ಬೆಂಗಳೂರು: ಪ್ರತಿವರ್ಷದಂತೆ ಈ ವರ್ಷವೂ ಕೂಡ ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರತಿಷ್ಟಿತ ಎಂಜಿ ರೋಡ್ , ಬ್ರಿಗೇಡ್ ರೋಡ್ ಮತ್ತು ಕಮರ್ಶಿಯಲ್ ಸ್ಟ್ರೀಟ್ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ರಸ್ತೆಉದ್ದಕ್ಕೊ ಕಲರ್ ಪುಲ್ ದೀಪಾಲಂಕಾರ ಮಾಡಲಾಗಿದೆ. ಎಂಜಿ ರಸ್ತೆ ಎಂಟ್ರಿಯಿಂದ ಬ್ರಿಗೇಡ್ ರೋಡ್ ನ 400 ಮೀಟರ್ ವರೆಗೂ ಹೈ ಫೈ ಲೈಟಿಂಗ್ಸ್ ಗಳನ್ನು ಅಳವಡಿಸಲಾಗಿದ್ದು,
ಇದರಿಂದಾಗಿ ರಾಜಧಾನಿ ಬೆಂಗಳೂರಿನಲ್ಲಿ ಹೊಸವರ್ಷದ ಸೊಬಗು ಬಲು ಜೋರಾಗಿಯೇ ಕಾಣಿಸುತ್ತಿದೆ. ಇದರ ಜೊತೆಗೆ ಬಿಬಿಎಂಪಿ ಮತ್ತು ನಗರ ಪೊಲೀಸ್ ಇಲಾಖೆ ಯಿಂದ ಹೊಸ ವರ್ಷಕ್ಕೆ ಬೇಕಾದ ಎಲ್ಲಾ ಸಿದ್ದತೆಗಳನ್ನ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಹೊಸವರ್ಷದ ದಿನ ಯಾರಿಗೂ ಸಮಸ್ಯೆಯಾಗಬಾರದು ಎನ್ನುವ ಕಾರಣಕ್ಕೆ ಮುಂಜಾಗ್ರವಾಗಿ,
ಲಾಕ್ ಆಗುತ್ತಾ ರಾಜಧಾನಿ ಬೆಂಗಳೂರು – ಕನ್ನಡ ಸಂಘಟನೆಗಳು ಕೊಟ್ಟ ಎಚ್ಚರಿಕೆ ಏನು!?
ಸಿಸಿಟಿವಿ ಅಳವಡಿಕೆ ಜೊತೆಗೆ ಯಾವ್ಯಾವ ಪ್ಲೈ ಓವರ್ ಹಾಗೂ ರಸ್ತೆಗಳನ್ನ ಕ್ಲೋಸ್ ಮಾಡಬೇಕು ಪ್ಲಾನ್ ಮಾಡಿಕೊಂಡಿದ್ದು ಮಹಿಳಾ ಚೌಕಿ, ಬ್ಯಾರಿಕೇಟ್ ಅಳವಡಿಕೆ ಮಾಡಲಾಗಿದೆ. ಒಟ್ಟಿನಲ್ಲಿ2024ರ ವರ್ಷವನ್ನ ಅದ್ದೂರಿಯಿಂದ ಬರಮಾಡಿಕೊಳ್ಳಲು ಪ್ರತಿಷ್ಟಿತ ಎಂಜಿ ರಸ್ತೆ ಬ್ರಿಗೇಡ್ ರಸ್ತೆ ಸಜ್ಜಗಿದ್ದು, ಹೊಸ ವರ್ಷವನ್ನ ಅದ್ದೂರಿಯಿಂದ ಬರಮಾಡಿಕೊಳ್ಳಲು ಸಿಲಿಕಾನ್ ಸಿಟಿ ಜನರ ಕಾತುರರಾಗಿದ್ದಾರೆ…