ಬೆಂಗಳೂರು: ಟಾಲಿವುಡ್ ಸ್ಟಾರ್ ನಟರು ಇತ್ತೀಚೆಗೆ ಸಾಲು ಸಾಲು ಟ್ರೋಲ್ಗಳಿಗೆ ಗುರಿಯಾಗುತ್ತಿದ್ದಾರೆ. ಕಿಂಗ್ ನಾಗಾರ್ಜುನ, ಧನುಷ್ ಬಳಿಕ ಇದೀಗ ನಟ ಚಿರಂಜೀವಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದ ಅಭಿಮಾನಿಯನ್ನು ತಳ್ಳುವ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಕುರಿತ ವೀಡಿಯೋ ವೈರಲ್ ಆಗುತ್ತಿದ್ದಂತೆ ” ವಿಮಾನ ನಿಲ್ದಾಣದಲ್ಲಿ ಚಿರಂಜೀವಿ ಅಸಭ್ಯ ವರ್ತನೆ” ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರನ್ನು ನಟನನ್ನು ಸಮರ್ಥಿಸಿಕೊಂಡಿದ್ದಾರೆ.
ಇತ್ತೀಚೆಗೆ, ನಾಗಾರ್ಜುನ ಕೂಡ ವಿಮಾನ ನಿಲ್ದಾಣದಲ್ಲಿ ಬರುವಾಗ ವಿಶೇಷ ಚೇತನ ಸಿಬ್ಬಂದಿಯೊಬ್ಬರು ತಮ್ಮಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದಾಗ ಬಾಡಿಗಾರ್ಡ್ಗಳು ತಳ್ಳಿದ ವೀಡಿಯೊ ವೈರಲ್ ಆಗಿತ್ತು. ಬಳಿಕ ನಟ ನಾಗಾರ್ಜುನ ಅವರು ಸೋಷಿಯಲ್ ಮೀಡಿಯಾ ಮೂಲಕ ಕ್ಷಮೆಯಾಚಿಸಿದ್ದರು.