ಬೆಂಗಳೂರು: ರಾಜ್ಯದಲ್ಲಿ ಬಡ ಮತ್ತು ಮಧ್ಯಮವರ್ಗದವರ ಮೇಲೆ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳ ಹೆಚ್ಚಾಗಿದೆ. ಅದರಲ್ಲೂ ಸಿಎಂ ಅವರ ತವರು ಜಿಲ್ಲೆ ಮೈಸೂರು, ಡಿಸಿಎಂ ತವರು ರಾಮನಗರ, ಚಾಮರಾಜನಗರ, ಬೆಳಗಾವಿ, ರಾಣೇಬೆನ್ನರು , ರಾಮನಗರ ಜಿಲ್ಲೆಗಳಲ್ಲಿ ಈ ಮೈಕ್ರೋ ಫೈನಾನ್ಸ್ ಗಳ ಕಿರುಕುಳಕ್ಕೆ ಇಡೀ ಊರಿಗೇ ಊರೇ ಖಾಲಿಯಾಗಿದೆ ಎಂದರೆ ನೀವೇ ಊಹಿಸಬಹುದು..
ಅಷ್ಟೇ ಅಲ್ಲದೇ ರಾಮನಗರದ ತಿಮ್ಮಯ್ಯನದೊಡ್ಡಿಯಲ್ಲಿ ಮೈಕ್ರೋ ಫೈನಾನ್ಸ್ ಕಂಪೆನಿಯ ಮ್ಯಾನೇಜರ್ ಕಿರುಕುಳಕ್ಕೆ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಮೈಕ್ರೋ ಫೈನಾನ್ಸ್ ಗಳ ಕಿರುಕುಳದ ಜೊತೆಗೆ ಮೀಟರ್ ಬಡ್ಡಿ ದಂಧೆಕೋರರ ದಂಧೆಯೂ ಸಹ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ.. ಹೀಗಾಗಿ ಮೈಕ್ರೋ ಫೈನಾನ್ಸ್ ಮತ್ತು ಬಡ್ಡಿದಂಧೆಕೋರರ ನಿಯಂತ್ರಣಕ್ಕೆ ಸರ್ಕಾರ ಮುಂದಾಗಿದೆ.. ಬಡವರ ರಕ್ತ ಹೀರುವ ಇಂತವರ ವಿರುದ್ದ ಕಠಿಣ ಕ್ರಮಕ್ಕೆ ಹೊಸ ಕಾಯ್ದೆಯನ್ನು ಜಾರಿಗೊಳಿಸಲು ಮುಂದಾಗಿದೆ.
ಮೈಕ್ರೋ ಫೈನಾನ್ಸ್ ಸಂಸ್ಥೆಗಳ ದಂಧೆ ಹಾಗೂ ಮೀಟರ್ ಬಡ್ಡಿ ಮಾಫಿಯಾಕ್ಕೆ ಕಡಿವಾಣ ಹಾಕಲು ನೂತನ ಕಾಯ್ದೆ ಜಾರಿಗೆ ತರಲು ನಿರ್ಧರಿಸಲಾಗಿದೆ. ಮುಂದಿನ ಅಧಿವೇಶನದಲ್ಲಿಯೇ ವಿಧೇಯಕ ಮಂಡಿಸಲಾಗುವುದು. ಬಡವರ, ಮಧ್ಯಮ ವರ್ಗದ ಹಿತ ಕಾಯುವುದು ನಮ್ಮ ಸರ್ಕಾರದ ಕರ್ತವ್ಯ ಎಂದು ಕಾನೂನು ಸಚಿವರಾದ ಎಚ್.ಕೆ.ಪಾಟೀಲ್ ಮಾಹಿತಿ ನೀಡಿದ್ಧಾರೆ.
ಹಾಗಾದಾರೆ ಕಾಯ್ದೆಯಲ್ಲಿ ಏನಿರಬಹುದು ಅನ್ನೋದನ್ನು ನೋಡೋದಾದರೆ
- ನಿಗದಿತ ಬಡ್ಡಿದರಕ್ಕಿಂತ ಹೆಚ್ಚಿನ ಬಡ್ಡಿ ಹಾಕುವಂತಿಲ್ಲ
- ವಸೂಲಾತಿ ವೇಳೆ ಕಿರುಕುಳ ನೀಡಿದರೇ ಕನಿಷ್ಟ 10 ವರ್ಷ ಜೈಲು ಮತ್ತು ದಂಡ
- ಮೀಟರ್ ಬಡ್ಡಿ ವಿಧಿಸಿ ಯಾರಿಗೂ ಕೂಡ ಕಿರುಕುಳ ನೀಡುವಂತಿಲ್ಲ
- ಖಾಸಗಿ ಹಣಕಾಸು ಸಂಸ್ಥೆಗಳು ಸಹ ಕಾನೂನು ವ್ಯಾಪ್ತಿಗೆ ಬರಲಿವೆ
ಹಣಕಾಸು ನಡೆಸುವ ಪ್ರತಿ ಸಂಸ್ಥೆಗೂ ಈ ಕಾನೂನುಗಳು ಅನ್ವಯ” ವಾಗಲಿವೆ. ಹೀಗೆ ಹಲವು ಅಂಶಗಳು ಹೊಸ ಕಾಯ್ದೆ ಯಲ್ಲಿ ಇರಲಿವೆ ಎನ್ನಲಾಗ್ತಿದೆ. ಒಟ್ನಲ್ಲಿ ಖಾಸಗಿ ಹಣಕಾಸು ಸಂಸ್ಥೇಗಳ ಮೇಲೆ ಸರ್ಕಾರ ಕಡಿವಾಣ ಹಾಕೋಕೆ ಮುಂದಾಗಿದೆ. ಈ ಹೊಸ ಕಾಯ್ದೆಗೆ ಮುಂದಿನ ಅಧಿವೇಶನದಲ್ಲಿ ಅನುಮೋದನೆ ನೀಡಲು ನಿರ್ಧಿರಿಸಿದೆ.. ಇನ್ನಾದರೂ ಬಡ ಮತ್ತ್ ಮಧ್ಯಮವರ್ಗದವರು ಈ ಕಿರಕುಳದಿಂದ ಮುಕ್ತರಾಗುವರೇ ಕಾದು ನೋಡಬೇಕು..