ಮೈಕ್ರೋಸಾಫ್ಟ್ ನ ತಾಂತ್ರಿಕ ಸಮಸ್ಯೆ ಬೆನ್ನಲ್ಲೇ ಭಾರತದ ಕಂಪ್ಯೂಟರ್ ಎಮರ್ಜನ್ಸಿ ರೆಸ್ಪಾನ್ಸ್ ಟೀಮ್(ಸಿಇಆರ್ಟಿ) ಮಾರ್ಗಸೂಚಿ ಬಿಡುಗಡೆ ಮಾಡಿದೆ. ಫಾಲ್ಕನ್ ಸೆನ್ಸಾರ್ನ ವಿಂಡೋಸ್ ಸಿಸ್ಟಂಗಲಿಗೆ ಅಪ್ ಡೇಟ್ ನೀಡಿದ್ದರಿಂದ ಈ ಸಮಸ್ಯೆ ಕಾಣಿಸಿಕೊಂಡಿದೆ.
ಸಿಸ್ಟಂ ಸಮಸ್ಯೆ ಮುಂದುವರಿದಿದ್ದಲ್ಲಿ ಈ ಕೆಳಗಿನ ಕ್ರಮಗಳಿಂದ ಬಗೆಹರಿಸಬಹುದು ಎಂದು ಭಾರತದ ಕಂಪ್ಯೂಟರ್ ಎಮರ್ಜನ್ಸಿ ರೆಸ್ಪಾನ್ಸ್ ಟೀಮ್ ಮಾಹಿತಿ ನೀಡಿದೆ.
- ವಿಂಡೋಸ್ ಅನ್ನು ಸೇಫ್ ಮೋಡ್ನಲ್ಲಿ ಅಥವಾ ವಿಂಡೋಸ್ ರಿಕವರಿ ಎನ್ವಿರಾನ್ಮೆಂಟ್ನನಲ್ಲಿ ಬೂಟ್ ಮಾಡಿ
2. C:\Windowsystem32\drivers\CrowdStrike directory ಗೆ ಭೇಟಿ ನೀಡಿ
3. C-00000291*.sys. ಫೈಲ್ ಡಿಲೀಟ್ ಮಾಡಿ
4. ಸಿಸ್ಟಂ ಅನ್ನು ಒಮ್ಮೆ ರೀಬೂಟ್ ಮಾಡಿ.
ಟೈಕ್ ದೈತ್ಯ ಮೈಕ್ರೋಸಾಫ್ಟ್ ಕಂಪನಿ ಭಾರೀ ನಷ್ಟ ಅನುಭವಿಸಿದೆ. ಮೈಕ್ರೋಸಾಫ್ಟ್ ತಾಂತ್ರಿಕ ತೊಂದರೆಯು ವಿವಿಧ ವಲಯಗಳ ವ್ಯವಹಾರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದ್ದಂತೆ ಶೇರ್ ಪೇಟೆಯಲ್ಲಿ ಕುಸಿತ ಕಂಡಿದೆ. ಪರಿಣಾಮ 23 ಬಿಲಿಯನ್ ಡಾಲರ್(ಅಂದಾಜು 1.90 ಲಕ್ಷ ಕೋಟಿ ರೂ.) ನಷ್ಟವಾಗಿದೆ.