ಬೆಳಗಾವಿ: ಸ್ಪೀಕರ್ ಸ್ಥಾನದ ಬಗ್ಗೆ ಸಚಿವ ಜಮೀರ್ ಅಹ್ಮದ್ ಕೊಟ್ಟ ಹೇಳಿಕೆ ಇಂದು ವಿಧಾನಸಭೆಯಲ್ಲಿ ಪ್ರತಿಧ್ವನಿಸಿದೆ.ಸಂವಿಧಾನಕ್ಕೆ ಜಮೀರ್ ಅಗೌರವ ತೋರಿಸಿದ್ದು,ಸಂಪುಟದಿಂದ ವಜಾ ಮಾಡುವಂತೆ,ಇಂದು ಇಡೀ ದಿನ ಸದನದೊಳಗೆ ಬಿಜೆಪಿ- ಜೆಡಿಎಸ್ ಪ್ರತಿಭಟನೆ ನಡೆಸ್ತು.ನಾನು ಯಾವುದೇ ಕಾರಣಕ್ಕೂ ಕ್ಷಮೆ ಕೇಳಲ್ಲ ಎಂದು ಬಿಜೆಪಿಗೆ ಜಮೀರ್ ಕೌಂಟರ್ ಕೊಟ್ರು.
ಬೆಳಗಾವಿಯ ಚಳಿಗಾಲದ ಬ್ಯಾಟಲ್ ನ ಮೊದಲ ವಾರ ಬರ ಹಾಗೂ ಸ್ಥಳೀಯ ವಿಚಾರಕ್ಕೆ ಸಿಮೀತವಾಗಿತ್ತು.. ವಿಪಕ್ಷ ನಾಯಕರು ಹಾಗೂ ಕೆಲ ಶಾಸಕರು ಬರದ ಬಗ್ಗೆ ಮಾತನಾಡಿ ಸರ್ಕಾರಕ್ಕೆ ಮುಜುಗರ ತರುವ ಪ್ರಯತ್ನ ಮಾಡಿದ್ರು. ಕೊನೆಗೆ ನಾಡಿನ ದೊರೆ ಉತ್ತರ ಕೊಡಬೇಕಿತ್ತು..
Samantha: ಜೀನ್ಸ್’ನಲ್ಲಿ ನೆವರ್ ಬಿಪೋರ್ ಎಂಬಂತೆ ಬೋಲ್ಡ್ ಲುಕ್ಸ್ ಕೊಟ್ಟ ಸಮಂತಾ..! ಫೋಟೋಸ್ ನೋಡಿ
ಆದ್ರೆ ಎರಡು ದಿನ ರಜೆ ಇದ್ದಿದ್ದರಿಂದ ಆ ದಿನಗಳ ಮಟ್ಟಿಗೆ ಕದನ ವಿರಾಮ ಘೋಷಣೆ ಮಾಡಲಾಗಿತ್ತು.. ಮತ್ತೆ ಇಂದಿನಿಂದ ಕುಂದಾನಗರಿ ಬ್ಯಾಟಲ್ ಆರಂಭವಾಗಿದ್ದು ಆರಂಭ ಮೊದಲ ದಿನ ಪೂರ್ತಿ ಜಮೀರ್ ಕೊಟ್ಟ ಸ್ಪೀಕರ್ ಸ್ಥಾನದ ನಮಸ್ಕಾರ ಹೇಳಿಕೆಗೆ ವಿಪಕ್ಷಗಳು ನಿಗಿನಿಗಿ ಕೆಂಡವಾಗಿ ಇಡೀ ದಿನ ಸದನ ಪ್ರತಿಭಟನೆಯಲ್ಲಿ ಕೊಚ್ಚಿ ಹೋಯಿತು.