ಕ್ಯಾಲ್ಸಿಯಂನಿಂದ ಸಮೃದ್ಧವಾಗಿರುವ ಹಾಲು ದೇಹಕ್ಕೆ ಅಗತ್ಯವಾಗಿರುವ ಆಹಾರ ಪದಾರ್ಥ. ಇದು ನಮ್ಮ ಮೂಳೆ, ಹಲ್ಲುಗಳನ್ನು ಗಟ್ಟಿ ಮುಟ್ಟಾಗಿಸುತ್ತದೆ. ಆದರೆ ನಾವು ಕುಡಿಯುವ ಹಾಲು ನಿಜಕ್ಕೂ ಗುಣಮಟ್ಟದ್ದಾಗಿದೆಯೇ ಎಂದು ತಿಳಿದುಕೊಳ್ಳುವುದು ಮುಖ್ಯ, ಆದರೆ ಇದನ್ನು ಮನೆಯಲ್ಲಿ ಕಂಡುಕೊಳ್ಳುವುದು ಕಷ್ಟ.
ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಬಾಣಂತಿ: ಸಾವಿಗೆ ಕಾರಣ?
ನಮ್ಮ ಮನೆಗೆ ಪ್ರತಿನಿತ್ಯ ಹಾಲು ಸರಬರಾಜು ಮಾಡುವವರು ಯಾವ ಮಟ್ಟದ ಹಾಲು ಪೂರೈಕೆ ಮಾಡುತ್ತಾರೆ, ಅದು ನಮ್ಮ ದೇಹದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದರ ಬಗ್ಗೆ ನಾವು ಮೊದಲು ತಿಳಿದುಕೊಳ್ಳಬೇಕು.
ಮಾರುಕಟ್ಟೆಯಿಂದ ಖರೀದಿಸಿ ತಂದ ಹಾಲು ಕಲಬೆರಕೆಯಾಗಿದೆಯೇ? ಮನೆಯಲ್ಲೇ ಪತ್ತೆ ಹಚ್ಚಲು ಈ ಕೆಲವು ವಿಧಾನವನ್ನು ಅನುಸರಿಸಿ.
ಶುದ್ಧ ಹಾಲಿನ ಬಣ್ಣ ಬಿಳಿಯಾಗಿರುತ್ತದೆ. ಶುದ್ಧ ಹಾಲನ್ನು ಬಿಸಿ ಮಾಡಿದಾಗ ಅಥವಾ ತಂಪಾದ ಸ್ಥಳದಲ್ಲಿಟ್ಟರೆ ಅದರ ಬಣ್ಣದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಒಂದು ವೇಳೆ ಹಾಲಿನ ಬಣ್ಣವು ಹಳದಿ ಬಣ್ಣಕ್ಕೆ ತಿರುಗಿದರೆ ಕಲಬೆರಕೆಯಾಗಿದೆ ಎಂದು ಅರ್ಥ ಮಾಡಿಕೊಳ್ಳಿ.
ಐದರಿಂದ ಹತ್ತು ಮಿಲಿಲೀಟರ್ ಹಾಲನ್ನು ತೆಗೆದುಕೊಂಡು, ಅದಕ್ಕೆ ಅಷ್ಟೇ ಪ್ರಮಾಣದಲ್ಲಿ ನೀರನ್ನು ಬೆರೆಸಿಕೊಳ್ಳಿ. ಈ ವೇಳೆಯಲ್ಲಿ ಹಾಲಿನಲ್ಲಿ ನೊರೆ ಕಂಡುಬಂದರೆ, ಹಾಲಿಗೆ ವಾಷಿಂಗ್ ಪೌಡರ್ ಮತ್ತು ಡಿಟರ್ಜೆಂಟ್ ಪೌಡರ್ ಸೇರಿಸಿ ಕಲಬೆರಕೆ ಮಾಡಲಾಗಿದೆ ಎನ್ನುವುದು ಖಚಿತವಾಗುತ್ತದೆ.
ಶುದ್ಧ ಹಾಲು ರುಚಿಯಲ್ಲಿ ಸಿಹಿಯಾಗಿರುತ್ತದೆ. ಮನೆಗೆ ತಂದ ಹಾಲು ಬಿಸಿ ಮಾಡಿ ಕುಡಿದು ನೋಡಿ ರುಚಿಯಲ್ಲಿ ಸಿಹಿಯಾಗಿದ್ದರೆ ಕಲಬೆರಕೆಯಾಗಿಲ್ಲ ಎಂದರ್ಥ. ಕಲಬೆರಕೆಯಾದ ಹಾಲು ರುಚಿಯಲ್ಲಿ ಕಹಿಯಾಗಿರುತ್ತದೆ.
ಹಾಲಿಗೆ ನೀರನ್ನು ಬೆರೆಸಲಾಗಿದೆಯೇ ಎಂದು ಪರೀಕ್ಷಿಸಲು ನೆಲದ ಮೇಲೆ ಒಂದು ಹನಿ ಹಾಲನ್ನು ಹಾಕಿ, ಶುದ್ಧ ಹಾಲಾಗಿದ್ದರೆ, ಬೇಗನೆ ಭೂಮಿಯಲ್ಲಿ ಇಂಗುವುದಿಲ್ಲ. ಹಾಲಿನೊಂದಿಗೆ ನೀರು ಬೆರೆಸಿದರೆ ಅದು ತಕ್ಷಣವೇ ಇಂಗಿ ಹೋಗುತ್ತದೆ.
ಹಾಲಿಗೆ ಹಿಟ್ಟನ್ನು ಸೇರಿಸುವ ಮೂಲಕ ಹಾಲು ಕಲಬೆರಕೆಯಾಗಿದೆ ಎಂದು ಪತ್ತೆ ಹಚ್ಚಬಹುದು. ಐದು ಮಿಲಿ ಹಾಲನ್ನು ತೆಗೆದುಕೊಂಡು ಒಂದೆರಡು ಚಮಚ ಚಮಚ ಅಯೋಡೈಸ್ ಉಪ್ಪನ್ನು ಸೇರಿಸಿ. ಹಾಲು ನೀಲಿ ಬಣ್ಣಕ್ಕೆ ಹಾಲು ಶುದ್ಧವಾಗಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