ಕನ್ನಡದ ‘ಬಿಗ್ ಬಾಸ್ ಸೀಸನ್ 11’ರ ಆಟ ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಒಬ್ಬೊಬ್ಬರಾಗಿಯೇ ಮನೆಯಿಂದ ಹೊರ ಹೋಗುತ್ತಿದ್ದಾರೆ. ಈ ಮಧ್ಯೆ ಮಿಡ್ ವೀಕ್ ಎಲಿಮಿನೇಷನ್ ಪ್ರಕ್ರಿಯೆ ನೀಡಿ ಸ್ಪರ್ದಿಗಳಿಗೆ ಬಿಗ್ ಬಾಸ್ ಶಾಕ್ ನೀಡಿದ್ದಾರೆ. ದೊಡ್ಮನೆಯಿಂದ ಸ್ಟ್ರಾಂಗ್ ಸ್ಪರ್ಧಿಯೇ ಹೊರ ನಡೆದಿದ್ದಾರೆ ಎಂದು ಸುದ್ದಿ ಕೇಳಿ ಬಂದಿದೆ.
ಬಿಗ್ ಬಾಸ್ ಮನೆಯಲ್ಲಿ ಪ್ರಸ್ತುತ 10 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಉಗ್ರಂ ಮಂಜು, ರಜತ್, ತ್ರಿವಿಕ್ರಮ್, ಹನುಮಂತ, ಧನರಾಜ್, ಭವ್ಯಾ, ಮೋಕ್ಷಿತಾ, ಗೌತಮಿ, ಐಶ್ವರ್ಯಾ, ಚೈತ್ರಾ ಈ ಸ್ಪರ್ಧಿಗಳ ನಡುವೆ ಅಳಿವು ಮತ್ತು ಉಳಿವಿಗಾಗಿ ಜಟಾಪಟಿ ನಡೆಯುತ್ತಿದೆ. ಹೀಗಿರುವಾಗ ಇವರ ಪೈಕಿ ಒಬ್ಬರು ಮನೆಯಿಂದ ಹೊರನಡೆದಿದ್ದಾರೆ ಎನ್ನಲಾಗಿದೆ.
ಮಿಡ್ ವೀಕ್ ಎಲಿಮಿನೇಷನ್ ಬಗ್ಗೆ ಪರ ಮತ್ತು ವಿರೋಧದ ಚರ್ಚೆ ಶುರುವಾಗಿದ್ದು, ಫೈರ್ ಬ್ರ್ಯಾಂಡ್ ಚೈತ್ರಾ ಕುಂದಾಪುರ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ಬಿಗ್ ಬಾಸ್ ಸಂಚಿಕೆಯ ಮೂಲಕವೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ. ಚೈತ್ರಾ ಮನೆಯಿಂದ ಹೊರ ಹೋಗಿದ್ದು ಸಾಕಷ್ಟು ಮಂದಿಗೆ ಶಾಕ್ ಆಗಿದೆ.