ಇಂದು ಕೋಟ್ಯಾಂತರ ಮಂದಿ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ ಅಕೌಂಟ್ ಹೊಂದಿದ್ದು ದಿನದ 24 ಗಂಟೆಯು ಅದನ್ನು ಬಳಕೆ ಮಾಡುತ್ತಾರೆ. ಆದ್ರೆ ಇತ್ತೀಚೆಗೆ ಸಾಮಾಜಿಕ ಮಾಧ್ಯಮ ದೈತ್ಯ ಫೇಸ್ಬುಕ್ ಭಾರತ ಸೇರಿ ವಿಶ್ವದ್ಯಾಂತ ಸರ್ವರ್ ಡೌನ್ ಆಗಿದ್ದು, ಲಕ್ಷಾಂತರ ಬಳಕೆದಾರರು ತಮ್ಮ ಖಾತೆಗಳನ್ನು ಪ್ರವೇಶಿಸಲು ಸಾಧ್ಯವಾಗದೆ ಪರದಾಡಿದ್ದಾರೆ..
ಪ್ರಪಂಚದಾದ್ಯಂತದ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ ಬಳಕೆದಾರರು ತಮ್ಮ ಪ್ರೊಫೈಲ್ಗಳನ್ನು ಲಾಗ್ ಇನ್ ಮಾಡುವಲ್ಲಿ ಮತ್ತು ಪ್ರವೇಶಿಸುವಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ.
ಬಳಕೆದಾರರು ತಮ್ಮ ಫೇಸ್ಬುಕ್ ಖಾತೆಗಳನ್ನು ಲಾಗ್ ಇನ್ ಹಾಗೂ ಲಾಗ್ ಔಟ್ ಮಾಡಲು ಸಾಧ್ಯವಾಗದೆ ತೊಂದರೆ ಅನುಭವಿಸಿದ್ದಾರೆ. ಕೆಲವು ವ್ಯಕ್ತಿಗಳು ಸ್ಟೋರಿ ಮತ್ತು ಕಾಮೆಂಟ್ ಗಳನ್ನು ಹಾಕಲು ಸಾಧ್ಯವಾಗದೆ ಸಮಸ್ಯೆ ಎದುರಿಸಿದ್ದಾರೆ. ಮೆಟಾ ಅಭಿವೃದ್ಧಿಪಡಿಸಿದ ಥ್ರೆಡ್ಸ್ ಅಪ್ಲಿಕೇಶನ್ ಸಹ ಸಂಪೂರ್ಣ ಸ್ಥಗಿತವನ್ನ ಅನುಭವಿಸಿದೆ.
ಇಂಟರ್ನೆಟ್ ಸೇವಾ ಸ್ಥಗಿತಗಳನ್ನ ಪತ್ತೆಹಚ್ಚುವ ವೆಬ್ಸೈಟ್ ಡೌನ್ಡೆಟೆಕ್ಟರ್’ನಲ್ಲಿನ ವರದಿಗಳು ಸಮಸ್ಯೆಯ ಪ್ರಾರಂಭದ ನಂತ್ರ ಎಲ್ಲಾ ಮೂರು ಪ್ಲಾಟ್ಫಾರ್ಮ್ಗಳಿಗೆ ವೇಗವಾಗಿ ಏರಿತು. ವ್ಯಾಪಕ ಬಳಕೆದಾರರ ದೂರುಗಳ ಹೊರತಾಗಿಯೂ, ಮೆಟಾ ಇನ್ನೂ ಸಮಸ್ಯೆಯನ್ನ ಅಧಿಕೃತವಾಗಿ ಒಪ್ಪಿಕೊಂಡಿಲ್ಲ.