ಗದಗ: ಒಂದೆಡೆ ಜನರ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಗಂಭೀರವಾಗಿ ಚರ್ಚೆ ನಡೆಯುತ್ತಿದ್ದರೆ ಇನ್ನೊಂದೆಡೆ KDP ಸಭೆಯಲ್ಲೇ ಗಣಿ ಅಧಿಕಾರಿ ಹಾಯಾಗಿ ನಿದ್ರೆಗೆ ಜಾರಿದ್ದಾರೆ.
ಗದಗ ಜಿಲ್ಲಾಡಳಿತ ಭವನದಲ್ಲಿ ಇಂದು ಸಚಿವ ಎಚ್ ಕೆ ಪಾಟೀಲ್ ನೇತೃತ್ವದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಗಣಿ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆ ಕಂಡು ಬಂದಿದೆ.
ಕೆಡಿಪಿ ಮೀಟಿಂಗ್ ನಲ್ಲಿ ಸಭೆಯ ಅರಿವೇ ಇಲ್ಲದಂತೆ ಗಣಿ ಇಲಾಖೆ ಅಧಿಕಾರಿಗಳು ವರ್ತಿಸಿದ್ದಾರೆ. ಹಲವಾರು ಸಮಸ್ಯೆ ಬಗ್ಗೆ ಸಚಿವರು ಚರ್ಚೆ ಮಾಡುತ್ತಿದ್ದ ವೇಳೆ ಗಣಿ ಇಲಾಖೆ ಅಧಿಕಾರಿ ನಿದ್ರೆಗೆ ಜಾರಿದ್ದಾರೆ.
ನನ್ನಗು ಕೆಡಿಪಿಗೂ ಸಂಬಂಧವಿಲ್ಲೆಂದು ಗಣಿ ಇಲಾಖೆ ಅಧಿಕಾರಿ ನಾಗಭೂಷಣ ಹಾಯಾಗಿ ನಿದ್ರೆಗೆ ಜಾರಿದ್ದಾರೆ. ಸಭೆಯಲ್ಲಿ ಕೆಲವು ಅಧಿಕಾರಿಗಳು ಮೊಬೈಲ್ ನಲ್ಲಿ ಬ್ಯೂಸಿ ಇದ್ದು, ಇನ್ನು ಗಣಿ ಇಲಾಖೆ ಅಧಿಕಾರಿ ಮಾತ್ರ ತಂಪಾದ ಎಸಿ ಹವಾಗೆ ಹಾಯಾಗಿ ನಿದ್ರೆಗೆ ಜಾರಿದ್ದಾರೆ.