ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಿಂದೋಳಿ ಗ್ರಾಮದಲ್ಲಿ ಏಪ್ರಿಲ್ ತಿಂಗಳಿನಲ್ಲಿ ನಡೆಯಲಿರುವ ಶ್ರೀ ಮಹಾಲಕ್ಷ್ಮಿದೇವಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಗ್ರಾಮದ ಒಳಾಂಗಣ ರಸ್ತೆ ಹಾಗೂ ಚರಂಡಿ ನಿರ್ಮಾಣದ ಕಾಮಗಾರಿಗಳಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಶನಿವಾರ ಸಂಜೆ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಯತ್ನಾಳ್ ಅವರಿಗೆ ಸಿಗಲಿ ; ಕುಂಭಮೇಳದಲ್ಲಿ ಅಭಿಮಾನಿಗಳ ವಿಶೇಷ ಪ್ರಾರ್ಥನೆ
ಕ್ಷೇತ್ರದ ಶಾಸಕರೂ ಆಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ವಿಶೇಷ ಪ್ರಯತ್ನದಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಮಂಜೂರು ಮಾಡಿಸಲಾಗಿದೆ. ಸುಮಾರು 15 ವರ್ಷಗಳ ಬಳಿಕ ಜಾತ್ರೆ ನಡೆಯುತ್ತಿದ್ದು, ಜಾತ್ರೆಗೆ ಬೇಕಾಗಿರುವ ಸಕಲ ಸಹಕಾರ ಕೊಡುವುದಾಗಿ ಭರವಸೆ ನೀಡಿರುವ ಸಚಿವರು, ಜಾತ್ರೆ ಯಶಸ್ವಿಯಾಗಿ ನಡೆಯಬೇಕು ಎನ್ನುವ ಸಂಕಲ್ಪ ಮಾಡಿದ್ದಾರೆ. ಜಾತ್ರೆ ಹತ್ತಿರದಲ್ಲಿರುವ ಕಾರಣ ನಿಗದಿತ ಸಮಯದಲ್ಲಿ ಗುಣಮಟ್ಟದ ರಸ್ತೆ ಹಾಗೂ ಚರಂಡಿ ನಿರ್ಮಾಣ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಗ್ರಾಮದ ಮುಖಂಡರೊಂದಿಗೆ ಈಗಾಗಲೆ ಎರಡ್ಮೂರು ಸುತ್ತಿನ ಸಭೆ ನಡೆಸಿರುವ ಚನ್ನರಾಜ ಹಟ್ಟಿಹೊಳಿ, ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುವಂತೆ ಸಿದ್ಧತಾ ತಂಡಕ್ಕೆ ಸೂಚಿಸಿದ್ದಾರೆ.
ಈ ಸಂದರ್ಭದಲ್ಲಿ ಪಿಡಿಓ ಶ್ರೀದೇವಿ ಹಿರೇಮಠ್, ಸುರೇಶ ಪಾಟೀಲ, ರಾಕೇಶಗೌಡ ಪಾಟೀಲ, ಶಿವು ಸೈಬಣ್ಣವರ, ಶೈಲಾ ತಿಪ್ಪಣ್ಣಗೋಳ, ರಾಜು ಪಾಟೀಲ, ಕೃಷ್ಣ ಅನಿಗೋಳ್ಕರ್, ಸುರೇಶ ಮುಚ್ಚಂಡಿ, ಲಕ್ಷ್ಮಣ ಹಲಗೇಕರ್, ಭರ್ಮಾ ಶಹಾಪೂರಕರ್, ಯಲ್ಲಪ್ಪ ಶಹಾಪೂರಕರ್, ಲಕ್ಷ್ಮಣ ಅಗಸಿಮನಿ, ನಾಗೇಶ್ ದೇಸಾಯಿ, ಮಲ್ಲಾರ್ದ ಮುಚ್ಚಂಡಿ, ಪಿಂಟು ಮಲ್ಲವ್ವಗೋಳ, ಗಜು ಕಣಬರ್ಕರ್, ನಿಂಗಪ್ಪ ಮೊದಗೇಕರ್, ಗುಂಡು ತಳವಾರ, ಮಲ್ಲಪ್ಪ ತಿಪಣ್ಣಗೋಳ, ನಾಗೇಂದ್ರ ಕುರುಬರ, ಲಕ್ಷ್ಮಣ ಪೂಜೇರಿ ಹಾಗೂ ಅಪಾರ ಸಂಖ್ಯೆಯಲ್ಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.