ಬಿಗ್ ಬಾಸ್ ಮನೆಗೆ (Bigg Boss Kannada 10) ಕಾಲಿಟ್ಟಾಗ ಮೈಕಲ್ ಅಜಯ್ಗೆ (Michael Ajay) ಸರಿಯಾಗಿ ಕನ್ನಡ ಬರುತ್ತಿರಲಿಲ್ಲ. ದೊಡ್ಮನೆಗೆ ಬಂದ ಮೇಲೆಯೇ ಮೈಕಲ್ ಕನ್ನಡ ಕಲಿತು ಕನ್ನಡಿಗರ ಮೆಚ್ಚುಗೆಗೆ ಪಾತ್ರರಾದರು. ಮೈಕಲ್ ನಡೆಗೆ ಕನ್ನಡದ ಮಣ್ಣಿನ ಮಗ ಎಂದೇ ಹೈಲೆಟ್ ಆದರು. ಆದರೆ ಈಗ ಮೈಕಲ್ ವರ್ತನೆ ಬದಲಾಗಿದೆ. ಎಲ್ಲದ್ದಕ್ಕೂ ಡೋಂಟ್ ಕೇರ್ ಅನ್ನುವ ಗುಣ ಅವರದ್ದಾಗಿದೆ. ಬಿಗ್ ಬಾಸ್ ರೂಲ್ಸ್ ವಿರುದ್ಧ ಮೈಕಲ್ ನಡೆದುಕೊಂಡಿದ್ದಾರೆ. ಪ್ರಶ್ನಿಸಿದ ಕ್ಯಾಪ್ಟನ್ ತನಿಷಾ (Tanisha Kuppanda) ಜೊತೆ ವಾಗ್ವಾದ ಮಾಡಿದ್ದಾರೆ
ಬಿಗ್ ಬಾಸ್ ರೂಲ್ಸ್ ಬ್ರೇಕ್ ಮಾಡಿದ್ದಕ್ಕೆ ಮೈಕಲ್- ವಿನಯ್ಗೆ ಶಿಕ್ಷೆ ನೀಡಲು ಮುಂದಾ ತನಿಷಾ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ. ಹೊರಗೆ ಕುಳಿತು ವಿನಯ್ ಗೌಡ- ಮೈಕಲ್ ನಿದ್ರಿಸುತ್ತಿದ್ದರು. ಈ ಕಾರಣಕ್ಕೆ ಬಿಗ್ ಬಾಸ್ ನಾಯಿ ಬೊಗಳುವ ಸೌಂಡ್ ಹಾಕಿದರು. ಈ ವಾರದ ಕ್ಯಾಪ್ಟನ್ ತನಿಷಾ ಅವರು ಶಿಕ್ಷೆ ನೀಡಲು ಬಂದರು. ನಿದ್ದೆ ಮಾಡಿದ್ದಕ್ಕೆ ಮೂರು ಬಾರಿ ಸ್ವಿಮಿಂಗ್ ಪೂಲ್ನಲ್ಲಿ ಮುಳುಗೆದ್ದು ಬನ್ನಿ ಎಂದರು. ಇದಕ್ಕೆ ಮೈಕಲ್ ಹಾಗೂ ವಿನಯ್ ಮಾಡಲ್ಲ ಹೋಗು ಎಂದರು. ಕ್ಯಾಪ್ಟನ್ ಆದಾಗ ನೇರವಾಗಿ ನಾಮಿನೇಟ್ ಮಾಡುವ ಅವಕಾಶ ಸಿಗುತ್ತದೆ. ಆಗ ನನ್ನ ನಾಮಿನೇಟ್ ಮಾಡಿ ಎಂದು ದುರಹಂಕಾರ ಮೈಕಲ್ ತೋರಿದರು. ಇನ್ನೊಂದು ಸ್ವಲ್ಪ ಹೊತ್ತು ಮಲಗಿ ಮನೆಯ ಪರಿಸ್ಥಿತಿಯನ್ನು ಹಾಳು ಮಾಡೋಣ ಎಂದು ದರ್ಪದಿಂದ ಹೇಳಿಕೊಂಡರು ಮೈಕಲ್.
ಅಡುಗೆ ಮಾಡಲು ಪಾತ್ರೆಗಳನ್ನು ತೊಳೆದಿರಲಿಲ್ಲ. ಇದನ್ನು ಮಾಡುವ ಕೆಲಸ ಮೈಕಲ್ ಅವರದ್ದಾಗಿತ್ತು. ಆದರೆ, ತನಿಷಾ ಅವರು ಪದೇ ಪದೇ ಬಂದು ಮನವಿ ಮಾಡಿಕೊಂಡರೂ ಪಾತ್ರೆ ತೊಳೆಯಲು ಅವರು ಮುಂದಾಗಲೇ ಇಲ್ಲ. ಕೊನೆಗೂ ಅವರು ಸಿಂಕ್ ಬಳಿ ಬಂದು ನಿಧಾನಕ್ಕೆ ಪಾತ್ರೆ ತೊಳೆಯಲು ಆರಂಭಿಸಿದರು. ನನ್ನಿಷ್ಟ ಬಂದಾಗ ಮಾಡ್ತೀನಿ. ಇದೆಲ್ಲ ಮಾಡಬೇಕು ಎಂದು ಎಲ್ಲಿ ಬರೆದಿದೆ. ನನಗೆ ಮಾಡೋಕೆ ಇಷ್ಟವೇ ಇಲ್ಲ ಎಂದರು ಮೈಕಲ್. ಮಲಗಿದ್ದಕ್ಕೆ ನಿಮಗೆ ಶಿಕ್ಷೆ ನೀಡಿದೆ. ಅದನ್ನು ಮಾಡದೇ ನೀವು ದುರಹಂಕಾರ ತೋರಿಸಿದಿರಿ. ಅದಕ್ಕೆ ನಾನೇನು ಮಾಡೋಕೆ ಆಗಲ್ಲ. ನೀವು ನಿದ್ದೆ ಮಾಡ್ತಾ ಇದ್ರೆ ಇನ್ನಷ್ಟು ನಿದ್ದೆ ಮಾಡಿ ಎಂದು ಹೇಳಬೇಕಾ ಎಂದು ತನಿಷಾ ಪ್ರಶ್ನಿಸಿದರು.