ಬಳ್ಳಾರಿ :ಖಾಸಗಿ ಕ್ರಸರ್ಗಳ ವಸ್ತು ರವಾನೆಗೆ ಸರ್ಕಾರಿ ಕಾಲುವೆಯ ರಸ್ತೆಗೆ ದೋಖಾ ಬಿದ್ದಿದೆ. ನಿರಂತರ ಬೃಹತ್ ಗಾಡಿಗಳ ಒಡಾಟದಿಂದ ಕಾಲುವೆಯ ರಸ್ತೆ ಸಂಪೂರ್ಣ ಹಾಳಾಗಿದ್ದು, ಬೃಹತ್ ಲಾರಿಗಳಲ್ಲಿ ಕಲ್ಲು, ಬಿಂಚೆ ಸಾಗಾಟ ರಾಜಾರೋಷವಾಗಿ ಸಾಗಾಟ ಮಾಡಲಾಗುತ್ತಿದೆ.
ವಾಹನಗಳ ಓಡಾಟಕ್ಕೆ ಸಂಪೂರ್ಣ ನಿಷೇಧವಿದ್ದರು, ರಾಜಾರೋಷವಾಗಿ ಕ್ರಷರ್ ವಾಹನಗಳ ಓಡಾಟ ನಡೆಸಿದ್ದಾರೆ. ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಸ್ಥಳೀಯ ನಿವಾಸಿಗಳು ಹಲವು ಬಾರಿ ಈ ಕುರಿತು ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಿಲ್ಲ….
ಜಿಲ್ಲೆಯ ನೂತನ ತಾಲೂಕಾದ ಕುರುಗೋಡಿನ ಶ್ರೀನಿವಾಸಪುರದಲ್ಲಿ ಬಳಿ ಘಟನೆ ಜರುಗಿದೆ. ಶ್ರೀನಿವಾಸಪುರ ಗ್ರಾಮದ ಬಳಿ ಇರುವ ಸುಮಾರು 3 ಕ್ರಷರ್ಗಳಿಂದಾಗಿ ಕಾಲುವೆಗೆ ಧಕ್ಕೆ ಉಂಟಾಗಿದೆ. ಬಾರಿ ತೂಕದ ಲೋಡ್ಗಳಿಂದಾಗಿ ಕಾಲುವೆ ಗಡ್ಡೆ ಕುಸಿತವಾಗಿದೆ. ರಸ್ತೆಯ ತುಂಬಾ ಕುಣಿಗಳ ರಾಶಿ, ಅಲ್ಲಲ್ಲಿ ಕಾಲುವೆಯ ಕಟ್ಟಡ ಬಿರುಕು ಬಿಟ್ಟಿದೆ. ಈ ಕುರಿತು ಹಲವು ಬಾರು ಎಚ್ ಎಲ್ ಸಿ ಕಾಲುವೆಯ ಅಧಿಕಾರಿಗಳ ಗಮನಕ್ಕೆ ತಂದರು ಪ್ರಯೋಜನವಿಲ್ಲ…
“ದೀರ್ಘಕಾಲದ ಬೆನ್ನು ನೋವು” ಇಲ್ಲಿದೆ ಸರಳ ಚಿಕಿತ್ಸೆ: ಪರಿಹಾರ, ಉಚಿತ ಸಲಹೆ
ನಂ-6, ಎಚ್.ಎಲ್.ಸಿ ಕಾಲುವೆಯ ಉಪಕಾಲುವೆ 6R ಕಾಲುವೆಯ ದುಸ್ಥಿತಿ ಉಂಟಾಗಿದೆ. ಈ ಉಪ- ಕಾಲುವೆಯಿಂದ ಲಕ್ಷ್ಮಿಪುರ, ಕೆರೆಕೆರೆ, ಮುಷ್ಠಗಟ್ಟಿ ಗ್ರಾಮದ ಹೋಲಗಳಿಗೆ ನೀರು ಹೋಗಲು ರೈತರು ಹರಸಾಹಸ ಪಡಬೇಕಾಹಿದೆ. ಕ್ರಸರ್ಗಳ ಧೂಳಿಗೆ ಸುತ್ತಲು ಇರುವ ಹೋಲಗಳ ಬೆಳೆಯ ಮೇಲೆ ಧೂಳು ಬೀಳುತ್ತಿದೆ.
ಬೇಸತ್ತ ರೈತರು ಹಲವು ಬಾರಿ ಸ್ಥಳೀಯ ತಹಶೀಲ್ದಾರ್ ಅವರ ಗಮನಕ್ಕೆ ತಂದರು ಅಧಿಕಾರಿಗಳು ಮಾತ್ರ ಕಾರ್ಯಪ್ರವೃತರಾಗಿಲ್ಲ.