿಯಡ್ಸ್ ಸಮಯದಲ್ಲಿ ಮಹಿಳೆಯರಿಗೆ ಸೆಕ್ಸ್ ಬಯಕೆ ಹೆಚ್ಚಾಗಲು ಕಾರಣವೇನು ಗೊತ್ತಾ..?
ಕರ್ನಾಟಕದಲ್ಲಿ ರೇಷನ್ ಕಾರ್ಡ್ ಜಾಸ್ತಿ ಆಗಿರೋದಕ್ಕೆ ಎಲ್ಲಾ ಸರ್ಕಾರಗಳು ಕಾರಣ. ಅದರಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಂತ ಇಲ್ಲ. ಈಗ ಕಾರ್ಡ್ ಪರಿಷ್ಕರಣೆ ಮಾಡಿದ್ರೆ ಗೊಂದಲ ಆಗಿದೆ. ಇದಕ್ಕೂ ರಾಜಕೀಯ ಪಕ್ಷಗಳು ಕಾರಣ ಆಗುತ್ತದೆ. ಹೀಗಾಗಿ ಕೂಲಂಕಷವಾಗಿ ಪರಿಶೀಲಿಸಿ ಪರಿಷ್ಕರಣೆ ಮಾಡ್ತೀವಿ. ಗ್ರಾಮ ಪಂಚಾಯತಿ ಮಟ್ಟದಲ್ಲಿ ಸರಿಯಾಗಿ ಮಾಹಿತಿ ಪರಿಶೀಲನೆ ಮಾಡಿ BPL ಕಾರ್ಡ್ ಪರಿಷ್ಕರಣೆ ಮಾಡ್ತೀವಿ. ಬಳಿಕ APL ಕಾರ್ಡ್ ಪರಿಷ್ಕರಣೆ ಮಾಡೋ ಕೆಲಸ ಮಾಡ್ತೀವಿ ಅಂತ ತಿಳಿಸಿದರು.