ತುಮಕೂರು: ಮೈಕ್ರೋ ಫೈನಾನ್ಸ್ ನವರು ಗೈಡ್ ಲೈನ್ಸ್ ಉಲ್ಲಂಘನೆ ಮಾಡಿ ತಪ್ಪು ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು, ಸಂತ್ರಸ್ತರು ದೂರು ಕೊಟ್ಟರೆ ನಾವು ಕ್ರಮ ಕೈಗೊಳ್ಳುತ್ತೇವೆ. ಸಾಕಷ್ಟು ಕ್ರಮ ಈಗಾಗಲೇ ಕೈಗೊಂಡಿದ್ದೇವೆ.
ಇದನ್ನು ತಡೆಯೋಕೆ ಕ್ರಮ ಕೈಗೊಳ್ಳುತ್ತೇವೆ. ಮೈಕ್ರೋ ಫೈನಾನ್ಸ್ ನವರು ಗೈಡ್ ಲೈನ್ಸ್ ಉಲ್ಲಂಘನೆ ಮಾಡಿ ತಪ್ಪು ಮಾಡುತ್ತಿದ್ದಾರೆ. ಲೈಸೆನ್ಸ್ ಇಲ್ಲದವರ ಬಗ್ಗೆ ಹಣಕಾಸು ಇಲಾಖೆ ಸರ್ವೆ ಮಾಡಬೇಕು ಎಂದರು.
ಚಳಿಗಾಲದಲ್ಲಿ ಬಾಳೆಹಣ್ಣು ತಿನ್ನಬಹುದೇ..? ತಿಂದ್ರೆ ಏನಾಗುತ್ತದೆ.? ಇಲ್ಲಿದೆ ನೋಡಿ ಮಾಹಿತಿ
ಖರ್ಗೆ ಅವರು ತ್ಯಾಗ ಮಾಡೋ ಮನೋಭಾವ ಬಗ್ಗೆ ಹೇಳಿದ ಮಾತು ಅರ್ಥ ಆಗಿಲ್ಲ. ಯಾವ ಅರ್ಥದಲ್ಲಿ ಹೇಳಿದ್ದಾರೋ ನನಗೆ ಗೊತ್ತಿಲ್ಲ. ಕಾಂಗ್ರೆಸ್ ನವರು ಸ್ವಾತಂತ್ರ್ಯ ಹೋರಾಟದಲ್ಲಿ ತ್ಯಾಗ ಮಾಡಿದ್ದಾರೆ.
ಅಂತಹ ತ್ಯಾಗ ಬಲಿದಾನ ಈಗಿನ ಆಧುನಿಕ ಸಮಾಜದಲ್ಲಿ ಕಡಿಮೆಯಾಗಿದೆ ಎಂಬ ಅರ್ಥದಲ್ಲಿ ಹೇಳಿರಬಹುದು. ಕಾಂಗ್ರೆಸ್ ನಲ್ಲಿ ಮಾತ್ರ ತ್ಯಾಗ ಕಡಿಮೆ ಆಗಿಲ್ಲ. ಇಡೀ ಸಮಾಜದಲ್ಲಿ ತ್ಯಾಗ ಮನೋಭಾವ ಕಡಿಮೆ ಆಗಿದೆ. ಅದರಲ್ಲೂ ಸ್ವಾಭಾವಿಕವಾಗಿ ಕಾಂಗ್ರೆಸ್ ನಲ್ಲೂ ತ್ಯಾಗ ಮನೋಭಾವ ಕಡಿಮೆ ಆಗಿದೆ ಎಂದರು.