ಧಾರವಾಡ : ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ವಿಚಾರವಾಗಿ ಫೈನಾನ್ಸ್ ಸಂಸ್ಥೆಗಳಿಗೆ ಸಚಿವ ಸಂತೋಷ್ ಲಾಡ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವ್ರು, ಫೈನಾನ್ಸ್ ದೌರ್ಜನ್ಯಗಳು ಗಮನಕ್ಕೆ ಬಂದಿವೆ. ಪೊಲೀಸರಿಗೆ ಈಗಾಗಲೇ ತಾಕೀತು ಮಾಡಿದ್ದೇನೆ. ಬಂದಿರುವ ದೂರುಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಒತ್ತಡ ಹಾಕೋದು, ಬ್ಲ್ಯಾಕ್ಮೇಲ್ ಮಾಡೋದು ಕಂಡು ಬರ್ತಾ ಇದೆ. ರೌಡಿಗಳನ್ನು ಕಳುಹಿಸಿ ತೊಂದರೆ ಕೊಡುತ್ತಿದ್ದಾರೆ. ಫೈನಾನ್ಸ್ ಗ್ರೂಪ್, ಫೈನಾನ್ಸರ್ಗಳಿಗೆ ತಾಕೀತು ಮಾಡುತ್ತೇನೆ. ಈ ರೀತಿ ಮುಂದುವರೆದರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ. ಇದು ಫೈನಾನ್ಸ್ ನವರಿಗೆ ಕೊಡುವ ಎಚ್ಚರಿಕೆ ಎಂದರು. ಒಳ ಒಪ್ಪಂದ ಮಾಡಿಕೊಂಡು ಸಾಲ ಪಡೆಯುತ್ತಾರೆ. ಹೀಗಾಗಿ ಜಿಲ್ಲೆಯ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ವೈಯಕ್ತಿಕ ವ್ಯವಹಾರದಲ್ಲಿ ದುಡ್ಡು ತೆಗೆದುಕೊಂಡಿರುತ್ತಾರೆ. ದೂರು ದಾಖಲಾದಾಗ ಮಾತ್ರ ನಮಗೆ ತಿಳಿಯುತ್ತದೆ ಲೈನ್ಸನ್ ಇದ್ದರೂ ಸಾಲ ಕೊಟ್ಟ ಮಾಹಿತಿ ಇಲ್ಲ. ಆದರೆ ಅಮಾನವೀಯವಾಗಿ ವರ್ತಿಸಿದರೆ ಬಿಡೋದಿಲ್ಲ ಎಂದರು.
ಹಣ ಕಟ್ಟೋದು ತಡವಾದರೆ ಮನೆಗೆ ಬಂದು ಠಿಕಾಣಿ : ಮೈಕ್ರೋ ಫೈನಾನ್ಸ್ ಸಿಬ್ಬಂದಿ ಹಾವಳಿ
ಅರವಟಗಿಯಲ್ಲಿ ಗರ್ಭಿಣಿ ಹೊರ ಹಾಕಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಕೋರ್ಟ್ ನಿಂದ ಆದೇಶ ತಂದು ಸೀಜ್ ಮಾಡಿರುತ್ತಾರೆ. ಆದರೆ ಅಮಾನವೀಯವಾಗಿ ವರ್ತಿಸಿದರೇ ಸುಮ್ಮನೆ ಬಿಡೋದಿಲ್ಲ. ಕೋರ್ಟ್ ಆದೇಶವಿದ್ದಲ್ಲಿ ನಾವು ಡೈರೆಕ್ಟ್ ಪ್ರವೇಶಿಸಲು ಆಗುವುದಿಲ್ಲ. ಮಾಹಿತಿ ಪಡೆದು ನೋಡುತ್ತೇವೆ. ನಮ್ಮಲ್ಲಿ ಅನೇಕ ಇಂತಹುಗಳು ನಡೆಯುತ್ತಿವೆ. ಫೈನಾನ್ಸ್ ಕಂಪನಿಗಳು ಸಾಲ ಕೊಟ್ಟಿರೋದು ಮಾಹಿತಿ ಪಡೆಯುತ್ತೇವೆ ಎಂದರು.
ಇನ್ನೂ ಬಿಜೆಪಿ ನಾಯಕ ಶ್ರೀರಾಮುಲು ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಸ್ವಾಗತಿಸುತ್ತೇನೆ. ಅವರ ಮೇಲೆ ನನಗೆ ಪ್ರೀತಿ ಇದೆ. ರಾಮುಲು ಅವರು ಬಿಜೆಪಿ ಪಕ್ಷವನ್ನ ಕಟ್ಟಿದ್ದಾರೆ. ಬಳ್ಳಾರಿ ಜಿಲ್ಲೆಯ ಎಲ್ಲ ಶಾಸಕರನ್ನ ಕೇಳಿ ಅವರ ಅಭಿಪ್ರಾಯವನ್ನ ಕೇಳಬೇಕು. ಅದಕ್ಕೆ ಸಿಎಂ ಎನ್ ಪ್ರತಿಕ್ರಿಯೇ ಕೊಡ್ತಾರೆ ಕಾಯ್ದು ನೋಡಬೇಕು ಎಂದರು.