ಧಾರವಾಡ: ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಳಾಳಕರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಪ್ರಕರಣ ಕುರಿತು ಒಸಿಐಡಿಯಿಂದ ಪರಿಷತ್ ಸ್ಥಳ ಮಹಜರು ಮಾಡಲುನಾವು ಇನ್ನೂ ಅನುಮತಿ ಕೊಟ್ಟಿಲ್ಲ ಎಂದು ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು.
ಈ ಕುರಿತು ಅವರು ಏನೂ ಹೇಳಿಲ್ಲ ಏನು ಪಂಚನಾಮೆ ಮಾಡ್ತಾರೆ ತಿಳಿಸಬೇಕು ಅದನ್ನು ನೋಡಿ ಅನುಮತಿ ಬಗ್ಗೆ ವಿಚಾರ ಮಾಡ್ತೇವೆ ಸದ್ಯ ನಾವು ಅನುಮತಿ ಕೊಡೊದಿಲ್ಲ ಎಂದು ನಿರಾಕರಿಸಿದ್ದೇವೆ. ಹಿಂದೆ ಯಾವತ್ತೂ ಹೀಗೆ ಆಗಿಲ್ಲ.ಈಗ ಆಗಿದ್ದುಏನು ಮಾಡಲುಆಗುವುದಿಲ್ಲ ಆಗಿದ್ದನ್ನು ಎದರುಸುತ್ತಿದ್ದೇವೆ ಎಂದರು.
ಲಕ್ಷ್ಮೀ ಹೆಬ್ಬಾಳಕರ ಪುನರ್ ವಿಚಾರಣೆಗೆ ಮನವಿ ವಿಚಾರ:
ಪ್ರಕರಣವನ್ನ ಪುನರ್ ಪರಿಶೀಲನೆಗಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ಮನವಿ ಕೊಟ್ಟಿದ್ದಾರೆ. ಈ ಸಂಬಂಧ ಸೆಕ್ರೆಟರಿ ಹಂತದಲ್ಲಿ ಸಭೆ ಮಾಡ್ತಾರೆ. ಸಭೆ ಬಳಿಕ ತೀರ್ಮಾನ ಕೈಗೊಳ್ಳುತ್ತೇವೆ. ಸಿಐಡಿಗೆ ಸರ್ಕಾರ ತನಿಖೆಗೆ ಕೊಟ್ಟಿದ್ದೇನ. ಮ್ಮನ್ನೇನು ಅವರು ಕೇಳಿ ಕೊಟ್ಟಿಲ್ಲ
ಬಂಧನಕ್ಕೆ ಸಂಬಂಧಿಸಿದಂತೆ ಮಹಜರು ಮಾಡ್ತಾರಂತೆ
ಸರ್ಕಾರ ಯಾವುದನ್ನೂ ನಮ್ಮನ್ನು ಕೇಳಿಲ್ಲ ರವಿ ಬಂಧನ ಮಾಡಿದ ಬಳಿಕ ನಮಗೆ ತಿಳಿಸಿದ್ದಾರ. ಈ ಹಿಂದೆ ಮೊದಲೇ ತಿಳಿಸಬೇಕಿತ್ತು
ಆದರೆ ಈಗ ಪದ್ಧತಿ ಬದಲಿಸಿದ್ದಾರೆ. ಪರಿಷತ್ ಒಳಗೆ ಏನ ಮಹಜರು ಮಾಡ್ತಾರೆ ಗೊತ್ತಿಲ್ಲ. ರವಿಯವರನ್ನು ಕರೆದುಕೊಂಡು ಬರ್ತಾರಾ? ನೋಡಬೇಕು ನಮ್ಮಲ್ಲಿ ಯಾವುದೇ ರೇಕಾರ್ಡ್ ಇಲ್ಲ
ಏನು ಪಂಚನಾಮೆ ಮಾಡ್ತಾರೋ ಗೊತ್ತಿಲ್ಲ ಅವರು ಏನು ಪಂಚನಾಮೆ ಮಾಡತಾರೆ ತಿಳಿಸಬೇಕು.
ಅವರು ತಿಳಿಸಿದ ಮೇಲೆ ಅನುಮತಿ ಕೊಡಬೇಕಾ? ವಿಚಾರ ಮಾಡ್ತೇವಿ ಎಂದರು.