ತುಮಕೂರು : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಮತ್ತು ಬಡ್ಡಿದಂಧೆ ಕೋರರಿಗೆ ಕಡಿವಾಣ ಹಾಕಲು ಸರ್ಕಾರ ಸುಗ್ರೀವಾಜ್ಞೆಗೆ ತರಲಾಗಿದೆ. ಆದರೂ ಕೂಡ ಈ ಕಿರುಕುಳಗಳು ಮಾತ್ರ ನಿಲ್ತಾನೇ ಇಲ್ಲ. ಇದೀಗ ತುಮಕೂರು ಜಿಲ್ಲೆಯಲ್ಲಿ ಮೈಕ್ರೋಫೈನಾನ್ಸ್, ಬಡ್ಡಿದಂಧೆಕೋರರ ಕಿರುಕುಳಕ್ಕೆ ಮತ್ತೆರಡು ಬಲಿಯಾಗಿದೆ.
ತುಮಕೂರು ನಗರದ ಬಟವಾಡಿಯಲ್ಲಿ ವಿಡಿಯೋ ಮಾಡಿಟ್ಟು ವಿಷ ಸೇವಿಸಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಟವಾಡಿಯ ಮಹಾಲಕ್ಷ್ಮಿನಗರದ ವಾಸಿ ಅಂಜನಮೂರ್ತಿ(35) ಸಾವನ್ನಪ್ಪಿದ್ದಾರೆ. ಆಟೋ ಚಾಲಾಕನಾಗಿದ್ದ ಅಂಜನಮೂರ್ತಿ ವಿವಿಧೆಡೆ ಬಡ್ಡಿಗೆ ಸುಮಾರು 5ಲಕ್ಷ ಸಾಲ ಪಡೆದಿದ್ದರು. ಬಡ್ಡಿಗಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ವಿಡಿಯೋದಲ್ಲಿ ಅಳಲು ತೋಡಿಕೊಂಡಿದ್ದು, ನನ್ನ ಕುಟುಂಬಕ್ಕೆ ರಕ್ಷಣೆ ನೀಡುವಂತೆ ವಿಡಿಯೋದಲ್ಲಿ ಮನವಿ ಮಾಡಿದ್ದಾರೆ. ಈ ಸಂಬಂಧ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕನ್ನಡ ಮಾತನಾಡು ಅಂದಿದ್ದಕ್ಕೆ ಹಲ್ಲೆ ಪ್ರಕರಣಕ್ಕೆ ಟಿಸ್ಟ್ ; ಕಂಡಕ್ಟರ್ ಮೇಲೆ ಕೇಸ್..?
ಇನ್ನೊಂದೆಡೆ ಮೈಕ್ರೋ ಫೈನಾನ್ಸ್ ಗಳ ಕಿರುಕುಳದಿಂದ ಬೇಸತ್ತು ಮಹಿಳೆ ನೇಣಿಗೆ ಶರಣಾಗಿದ್ದಾರೆ. ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಕೊತ್ತಿಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಮೃತ ಮಹಿಳೆ ಅಜೀಜ್ ಉನ್ನಿಸಾ (50) , ಮುತ್ತೂಟ್ ಫೈನಾನ್ಸ್, ಗ್ರಾಮೀಣಕೂಟ, ಐಡಿಎಫ್ ಸಿ, ಬಂಧನ್, ಆರ್ ಬಿಎಲ್, ಆಶೀರ್ವಾದ್, ಧರ್ಮಸ್ಥಳ ಸಂಘ, ಸೂರ್ಯೋದಯ, ಗ್ರಾಮ ಶಕ್ತಿ, ಬಜಾಜ್ ಫೈನಾನ್ಸ್ ಗಳಲ್ಲಿ ಒಟ್ಟು 12 ಲಕ್ಷ ಸಾಲ ಮಾಡಿದ್ದರು ಎನ್ನಲಾಗಿದೆ. ಕಳೆದ ಎರಡು ತಿಂಗಳಿಂದ ಹಣ ಕಟ್ಟಿರಲಿಲ್ಲ. ಮನೆ ಬಾಗಿಲಿಗೆ ಬಂದು ಹಣ ಕಟ್ಟುವಂತೆ ನಿಂದಿಸುತ್ತಿದ್ದರೆಂದು ಎಂದು ಮೃತಳ ಪುತ್ರ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.