ಕೊಪ್ಪಳ : ಒಂದು ಕೆಜಿ ದ್ರಾಕ್ಷಿ ಹಣ್ಣಿನ ಬೆಲೆ ಎಷ್ಟಿರಬಹುದು…? 50 ರೂಪಾಯಿ,, 100 ರೂಪಾಯಿ,, 500 ರೂಪಾಯಿ ಇಲ್ಲ ನೀವು ಊಹಿಸುವುದಕ್ಕೂ ಸಾಧ್ಯವಿಲ್ಲ. ಹೌದು ಇಲ್ಲಿರುವ ದ್ರಾಕ್ಷಿ ಹಣ್ಣಿನ ಒಂದು ಕೆಜಿಯ ಬೆಲೆ 8 ಲಕ್ಷ ರೂಪಾಯಿ ! ನಂಬಲಾಸಾಧ್ಯ ರೇಟು. ಜಪಾನಿನ ರೂಬಿ ರೋಮನ್ ಎನ್ನುವ ಈ ದ್ರಾಕ್ಷಿ ತಳಿಯ ಬೆಲೆ ಒಂದು ಕೆಜಿಗೆ 8 ಲಕ್ಷ ರೂಪಾಯಿ ಇದ್ದು, ಕೊಪ್ಪಳದಲ್ಲಿ ನಡೆದ ಹಣ್ಣುಗಳ ಮೇಳದಲ್ಲಿ ಭಾರೀ ಗಮನ ಸೆಳೆಯುತ್ತಿದೆ.
ಕೊಪ್ಪಳದ ತೋಟಗಾರಿಕೆ ಇಲಾಖೆ ಪ್ರತಿವರ್ಷದಂತೆ ಈ ವರ್ಷವೂ ಶಿವರಾತ್ರಿಯ ನಿಮಿತ್ತ ಐದು ದಿನಗಳ ಕಾಲ ಹಣ್ಣಿನ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಈ ಮೇಳದ ಮುಖ್ಯ ಆಕರ್ಷಣೆ ಎಂಟು ಲಕ್ಷ ರೂಪಾಯಿಯ ರೂಬಿ ರೋಮನ್ ದ್ರಾಕ್ಷಿ ಹಣ್ಣು.
ಕವಿ ರನ್ನನ ಗತವೈಭವ ಸಾರುವ “ರನ್ನವೈಭವ” ; ಜನಪದ ತಂಡಗಳ ಅದ್ದೂರಿ ಮೆರವಣಿಗೆ
ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಕೃಷ್ಣ ಉಕ್ಕುಂದರ ಸತತ ಪ್ರಯತ್ನದಿಂದಾಗಿ ಕೊಪ್ಪಳದಲ್ಲಿ ಮೊದಲ ಬಾರಿಗೆ 8 ಲಕ್ಷ ರೂಪಾಯಿ ಬೆಲೆಯ ದ್ರಾಕ್ಷಿ ಪ್ರದರ್ಶನಕ್ಕೆ ಇಡಲಾಗಿದೆ. ಪ್ರತಿ ವರ್ಷ ಹೊಂದಿಲ್ಲ ಒಂದು ವಿಶೇಷತೆಯನ್ನು ಯೋಚಿಸುವ ಕೃಷ್ಣ ಹಣ್ಣು ಮೇಳಕ್ಕೆ ಜಪಾನಿನ ರೂಬಿ ರೂಮನ್ ದ್ರಾಕ್ಷಿಯನ್ನು ತರಿಸಿದ್ದಾರೆ. ಮುಂಬೈಯ ವ್ಯಾಪಾರಸ್ಥರ ಮೂಲಕ ಇದನ್ನು ಕೊಪ್ಪಳಕ್ಕೆ ತರಲಾಗಿದೆ. ಈ ಹಿಂದೆ ಎರಡುವರೆ ಲಕ್ಷ ಬೆಲೆಬಾಳುವ ಮಿಯಜಾಕಿ ಎನ್ನುವ ಮಾವಿನ ತಳಿಯನ್ನು ತರಿಸಲಾಗಿತ್ತು. ಈ ಸಲ ಈ ಹಣ್ಣಿನ ಮೇಳದ ಮುಖ್ಯ ಆಕರ್ಷಣೆ ರುಬಿ ರೂಮನ್. ಇನ್ನೂ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಿಗಿ ಉದ್ಘಾಟಿಸಿದರು.
ಫೆ.23 ರಿಂದ 27ರವರೆಗೆ ತೋಟಗಾರಿಕೆ ಉಪ ನಿರ್ದೇಶಕರ ಕಛೇರಿ ಆವರಣ ಕೊಪ್ಪಳದಲ್ಲಿ ಹಣ್ಣುಗಳ ಮೇಳ ಮತ್ತು ಮಾರಾಟ ನಡೆಯುತ್ತಿದೆ. ದ್ರಾಕ್ಷಿಯ ವಿವಿಧ ತಳಿಗಳು , ವಿವಿಧ ಹಣ್ಣಿನ ತಳಿಗಳು, ಹಳದಿ ಕಲ್ಲಂಗಡಿ ಹಣ್ಣು, ಜೇನು ಸೇರಿದಂತೆ ಇತರ ಹಣ್ಣಿನ ತಳಿಗಳನ್ನು ಪ್ರದರ್ಶನ ಹಾಗೂ ಮಾರಾಟ ಮಾಡಲಾಗುತ್ತಿದೆ.