ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನ್ಯೂ ಇಯರ್ ಪಾರ್ಟಿ ಸೆಲೆಬ್ರೆಷನ್ಗೆ ಕೌಂಟ್ಡೌನ್ ಶುರುವಾಗಿದೆ.. ಹಾಟ್ ಆಫ್ ದಿ ಟೌನ್ನಲ್ಲಿ ಲಕ್ಷಾಂತರ ಜನ ಪಾರ್ಟಿ ಮಾಡೊಕ್ಕೆ ಸೇರಲಿದ್ದಾರೆ.. ಪಾರ್ಟಿಗಾಗಿ ಮೆಟ್ರೋ ಬಳಸೊ ಪ್ರಯಾಣಿಕರಿಗೆ ಬಿಎಂಆರ್ಸಿಎಲ್ ಸಿಹಿ ಸುದ್ದಿಯ ಜೊತೆ ಶಾಕಿಂಗ್ ನ್ಯೂಸ್ ನೀಡ್ತಿದೆ. ಎಂಜಿ ರೋಡ್.. ಬ್ರಿಗೆಡ್ ರೋಡ್..ಕಲರ್ ಫುಲ್ ಲೈಟಿಂಗ್ಸ್ ಮಧ್ಯೆ ನ್ಯೂ ಇಯರ್ ಸೆಲೆಬ್ರೆಷನ್ಗೆ ಸಿಕ್ಕಾಪಟ್ಟೆ ಜನ ಸೇರೊ ಹಾಟ್ಸ್ಪಾಟ್..
ಹೊಸ ವರ್ಷ ಎನ್ಜಾಯ್ ಮಾಡಲು ಸಾವಿರಾರು ಜನ ನಮ್ಮ ಮೆಟ್ರೋ ಬಳಸುತ್ತಾರೆ..ಹೀಗಾಗಿ ಹೊಸ ವರ್ಷಕ್ಕೆ ರಾತ್ರಿ 1:30 ಗಂಟೆಯವರೆಗೆ ನಮ್ಮ ಮೆಟ್ರೋ ರೈಲು ವಿಸ್ತರಣೆ ಮಾಡಲಾಗಿದೆ.. ರಾತ್ರಿ 11 ರ ಬಳಿಕ 2 ಗಂಟೆಯವರೆಗೆ ಎಂಜಿ ರಸ್ತೆ,ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಲ್ಲಿ ಕಾಲಿಡಲು ಜಾಗವಿಲ್ಲದಷ್ಟು ಜನ ರಾತ್ರಿ 10 ನಂತರ ಸೇರುತ್ತಾರೆ.. ಜನದಟ್ಟಣೆ ಮತ್ತು ಚಿಲ್ಲರೆ ಸಮಸ್ಯೆಯನ್ನು ಕಡಿಮೆ ಮಾಡೋ ನಿಟ್ಟಿನಲ್ಲಿ ಬಿಎಂಆರ್ಸಿಎಲ್ ಟೋಕನ್ ದರವನ್ನು ಹೆಚ್ಚಳ ಮಾಡಿದೆ.
ಹೌಡು ಎರಡು ನಿಲ್ದಾಣಗಳಲ್ಲಿ ಮೆಟ್ರೋ ಹತ್ತುವ ಜನಕ್ಕೆ 50 ರೂಪಾಯಿ ಟಿಕೆಟ್ ದರವನ್ನು ನಿಗಧಿಪಡಿಸಲಾಗಿದೆ.. ಈ ಸಮಯದಲ್ಲಿ ಜನದಟ್ಟಣೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಚಿಲ್ಲರೆಯನ್ನು ಕೊಡಲು ಕಷ್ಟಸಾಧ್ಯವಾಗಲಿದೆ ಎಂದು ಫಿಕ್ಸಿಡ್ ಟಿಕೆಟ್ ನೀಡಲು ಬಿಎಂಆರ್ಸಿಎಲ್ ಪ್ಲಾನ್ ಮಾಡಿದೆ..
