ಬೆಂಗಳೂರು;- ರಾಜಧಾನಿ ಬೆಂಗಳೂರಲ್ಲಿ ಗಣಿ-ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಕೊಲೆ ಕೇಸ್ ಗೆ ಸಂಬಂಧಿಸಿದಂತೆ ಕಲ್ಲು ಕ್ವಾರಿಯನ್ನು ಸ್ಥಗಿತಗೊಳಿಸಿದ್ದಕ್ಕೆ ಡಿಡಿ ಪ್ರತಿಮಾ ಕೊಲೆ ಶಂಕೆ ವ್ಯಕ್ತವಾಗಿದೆ.
ಹಿರಿಯ ಅಧಿಕಾರಿ ಈ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ನಗರ ಜಿಲ್ಲೆ ಹುಣಸಮಾರನಹಳ್ಳಿಯಲ್ಲಿ ಕ್ವಾರಿ ಸ್ಥಗಿತಗೊಳಿಸಿದ್ರು. ಅಕ್ರಮ ಗಣಿಗಾರಿಕೆ ಸಂಬಂಧ ಉಪ ನಿರ್ದೇಶಕಿ ಪ್ರತಿಮಾ ವರದಿ ನೀಡಿದ್ದರು. ಗ್ರಾಮದ ಸರ್ವೆ ನಂಬರ್ 177, 179ರಲ್ಲಿ 4 ಎಕರೆ ಜಾಗದಲ್ಲಿ ದೂರು ಬಂದಿತ್ತು. ದೂರಿನ ಅನ್ವಯ ಅಧಿಕಾರಿಗಳು ಸ್ಥಳಕ್ಕೆ ಪರಿಶೀಲನೆ ನಡೆಸಿದ್ದರು.
ಲೈಸೆನ್ಸ್ ಪಡೆಯದೆ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದರು. ಕಲ್ಲು ಬಂಡೆಗಳನ್ನ ಅಕ್ರಮವಾಗಿ ಬ್ಲಾಸ್ಟ್ ಮಾಡುತ್ತಿದ್ದರು. ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿ ಪ್ರತಿಮಾ ಇದನ್ನು ನಿಲ್ಲಿಸಿದ್ದರು. ನಾಲ್ಕು ಎಕರೆ ಜಾಗದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿತ್ತು. ಕಲ್ಲು ಕ್ವಾರಿಯನ್ನ ನಿಲ್ಲಿಸಿದ್ದಕ್ಕೆ ಮರ್ಡರ್ ಶಂಕೆ ವ್ಯಕ್ತವಾಗಿದೆ.