ಮುಂಬೈ: ಪ್ಲೇ-ಆಫ್ ರೇಸ್ನಿಂದ ಹೊರಬಿದ್ದಿರುವ ಮುಂಬೈ ಇಂಡಿಯನ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ಮುಖಾಮುಖಿಯಾಗಲಿವೆ. ಇತ್ತಂಡಕ್ಕೂ ಇದು ಕೊನೆ ಪಂದ್ಯವಾಗಿದ್ದು, ಗೆಲುವಿನೊಂದಿಗೆ ಗುಡ್ಬೈ ಹೇಳಲು ಕಾತರಿಸುತ್ತಿದೆ. ಈ ಪಂದ್ಯಕ್ಕೆ ಇಲ್ಲಿನ ವಾಂಖೇಡೆ ಮೈದಾನ ಆತಿಥ್ಯ ವಹಿಸುವ ಸಾಧ್ಯತೆಯಿದೆ.
ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ 13 ಪಂದ್ಯಗಳಲ್ಲಿ 4ರಲ್ಲಿ ಗೆದ್ದಿದ್ದು, 8 ಅಂಕ ಸಂಪಾದಿಸಿದೆ. ತಂಡ ಈ ಪಂದ್ಯ ದಲ್ಲಿ ಗೆದ್ದರೆ ಕೊನೆ ಸ್ಥಾನ ದಿಂದ ಮೇಲೇರುವ ಸಾಧ್ಯತೆಗಳಿವೆ. ಮುಂಬರುವ ಟಿ20 ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ.
![Demo](https://ainlivenews.com/wp-content/uploads/2023/12/spoorthi-1.jpg)
ಅತ್ತ ಕೆ ಎಲ್ ರಾಹುಲ್ ನೇತೃತ್ವದ ಲಖನೌ ಸೂಪರ್ ಜೈಂಟ್ಸ್ 13ರಲ್ಲಿ 6 ಪಂದ್ಯ ಗೆದ್ದಿದ್ದು, 12 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿದೆ. ತಂಡ ಪ್ಲೇ-ಆಫ್ನಿಂದ ಅಧಿಕೃತವಾಗಿ ಹೊರಬೀಳಲಿದ್ದರೂ, ಕಳಪೆ ನೆಟ್ ರನ್ರೇಟ್ (-0.787) ಹೊ೦ದಿರುವ ಕಾರಣ ನಾಕೌಟ್ಗೇರುವ ಸಾಧ್ಯತೆಯಿಲ್ಲ.
ಇಂದಿನ ಪಂದ್ಯದಲ್ಲಿ ಯಾವ ತಂಡ ಗೆದ್ದರೂ ಅಥವಾ ಸೋತರೂ ಆರ್ಸಿಬಿಗೆ ಯಾವುದೇ ಲಾಭವಿಲ್ಲ. ಲಕ್ನೋ ಮತ್ತು ಆರ್ಸಿಬಿ ತಲಾ 12 ಅಂಕ ಪಡೆದುಕೊಂಡಿದೆಯಾದರೂ ರನ್ರೇಟ್ನಲ್ಲಿ ಬೆಂಗಳೂರು ತುಂಬಾ ಮುಂದಿದೆ. ಹೀಗಾಗಿ ಫಾಫ್ ಪಡೆಗೆ ಈ ಪಂದ್ಯ ಮಹತ್ವದ್ದಲ್ಲ. ಮೇ 18 ರಂದು ನಡೆಯಲಿರುವ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಹಿಂದಿಕ್ಕಿ ಆರ್ಸಿಬಿ ಪ್ಲೇಆಫ್ ಪ್ರವೇಶಿಸಲು ಎದುರು ನೋಡುತ್ತಿದೆ.
ಒಂದು ವೇಳೆ ಆರ್ಸಿಬಿ ಚೆನ್ನೈ ವಿರುದ್ಧ ಮೊದಲು ಬ್ಯಾಟ್ ಮಾಡಿದರೆ ಕನಿಷ್ಠ 18 ರನ್ಗಳಿಂದ ಪಂದ್ಯವನ್ನು ಗೆಲ್ಲಬೇಕಾಗುತ್ತದೆ. ಮೊದಲು ಬೌಲಿಂಗ್ ಮಾಡಿದರೆ 11 ಎಸೆತಗಳು ಬಾಕಿ ಇರುವಂತೆಯೇ ಪಂದ್ಯ ಗೆಲ್ಲಬೇಕು. ಹೀಗಾದಲ್ಲಿ ಮಾತ್ರ ಆರ್ಸಿಬಿ ಪ್ಲೇಆಫ್ ಟಿಕೆಟ್ ಪಡೆಯಲಿದೆ.
ಉಭಯ ತಂಡಗಳ ಆಟಗಾರರ ಪಟ್ಟಿ ಹೀಗಿದೆ:
ಮುಂಬೈ ಇಂಡಿಯನ್ಸ್:
ಇಶಾನ್ ಕಿಶನ್(ವಿಕೆಟ್ ಕೀಪರ್), ರೋಹಿತ್ ಶರ್ಮಾ, ನಮನ್ ಧೀರ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ(ನಾಯಕ), ನೆಹಾಲ್ ವದೇರಾ, ಟಿಮ್ ಡೇವಿಡ್, ಮೊಹಮದ್ ನಬಿ, ಗೆರಾಲ್ಡ್ ಕೋಟ್ಜೀ, ಪೀಯೂಸ್ ಚಾವ್ಲಾ.
ಲಖನೌ ಸೂಪರ್ ಜೈಂಟ್ಸ್:
ಕೆ ಎಲ್ ರಾಹುಲ್(ನಾಯಕ), ಕ್ವಿಂಟನ್ ಡಿ ಕಾಕ್(ವಿಕೆಟ್ ಕೀಪರ್), ಮಾರ್ಕಸ್ ಸ್ಟೋಯ್ನಿಸ್, ದೀಪಕ್ ಹೂಡಾ, ನಿಕೋಲಸ್ ಪೂರನ್, ಕೃನಾಲ್ ಪಾಂಡ್ಯ, ಆಯುಷ್ ಬದೋನಿ, ಆರ್ಶದ್ ಖಾನ್, ರವಿ ಬಿಷ್ಣೋಯಿ, ನವೀನ್ ಉಲ್ ಹಕ್, ಯದ್ವೀರ್ ಸಿಂಗ್.
![](https://ainlivenews.com/wp-content/uploads/2024/01/Ad-Banner-copy-scaled.jpg)