ತುಮಕೂರು : ತುಮಕೂರಿನಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ಮಾತ್ರ ನಿಲ್ಲೋ ಥರ ಕಾಣ್ತಿಲ್ಲ. ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ಮಹಿಳೆ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಅಲ್ಲಾಳಸಂದ್ರ ಹನುಮಂತಪುರದಲ್ಲಿ ಘಟನೆ ನಡೆದಿದೆ. ಮಂಗಳಮ್ಮ(45) ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ.
ಒಂದು ವರ್ಷ ಹಿಂದೆ ಹೋಟೆಲ್ ಮಾಡಲು ಸಾ ಗ್ರಾಮೀಣ ಕೂಟದಲ್ಲಿ 2 ಲಕ್ಷ ಸಾಲ ಪಡೆದಿದ್ದ ಮಂಗಳಮ್ಮ, ಎಲ್.ಎನ್ ಟಿ ಫೈನಾನ್ಸ್ ನಲ್ಲಿ 70 ಸಾವಿರ ಹಾಗೂ ಆಶೀರ್ವಾದ ಫೈನಾನ್ಸ್ ನಲ್ಲಿ 80 ಸಾವಿರ ಸಾಲ ಪಡೆದಿದ್ರು. ಹೋಟೆಲ್ ಲಾಸ್ ಆದ ಬಳಿಕ ದಿನಗೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಈಗಾಗ್ಲೇ ಗ್ರಾಮೀಣ ಕೂಟದಲ್ಲಿ 40 ಕಂತು ಕಟ್ಟಿದ್ದಾರೆ. ಇನ್ನೂ ಸಹ 42 ಕಂತು ಹಣ ಬಾಕಿ ಕಟ್ಟಬೇಕಿದ್ದು, ಇಂದು ಗ್ರಾಮೀಣ ಕೂಟಕ್ಕೆ ಸಾಲದ ಕಂತು ಕೊಡಬೇಕಾಗಿತ್ತು. ಮೈಕ್ರೋ ಫೈನಾನ್ಸ್ ಸಿಬ್ಬಂದಿ ಎರಡು ದಿನದಿಂದ ಮನೆ ಮುಂದೆ ಗಲಾಟೆ ಮಾಡಿದ್ದರು. ಹೀಗಾಗಿ ಸಾಲದವರು ಮನೆಗೆ ಬರುವ ಮೊದಲೇ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಮಂಗಳಮ್ಮಗೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.