ಕಬ್ಬನ್ ಪಾರ್ಕ್ ಟ್ರಿನಿಟಿ ನಿಲ್ದಾಣದಿಂದ ಎಲ್ಲಿಂದ ಎಲ್ಲಿಗೆ ಬೇಕಾದ್ರೂ 50 ರೂಪಾಯಿ ಟಿಕೆಟ್ ಪಡೆದು ಸಂಚಾರ ಮಾಡಬಹುದಾಗಿದೆ..ಉಳಿದ ನಿಲ್ದಾಣಗಳಲ್ಲಿ ಯಥಾಸ್ಥಿತಿಯಲ್ಲಿ ಟಿಕೆಟ್ ನೀಡಲಾಗುತ್ತೆ.. ಅಲ್ಲದೆ ಸ್ಮಾರ್ಟ್ ಕಾರ್ಡ್ ಬಳಸುವವರ ದರ ಯಥಾಸ್ಥಿತಿಯಿರಲಿದೆ..ಇನ್ನೂ ಈ ಬಾರಿ ಎಂ. ಜಿ ರೋಡ್ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಹತ್ತಲು ಇಳಿಯಲು ಅವಕಾಶ ನೀಡದೆ ಶಾಕ್ ನೀಡಿದೆ.
ನಿತ್ಯ 6 ಲಕ್ಷಕ್ಕೂ ಹೆಚ್ಚು ಜನ ಮೆಟ್ರೋ ಬಳಸುತ್ತಿದ್ದಾರೆ..ಕಳೆದ ವರ್ಷ ಹೊಸ ವರ್ಷಕ್ಕೆಂದು ರಾತ್ರಿ 1:30ಗಂಟೆಯವರೆಗೆ ಮೆಟ್ರೋ ವಿಸ್ತರಣೆ ಮಾಡಲಾಗಿತ್ತು.. 4 ಗಂಟೆಯಲ್ಲಿ ಬಿಎಂಆರ್ಸಿಎಲ್ಗೆ 5.6 ಲಕ್ಷ ರೂಪಾಯಿ ಟಿಕೆಟ್ ಬಾಕ್ಸ್ ಆಧಾಯ ಬಂದಿತ್ತು.. ಈ ಬಾರಿ ಟ್ರಿನಿಟಿ, ಟು ಕಬ್ಬನ್ ಪಾರ್ಕ್ ನಿಲ್ದಾಣಗಳಲ್ಲಿ 50ರೂಪಾಯಿ ಫ್ಲಾಟ್ ಟಿಕೆಟ್ ಮಾರಾಟದಿಂದ ಬಿಎಂಆರ್ಸಿಎಲ್ನ ಆದಾಯ ದುಪ್ಪಟ್ಟು ಆಗೋ ನಿರೀಕ್ಷೆಯಿದೆ..
ಜನದಟ್ಟಣೆ, ಚಿಲ್ಲರೆಯ ಸಮಸ್ಯೆಗೆ ಇದು ಸಲ್ಯೂಷನ್ ಎಂದು ಹೇಳಲಾಗುತ್ತಿದೆ.. ಇಷ್ಟೆ ಅಲ್ಲದೆ, ಮಹಿಳೆಯ ಸುರಕ್ಷಿತೆಯನ್ನು ಮೆಟ್ರೋದಲ್ಲಿ ಹೆಚ್ಚಿಸಲು ಹೆಚ್ಚುವರಿಯಾಗಿ ಭದ್ರತೆಯ ಜೊತೆ ಮೆಟ್ರೋದಲ್ಲಿರೊ ಸಿಸಿಟಿವಿ ವೀಕ್ಷಿಸಲು ಹೆಚ್ಚುವರಿ ಭದ್ರತಾ ಅಧಿಕಾರಿಗಳನ್ನು ನೇಮಿಸಲಾಗಿದೆ.. ಅದೇನೆ ಆಗಲಿ ಹೊಸ ವರ್ಷಕ್ಕೆ ಮೆಟ್ರೋ ಅವಧಿ ವಿಸ್ತಾರಣೆಯಾಗಿದ್ದು, ಒಂದು ಕಡೆ ಪ್ರಯಾಣಿಕರಿಗೆ ಖುಷಿ ತಂದರೆ ಮತ್ತೊಂದೆಡೆ ಮೆಟ್ರೋ ಟೆಕೆಟ್ ರೇಟ್ ಹೆಚ್ಚಾಗಿರೋದು ಕಹಿಯಾಗಿದೆ.