ಬೀದರ್ : ಕಾರಂಜ ಸಂತ್ರಸ್ತರೊಬ್ಬರು ಪರಿಹಾರಕ್ಕಾಗಿ ಸಚಿವ ಈಶ್ವರ್ ಖಂಡ್ರೆ ಕಾಲಿಗೆ ಬಿದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈಶ್ವರ್ ಖಂಡ್ರೆ ಜಿಲ್ಲೆಗೆ ಭೇಟಿ ನೀಡಿದ ವೇಳೆ ಕಾರಂಜಾ ಡ್ಯಾಂ ನಿರ್ಮಾಣ ವೇಳೆ ನನ್ನ 26 ಎಕರೆ ಜಮೀನು ಹೋಗಿದೆ. ನಾನು ಇನ್ನೂ ಎಷ್ಟು ವರ್ಷ ಕಾಯಬೇಕು. ನಮಗೆ ಪರಿಹಾರ ಹಣ ನೀಡಿ ಎಂದು ಕಾರಂಜ ಡ್ಯಾಂನ ನಿರ್ಮಾಣದ ವೇಳೆ ಭೂಮಿ ಕಳೆದುಕೊಂಡ ರೈತನೊಬ್ಬ ಸಚಿವ ಈಶ್ವರ್ ಖಂಡ್ರೆ ಅವರ ಕಾಲಿಗೆ ಬಿದಿದ್ದಾರೆ. ರೈತ ಕಾಲಿಗೆ ಬೀಳುತ್ತಿದ್ದಂತೆ ನೀವು ಹಿರಿಯರು ನಮ್ಮ ಕಾಲಿಗೆ ಬೀಳಬಾರದು ಎಂದು ರೈತನನ್ನು ಸಚಿವ ಈಶ್ವರ್ ಖಂಡ್ರೆ ಅವರು ಸಮಾಧಾನ ಮಾಡಿದರು.
ನನ್ನ ಒಬ್ಬ ಮಗ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಾನೆ ಇನ್ನೊಬ್ಬ ಕೂಲಿ ಕೆಲಸಕ್ಕೆ ಹೋಗ್ತಾನೆ. ನಾನು 26 ಎಕರೆ ಭೂಮಿಯನ್ನು ಕಳೆದುಕೊಂಡಿದ್ದೇನೆ. ಖಂಡ್ರೆ ಸಾಹೇಬರು ನಮಗೆ ಪರಿಹಾರ ಕೊಡುವುದಾಗಿ ಹೇಳಿ ನಮ್ಮ ಹೋರಾಟವನ್ನು ಕೈಬಿಡಿಸಿದ್ದಾರೆ. ನಾನು ಕಾಲಿಗೆ ಬಿದ್ದ ಮೇಲಾದರೂ ಪರಿಹಾರ ನೀಡಬಹುದೆಂದು ಭಾವಿಸಿ ಸಚಿವರ ಕಾಲಿಗೆ ಬಿದ್ದೆ ಎಂದು ಸಚಿವರ ಮುಂದೆ ಅಳಲು ತೋಡಿಕೊಂಡಿದ್ದಾನೆ.