ಬೆಂಗಳೂರು: ಲೋಕಸಭೆ ಚುನಾವಣೆಗೆ ಭರ್ಜರಿ ಹುರುಪಿನಿಂದ ಮುನ್ನುಗ್ಗುತ್ತಿರುವ ರಾಜ್ಯ ಬಿಜೆಪಿ ಮೋದಿ ಬಲವನ್ನೇ ನಂಬಿಕೊಂಡಿದೆ. ಅವರು ರಾಜ್ಯದಲ್ಲಿ ಹೆಚ್ಚು ಹೆಚ್ಚು ಪ್ರಚಾರ ನಡೆಸಿದಷ್ಟು ಪಕ್ಷಕ್ಕೆ ಆನೆಬಲ ಬರಲಿದೆ, ಈ ಹಿಂದೆ ಚಂದ್ರಯಾನ ಯಶಸ್ಸಿನ ಬಳಿಕ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸುವುದಕ್ಕೆ ಮೋದಿ ಬೆಂಗಳೂರಿಗೆ ಬಂದಿದ್ದರು.
ಆ ಸಂದರ್ಭದಲ್ಲಿ ರೋಡ್ ಶೋ ಮಾಡಲಿದ್ದಾರೆ ಎಂದು ರಾಜ್ಯ ಬಿಜೆಪಿ ನಾಯಕರು ಹೇಳಿಕೆ ನೀಡಿ ನಂತರ ರೋಡ್ ಶೋ ಕ್ಯಾನ್ಸಲ್ ಆಗಿದ್ದಕ್ಕೆ ಕೇಸರಿ ನಾಯಕರು ಮುಜುಗರಕ್ಕೀಡಾಗಿದ್ದರು. ಹೀಗಾಗಿ ಈ ಬಾರಿ ಎಚ್ಚರಿಕೆಯ ಹೆಜ್ಜೆ ಇಡಲು ಬಿಜೆಪಿಯವರು ಯೋಜಿಸಿದ್ದು ಪ್ರಧಾನಮಂತ್ರಿ ಕಛೇರಿಯಿಂದ ಅನುಮತಿ ಪಡೆಯಲು ಪ್ಲಾನ್ ಮಾಡ್ತಿದ್ದಾರೆ ಎಲ್ಲವೂ ಅಂದುಕೊಂಡಂತೆ ಆದ್ರೆ ಶುಕ್ರವಾರ ನಮೋ ರೋಡ್ ಶೋ ನಡೆಯಲಿದೆ.
ಒಟ್ನಲ್ಲಿ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಭಾರತದಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಬಿಜೆಪಿ ನಾಯಕರು ಪ್ಲಾನ್ ಮಾಡ್ತಿದ್ದು, ರಾಮ ಮಂದಿರ ಉದ್ಘಾಟನೆಗೂ ಮುನ್ನ ಮೋದಿ ಬರ್ತಿರೋದು ರಾಜ್ಯ ಬಿಜೆಪಿ ನಾಯಕರಲ್ಲಿ ರಣೋತ್ಸಾಹ ತಂದಿದೆ. ರೋಡ್ ಶೋ ಮೂಲಕ ಪಕ್ಷದ ಬಲ ಹೆಚ್ಚಿಸಿಕೊಳ್ಳಲು ಪ್ಲಾನ್ ನಡಿತಿದ್ದು ಪ್ರಧಾನಮಂತ್ರಿ ಕಚೇರಿಯಿಂದ ಅನುಮತಿ ಸಿಗ್ತಿದ್ದಂತೆ ರೋಡ್ ಮ್ಯಾಪ್ ಜೊತೆ ತಯಾರಿಗಳು ಸಿದ್ಧವಾಗಲಿವೆ.