ಹೊಟ್ಟೆಯ ಕೊಬ್ಬು ಆರೋಗ್ಯಕ್ಕೆ ತುಂಬಾ ಹಾನಿಕರ. ಇದರಿಂದಾಗಿ ಮಧುಮೇಹದಿಂದ ಹಿಡಿದುಹೃದಯದ ಸಮಸ್ಯೆ, ನಿದ್ರಾಹೀನತೆ ಮತ್ತು ಕ್ಯಾನ್ಸರ್ ನಂತಹ ಹಲವಾರು ಆರೋಗ್ಯ ಸಮಸ್ಯೆಗಳುಕಾಣಿಸಿಕೊಳ್ಳಬಹುದು. ಹೊಟ್ಟೆಯ ಬೊಜ್ಜು ವ್ಯಕ್ತಿಯೊಬ್ಬನ ಆತ್ಮವಿಶ್ವಾಸ ಕುಗ್ಗಿಸುವುದುಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.
ಈ ಸರ್ಕಾರದಲ್ಲಿ ಉತ್ತರ ಕರ್ನಾಟಕದ ನಕ್ಷೆ ಇದಿಯೋ ಇಲ್ಲವೋ ಎನ್ನುವ ಅನುಮಾನ ಮೂಡಿದೆ: ಬೊಮ್ಮಾಯಿ
ಹೊಟ್ಟೆಯ ಬೊಜ್ಜನ್ನು ಬೇಗ ಕರಗಿಸಿಕೊಳ್ಳುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ. ಇದಕ್ಕಾಗಿ ನೀವು ನಿಯಮಿತವಾಗಿ ಕೆಲವು ಸಲಹೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅದರಲ್ಲೂ 35****ರಿಂದ 69 ವರ್ಷದೊಳಗಿನವರು ಬೊಜ್ಜಿನ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು ಎಚ್ಚರಿಕೆ ನೀಡಿದ್ದಾರೆ. ಹಾಗಾದರೆ ಪುರುಷರು ಸ್ಥೂಲಕಾಯತೆಯಿಂದ ತಪ್ಪಿಸಿಕೊಳ್ಳಲು ಏನು ಮಾಡಬೇಕೆಂದು ತಿಳಿಯೋಣ ಬನ್ನಿ.
ಹೈಡ್ರೀಕರಣ: ಎಬಿಪಿ ನ್ಯೂಸ್ ವರದಿ ಪ್ರಕಾರ, ಪ್ರತಿದಿನ ಉತ್ತಮ ನೀರನ್ನು ಕುಡಿಯುವ ಮೂಲಕ ತ್ವಚೆಯನ್ನು ಆರೋಗ್ಯಕರವಾಗಿರಿಸಿಕೊಳ್ಳಬಹುದು. ಇದರಿಂದ ನಿಮಗೆ ವಯಸ್ಸಾದರೂ ಚಿಕ್ಕ ವಯಸ್ಸಿನವರಂತೆ ಕಾಣುತ್ತೀರಿ. ಅಲ್ಲದೇ ಹೆಚ್ಚಾಗಿ ನೀರು ಕುಡಿಯುವುದರಿಂದ ಚಯಾಪಚಯ ಕ್ರಿಯೆ ಹೆಚ್ಚಾಗುತ್ತದೆ. ಜೊತೆಗೆ ಹಸಿವು ಸಹ ಕಡಿಮೆ ಆಗುತ್ತದೆ. ಅಲ್ಲದೇ ಇದರಿಂದ ಸುಲಭವಾಗಿ ಹೊಟ್ಟೆಯ ಬೊಜ್ಜನ್ನು ಕರಗಿಸಿಕೊಳ್ಳಬಹುದು. ಹೀಗಾಗಿ ದಿನಕ್ಕೆ 2 ರಿಂದ 4 ಲೀಟರ್ ನೀರು ಕುಡಿಯುವುದು ಒಳ್ಳೆಯದು.
ಪೌಷ್ಟಿಕ ಆಹಾರ: ಕೇವಲ ಆಹಾರ ಸೇವಿಸಿದರೆ ಸಾಲದು, ತೂಕ ಇಳಿಕೆಗೆ ಯಾವ ರೀತಿಯ ಆಹಾರ ಸೇವಿಸಬೇಕು ಎಂಬುದನ್ನು ತಿಳಿದಿರಬೇಕು. ದೇಹಕ್ಕೆ ಶಕ್ತಿ ಒದಗಿಸುವಂತವ ಆಹಾರವನ್ನು ಸೇವಿಸಿ. ಇದು ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ಹೊಟ್ಟೆಯ ಬೊಜ್ಜನ್ನು ಕರಗಿಸುತ್ತದೆ. ಜೊತೆಗೆ ಸ್ಥೂಲಕಾಯತೆಯ ಸಮಸ್ಯೆಯಿಂದ ಪಾರಾಗಲು ಸಹಾಯ ಮಾಡುತ್ತದೆ. ಜೀವಸತ್ವಗಳು, ಖನಿಜಗಳು ಮತ್ತು ಅಮೈನೋ ಆಮ್ಲಗಳು ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದರಿಂದ ನೀವು ಆರೋಗ್ಯವಾಗಿರುತ್ತೀರಿ. ಇದು ಹೊಟ್ಟೆಯ ಬೊಜ್ಜನ್ನು ಸಹ ಕಡಿಮೆ ಮಾಡುತ್ತದೆ.
