ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ TRAI ಹೊಸ ನಿಯಮವನ್ನು ತಂದಿದೆ. ಈ ಹೊಸ ನಿಯಮದ ಪ್ರಕಾರ, ಟೆಲಿಕಾಂ ಕಂಪನಿಗಳು ತಮ್ಮ ನೆಟ್ವರ್ಕ್ ಯಾವ ಪ್ರದೇಶಗಳಲ್ಲಿ ಲಭ್ಯವಿದೆ ಎಂಬ ವಿವರಗಳನ್ನು ನೀಡಬೇಕು. ಅದೇ ಸಮಯದಲ್ಲಿ, ಸ್ಪ್ಯಾಮ್ ಕರೆಗಳನ್ನು ತಡೆಯಲು ಹೊಸ ಕ್ರಮಗಳನ್ನು ತೆಗೆದುಕೊಳ್ಳಬೇಕು. ಎಂದಿದೆ.
ಟ್ರಾಯ್ ಸಹಯೋಗದಲ್ಲಿ ದೇಶದ ಟೆಲಿಕಾಂ ಇಲಾಖೆ ಸುಮಾರು 122 ಕೋಟಿ ಮೊಬೈಲ್ ಬಳಕೆದಾರರ ರಕ್ಷಿಸಲು ಕಠಿಣ ಕ್ರಮ ತೆಗೆದುಕೊಂಡಿದೆ.
ಟ್ರಾಯ್ ಮತ್ತು ಟೆಲಿಕಾಮ್ ಇಲಾಖೆ ಇತ್ತೀಚೆಗೆ 1.77 ಕೋಟಿ ಮೊಬೈಲ್ ಸಂಖ್ಯೆಗಳನ್ನು ರದ್ದು ಮಾಡಿದೆ.
ಟೆಲಿಕಾಂ ಆಪರೇಟರ್ಗಳ ಸುಮಾರು 1.7 ಕೋಟಿ ಸಿಮ್ ಕಾರ್ಡ್ಗಳನ್ನು ಸರ್ಕಾರ ಬ್ಲಾಕ್ ಮಾಡಿದೆ. ಟ್ರಾಯ್ ಮತ್ತು ಟೆಲಿಕಾಮ್ ಇಲಾಖೆ ಇತ್ತೀಚೆಗೆ 1.77 ಕೋಟಿ ಮೊಬೈಲ್ ಸಂಖ್ಯೆಗಳನ್ನು ರದ್ದು ಮಾಡಿದೆ. ಕ್ಯಾನ್ಸಲ್ ಆಗಿರುವ ಸಿಮ್ ಕಾರ್ಡ್ಗಳಿಂದ ನಕಲಿ ಫೋನ್ ಕರೆ ಮಾಡಲು ಬಳಕೆ ಆಗುತ್ತಿತ್ತು. ಟೆಲಿಕಾಂ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಪ್ರತಿದಿನ ಸುಮಾರು 1.35 ಕೋಟಿ ನಕಲಿ ಕರೆಗಳನ್ನು ತಡೆಹಿಡಿಯಲಾಗುತ್ತಿದೆ.
ಟ್ರಾಯ್ ಮತ್ತು ಟೆಲಿಕಾಮ್ ಇಲಾಖೆ ಇತ್ತೀಚೆಗೆ 1.77 ಕೋಟಿ ಮೊಬೈಲ್ ಸಂಖ್ಯೆಗಳನ್ನು ರದ್ದು ಮಾಡಿದೆ. ಕ್ಯಾನ್ಸಲ್ ಆಗಿರುವ ಸಿಮ್ ಕಾರ್ಡ್ಗಳಿಂದ ನಕಲಿ ಫೋನ್ ಕರೆ ಮಾಡಲು ಬಳಕೆ ಆಗುತ್ತಿತ್ತು. ಟೆಲಿಕಾಂ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಪ್ರತಿದಿನ ಸುಮಾರು 1.35 ಕೋಟಿ ನಕಲಿ ಕರೆಗಳನ್ನು ತಡೆಹಿಡಿಯಲಾಗುತ್ತಿದೆ. ನಕಲಿ ಕರೆಗಳು ಬರುತ್ತಿದ್ದ 1.77 ಕೋಟಿ ಸಿಮ್ಗಳನ್ನು ಶಾಶ್ವತವಾಗಿ ಬ್ಯಾನ್ ಮಾಡಲಾಗಿದೆ ಎಂದು ತಿಳಿಸಿದೆ.
ಸಾರ್ವಜನಿಕ ದೂರುಗಳ ಮೇಲೆ ಈ ಕ್ರಮ ತೆಗೆದುಕೊಳ್ಳಲಾಗಿದೆ. ಕಳೆದ ಐದು ದಿನಗಳಲ್ಲಿ 7 ಕೋಟಿ ಕರೆಗಳನ್ನು ಟ್ರಾಯ್ ತಡೆ ಹಿಡಿಯಲಾಗಿದೆ. ನಕಲಿ ಕರೆ ಬರುವ ಸಿಮ್ ಕಾರ್ಡ್ಗಳನ್ನು ಬ್ಯಾನ್ ಮಾಡ್ತಿರೋದು ಇದೆ ಮೊದಲೇನೂ ಅಲ್ಲ. ಈ ಹಿಂದೆಯೂ ಲಕ್ಷಗಟ್ಟಲೆ ಸಿಮ್ ಕಾರ್ಡ್ಗಳನ್ನು ಬ್ಲಾಕ್ ಮಾಡಲಾಗಿದೆ.