ತುಮಕೂರು:-ಅಂಗನವಾಡಿಯಲ್ಲಿ ಇರಬೇಕಿದ್ದ ಕ್ಷೀರಭಾಗ್ಯದ ಹಾಲುಪುಡಿ ಅಂಗಡಿಯಲ್ಲಿ ಪತ್ತೆಯಾದ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವೈಎನ್ ಹೊಸಕೋಟೆಯಲ್ಲಿ ಜರುಗಿದೆ.
Karnataka weather: ಇಂದಿನಿಂದ ಕರ್ನಾಟಕದಾದ್ಯಂತ ಮುಂಗಾರು ಚುರುಕು..!
ವೈಎನ್ ಹೊಸಕೋಟೆಯ ಅಂಗಡಿಗಳಲ್ಲಿ ಅಂಗನವಾಡಿ ಹಾಲಿನ ಪುಡಿ ಪ್ಯಾಕೇಟ್ ಗಳು ಪತ್ತೆಯಾಗಿದೆ. ಬಾಣಂತಿಯರಿಗೆ ಹಾಗೂ ಮಕ್ಕಳಿಗೆ ಸರ್ಕಾರ ನೀಡುತ್ತಿರುವ ಹಾಲಿನ ಪೌಡರ್ ಪ್ಯಾಕೆಟ್ ಗಳು ಇದೀಗ ಅಂಗಡಿಗಳಲ್ಲಿ ಸಿಗುತ್ತಿದೆ. ಅಪೌಷ್ಟಿಕತೆ ಹೋಗಲಾಡಿಸಲು ಸರ್ಕಾರ ನೀಡುತ್ತಿರುವ ಹಾಲಿನ ಪೌಡರ್ ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ವೈಎನ್ ಹೊಸಕೋಟೆ ಅಂಗಡಿಗಳಲ್ಲಿ ಹಾಲಿನ ಪೌಡರ್ ಮಾರಾಟ ಆಗ್ತಿದೆ. ಸುಮಾರು 8 ಅಂಗಡಿಗಳಲ್ಲಿ ಮಾರಾಟ ಆಗ್ತಿದೆ. ಅಂಗನವಾಡಿ ಕಾರ್ಯಕರ್ತೆಯರಿಂದಲೇ ಅಂಗಡಿಗಳಿಗೆ ಸರಬರಾಜು ಮಾಡಲಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳೇ ಪಾವಗಡದತ್ತ ಗಮನಿಸಿ. ಮಕ್ಕಳಿಗೆ ಬಾಣಂತಿಯರಿಗೆ ನೀಡುವ ಹಾಲಿನ ಪೌಡರ್ ಮಾರಾಟ ಮಾಡಲಾಗುತ್ತಿದೆ.
ಪಾವಗಡ ತಾಲ್ಲೂಕಿನಲ್ಲಿ ಅತಿಹೆಚ್ಚು ಅಪೌಷ್ಟಿಕತೆ ಇರುವ ಮಕ್ಕಳಿದ್ದು, ಸದ್ಯ ಸರ್ಕಾರದ ಯೋಜನೆಯ ಕ್ಷೀರ ಭಾಗ್ಯದ ಹಾಲಿನ ಪೌಡರ್ ಮಾರಾಟಕ್ಕಿಡಲಾಗಿರುವುದು ಬೆಳಕಿಗೆ ಬಂದಿದೆ.