ಬೆಂಗಳೂರು: ಉದ್ಯಮಿಗೆ ಕೋಟಿ ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ವಿಚಾರಣೆ ವೇಳೆ ಚೈತ್ರಾ (Chaitra) ತಪ್ಪೊಪ್ಪಿಗೆ ನೀಡಿದ್ದಾರೆ.

ಸಿಸಿಬಿ ಎದುರು ಚೈತ್ರಾ ನೀಡಿದ ಸ್ವ-ಇಚ್ಛಾ ಹೇಳಿಕೆ ಏನು..?, ವಿಷದ ಬಾಟಲಿ ನಾಟಕದ ಬಗ್ಗೆ ಚೈತ್ರಾ ಹೇಳಿದ್ದೇನು..?, ಯಾರ್ಯಾರನ್ನ ಬಳಸಿಕೊಂಡು ಎಲ್ಲೆಲ್ಲಿ ಹಣ ವಸೂಲಿಗೆ ನಿಂತಿದ್ರು..?, ಡೀಲ್ ಮಾಡೋದಕ್ಕೆ ಸಿಮ್ ಖರೀದಿ ಮಾಡಿಸಿಕೊಟ್ಟಿದ್ದು ಯಾರು ಎಂಬುದರ ಇಂಚಿಂಚು ಮಾಹಿತಿ ಇಲ್ಲಿದೆ.

ತಪ್ಪೊಪ್ಪಿಗೆ ಪ್ರತಿಯಲ್ಲಿ ಏನಿದೆ..?: 2018ರಲ್ಲಿ ಅಭಿನವ ಹಾಲಶ್ರೀಯನ್ನು (Halashree) ಭೇಟಿ ಮಾಡಿದ್ದೆ. ನನಗೂ ಬಿಜೆಪಿಯ ಕೆಲ ನಾಯಕರು ಗೊತ್ತಿದ್ರಿಂದ ಅಭಿನವ ಹಾಲಶ್ರೀ ನನಗೆ ಒಂದು ಮಾತು ಹೇಳಿದ್ರು. ಈಗಾಗಲೇ 10 ಜನರ ಪೈಕಿ 6 ಜನರಿಗೆ ಟಿಕೆಟ್ ಕೊಡಿಸಿದ್ರು. ಇನ್ನು 4 ಜನರಿಗೆ ಟಿಕೆಟ್ ಕೊಡಿಸ್ತೀನಿ ಅಂತ ಹೇಳಲಾಗಿತ್ತು. ಬಿಜೆಪಿಯ ಟಿಕೆಟ್ (BJP Ticket) ಯಾರಿಗಾದ್ರೂ ಬೇಕು ಅಂದ್ರೆ ನನಗೆ ಹೇಳಿ ಟಿಕೆಟ್ ಕೊಡಿಸ್ತೀನಿ ಅಂದಿದ್ರು.

Gud News: ನಾನ್ ವೆಜ್ ಪ್ರಿಯರಿಗೆ ಗುಡ್ ನ್ಯೂಸ್: KMF ಮಾದರಿಯಲ್ಲೇ ಮಾಂಸ ಮಾರಾಟ!

2022ರಲ್ಲಿ ಪ್ರಸಾದ್ ಬೈಂದೂರು (Prasad Baindoor) ಮೂಲಕ ನನಗೆ ಗೋವಿಂದ ಬಾಬು ಪೂಜಾರಿ (Govinda Babu Poojary) ಸಂಪರ್ಕ ಆಯ್ತು. ಗೋವಿಂದಬಾಬು ಪೂಜಾರಿ ಬೈಂದೂರು ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ರು. ಗೋವಿಂದ ಬಾಬು ಪೂಜಾರಿ ಅವರಿಗೆ ಮೋಸ ಮಾಡೋದಕ್ಕಾಗಿ ಗಗನ್ ಜೊತೆ ಸೇರಿಕೊಂಡೆ. ಕೇಂದ್ರದ ನಾಯಕರು ಅಂತ ಪರಿಚಯ ಮಾಡೋದಕ್ಕೆ ರಮೇಶ್, ಧನರಾಜ್ ತೀರ್ಮಾನ ಮಾಡಿದ್ವಿ. ಧನರಾಜ್ ಮತ್ತು ರಮೇಶ್‍ಗೆ ಮೂರು ಗಂಟೆಗಳ ಕಾಲ ರಿಹರ್ಸಲ್ ಮಾಡಿಸಿದ್ವಿ. 2022ರ ಜುಲೈ 4ರಂದು ಗಗನ್ (Gagan), ಗೋವಿಂದ ಬಾಬು ಪೂಜಾರಿಯನ್ನು ಚಿಕ್ಕಮಗಳೂರಿನ ಅತಿಥಿ ಗೃಹಕ್ಕೆ ಕರೆಸಿಕೊಂಡು ಧನರಾಜ್ ಮತ್ತು ರಮೇಶ್ ಇಬ್ಬರನ್ನು ಪಿಎಂ ಮತ್ತು ಗೃಹಸಚಿವಾಲಯದ ನಿಕಟವರ್ತಿಗಳು ಅಂತ ಪರಿಚಯ ಮಾಡಿಕೊಟ್ವಿ. ಗಗನ್ ಆ ಸಂದರ್ಭದಲ್ಲಿ 50 ಲಕ್ಷಕ್ಕೆ ಬೇಡಿಕೆ ಇಟ್ಟರು

Share.