ಉತ್ತಮ ನಿದ್ರೆ: ಚೆನ್ನಾಗಿ ನಿದ್ರೆ ಮಾಡುವುದರಿಂದ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಹೀಗಾಗಿ ಉತ್ತಮ ನಿದ್ರೆ ಪಡೆಯಲು ಕತ್ತಲೆ ಕೋಣೆಯಲ್ಲಿ ಮಲಗಿ. ಅದರಲ್ಲೂ ರಾತ್ರಿ 9 ರಿಂದ 10 ಗಂಟೆಯೊಳಗೆ ಮಲಗುವುದು ಉತ್ತಮ. ಕೋಣೆಯಲ್ಲಿನ ತಾಪಮಾನವು ನಿಮಗೆ ಆರಾಮದಾಯಕವಾಗಿದೆ ಎಂಬುವುದನ್ನು ಸಹ ಖಚಿತಪಡಿಸಿಕೊಳ್ಳಿ.
ರಾತ್ರಿ ಅನುಸರಿಸಬೇಕಾದ ಟಿಪ್ಸ್: ರಾತ್ರಿ ಹೊತ್ತು ಊಟವನ್ನು ಮಲಗಲು ಮೂರು ಗಂಟೆಗಳಿರುವುದಕ್ಕೂ ಮುನ್ನವೇ ಸೇವಿಸಬೇಕು. ಎರಡು ಗಂಟೆಗಳ ಮುನ್ನ ನೀರು ಕುಡಿಯದಿರುವುದು ಉತ್ತಮ. ಅಲ್ಲದೇ ಇಂತಹ ವೇಳೆ ಮೊಬೈಲ್ ಮತ್ತು ಗ್ಯಾಜೆಟ್ಗಳನ್ನು ಬಳಸಬಾರದು. ಇದು ನಿದ್ರೆಯ ಗುಣಮಟ್ಟದ ಪರಿಣಾಮ ಬೀರುತ್ತದೆ.
ವ್ಯಾಯಾಮ: ವಾರದಲ್ಲಿ ಕನಿಷ್ಠ ಮೂರು ದಿನ ತೂಕ ಎತ್ತುವುದನ್ನು ಅಭ್ಯಾಸ ಮಾಡಿ. ತೂಕವನ್ನು ಕಳೆದುಕೊಳ್ಳಲು, ಕ್ಯಾಲೊರಿಗಳನ್ನು ಬರ್ನ್ ಮಾಡಲು ಮತ್ತು ಹೃದಯವನ್ನು ಆರೋಗ್ಯಕರವಾಗಿಡಲು ಕಾರ್ಡಿಯೋ ಮಾಡಬೇಕು. ಇದೆಲ್ಲವನ್ನೂ ಮಾಡುವುದರಿಂದ, ಹಾರ್ಮೋನ್ ಸ್ಪೈಕ್ ಆಗುತ್ತದೆ ಮತ್ತು ಬೊಜ್ಜನ್ನು ಕರಗಿಸಿಕೊಳ್ಳಲು ಸಹಾಯ ಮಾಡುತ್ತದೆ.
ಒತ್ತಡ ಕಡಿಮೆ ಮಾಡಿಕೊಳ್ಳಿ: ಒತ್ತಡವು ಹೊಟ್ಟೆಯ ಸುತ್ತ ಹೆಚ್ಚಿನ ಕೊಬ್ಬನ್ನು ಉಂಟುಮಾಡುತ್ತದೆ. ಹಾಗಾಗಿ ಒತ್ತಡ ಕಡಿಮೆ ಮಾಡಿಕೊಳ್ಳುವ ವಿಧಾನಗಳನ್ನು ಅನುಸರಿಸಿ. ವ್ಯಾಯಾಮ, ಆರೋಗ್ಯಕರ ಆಹಾರ, ಮುಕ್ತ ಮನಸ್ಸಿನಿಂದ ಜವಾಬ್ದಾರಿಯುತವಾಗಿ ಕೆಲಸ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ. ಧ್ಯಾನ, ವ್ಯಾಯಾಮ, ಯೋಗವು ಒತ್ತಡವನ್ನು ಕಡಿಮೆ ಮಾಡುತ್ತದೆ. ನೀವು ಇಷ್ಟಪಡುವ ವ್ಯಕ್ತಿಯೊಂದಿಗೆ ಮಾತನಾಡುವುದರಿಂದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು.