ಬೆಂಗಳೂರು: ನಮ್ಮ ಮೆಟ್ರೋ ರೈಲು ಒಳಗಡೆ ವಿಶೇಷ ಚೇತನ ವ್ಯಕ್ತಿಯೊಬ್ಬ ಭಿಕ್ಷಾಟನೆ ಮಾಡಿರುವ ಘಟನೆ ನಡೆದಿದೆ. ಚಲ್ಲಘಟ್ಟದಿಂದ ವೈಟ್ ಫೀಲ್ಡ್ ಮಾರ್ಗದ ಮೆಟ್ರೋದಲ್ಲಿ ಪ್ರಯಾಣಿಕರಂತೆ ಬಂದ ವ್ಯಕ್ತಿ ಭಿಕ್ಷೆ ಬೇಡಿದ್ದಾನೆ.
Weight Loss: ತೂಕ ಇಳಿಕೆಗಾಗಿ ಉಪವಾಸ ಮಾಡ್ತಿರಾ..? ಹಾಗಾದ್ರೆ ಈ ಸಲಹೆಗಳ ಬಗ್ಗೆ ಗಮನಹರಿಸಿ!
ತನ್ನ ದೈಹಿಕ ಊನವನ್ನು ತೋರಿಸಿ ಭಿಕ್ಷಾಟನೆ ಮಾಡಿದ್ದನ್ನು ಕಂಡು ಪ್ರಯಾಣಿಕರು ದಂಗಾಗಿದ್ದಾರೆ. ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಟಿಕೆಟ್ ಪಡೆದು ಭಿಕ್ಷೆ ಬೇಡಿದ್ದು ಹಲವರ ಅಚ್ಚರಿಗೆ ಕಾರಣವಾಗಿದೆ. ಮೆಟ್ರೋ ರೈಲಿನಲ್ಲಿ ಭಿಕ್ಷೆ ಬೇಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.