ಬೀದರ್ : ಬಸವಣ್ಣ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಯತ್ನಾಳ ವಿರುದ್ದ ಸಚಿವ ಈಶ್ವರ ಖಂಡ್ರೆ ಕಿಡಿ ಕಾರಿದ್ದಾರೆ. ಬೀದರ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯತ್ನಾಳ ಒಬ್ಬ ಜೋಕರ್, ಮಾನಸಿಕ ರೋಗಿಯಾಗಿದ್ದು, ಯತ್ನಾಳ ಮಾನಸಿಕ ತಜ್ಞರ ಹತ್ತಿರ ಚಿಕಿತ್ಸೆ ಪಡೆದುಕೊಳ್ಳೋದು ಸೂಕ್ತ. ಬಸವಣ್ಣನವರ ಹೊಳೆಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಮೂಲಕ ರಣಹೇಡಿ ಎಂಬಂತೆ ಬಿಂಬಿಸುತ್ತಿದ್ದಾರೆ. ಸಂಘಿಗಳ ಮನವೊಲಿಸಲು ಈ ರೀತಿ ಹೇಳಿಕೆಗಳನ್ನ ಯತ್ನಾಳ ನೀಡುತ್ತಿರೊದು ಖಂಡನೀಯ. ವೈಯಕ್ತಿಕ ಸ್ವಾರ್ಥ, ಪಕ್ಷದ ಆಂತರಿಕ ಕಲಹಕ್ಕಾಗಿ ಪ್ರತಿಭಟನೆಯ ನಾಟಕ ಮಾಡ್ತಿರೋದು ಖಂಡನೀಯ. ಪ್ರತಿಭಟನೆ ನೆಪದಲ್ಲಿ ಬಿಜೆಪಿಯವರು ನಾಟಕ ಮಾಡ್ತಾ ಇದ್ದಾರೆ. ಯತ್ನಾಳ ಹೇಳಿಕೆ ಬಸವ ಅನುಯಾಯಿಗಳಿಗೆ ತೀವ್ರ ನೋವಾಗಿದೆ . ಯತ್ನಾಳ ಅವರಿಗೆ ವಿನಾಶ ಕಾಲೆ ವಿಪರೀತ ಬುದ್ದಿ ಬಂದಿದೆ. ಬಸವಣ್ಣ ನಮ್ಮೆಲ್ಲರ ಆರಾಧ್ಯ ದೈವ, ಅವರ ಕುರಿತಾಗಿ ಮಾತನಾಡಿರೋ ಯತ್ನಾಳ ಹೇಳಿಕೆಯನ್ನ ಖಂಡಿಸುತ್ತೇವೆ. ಬಿಜೆಪಿ ಅವರಿಗೆ ಬಸವಣ್ಣನವರ ಮತ ಬೇಕು, ಆದ್ರೆ ಲಘುವಾಗಿ ಮಾತನಾಡಿರೋ ಯತ್ನಾಳ ವಿರುದ್ದ ತುಟಿ ಬಿಚ್ಚುತ್ತಿಲ್ಲಾ ಎಂದು ವಾಗ್ದಾಳಿ ನಡೆಸಿದರು.
ಫೆಂಗಲ್ ಸೈಕ್ಲೋನ್ ಎಫೆಕ್ಟ್ : ವಿಮಾನ ಲ್ಯಾಂಡಿಂಗ್ ಗೆ ಪರದಾಟ : ವಿಡಿಯೋ ವೈರಲ್
ಇದೇ ವೇಳೆ ವಕ್ಫ್ ಕುರಿತು ಬಿಜೆಪಿ ಪ್ರತಿಭಟನೆ ವಿಚಾರವಾಗಿ ಮಾತನಾಡಿ, ಬಿಜೆಪಿ ಅವಧಿಯಲ್ಲೇ ಅತಿಹೆಚ್ಚು ದೇವಾಲಯ, ವಕ್ಫ್ಬೋರ್ಡ್ ನೊಟೀಸ್ ಹೊಗಿದೆ. ಹೋರಾಟದ ಮೂಲಕ ಬಡರೈತರನ್ನ ಬಲಿಪಶು ಮಾಡೋಕೆ ಬಿಜೆಪಿ ಹೊರಟಿದೆ. ಯತ್ನಾಳರ ಮೂಲಕ ಬಸವಣ್ಣನವರಿಗೆ ಅವಮಾನ ಮಾಡಲು ಬಿಜೆಪಿ ಚೂ ಬಿಟ್ಟಿದೆ ಎಂದರು.