ಕೇರಳದ ಚಿತ್ರರಂಗದಲ್ಲಿ ತಲ್ಲಣ ಸೃಷ್ಟಿಸಿರುವ ಹೇಮಾ ಕಮಿಟಿಯ ವರದಿ ಸ್ಯಾಂಡಲ್ ವುಡ್ ನಲ್ಲೂ ಸದ್ದುಮಾಡ್ತಿದೆ.ಇಲ್ಲಿನ ಚಿತ್ರರಂಗದಲ್ಲೂ ನಟಿಯರು,ಸಹಕಲಾವಿದರ ಮೇಲೂ ಲೈಂಗಿಕ ಶೋಷಣೆ,ಇನ್ನಿತರ ಶೋಷಣೆಗಳು ನಡೆಯುತ್ತಿವೆಯೆಂಬ ಆರೋಪಗಳು ಎದುರಾಗಿವೆ.ಎಲ್ಲವೂ ಮುಕ್ತವಾಗಿ ಹೊರಬರಬೇಕು,ಕನ್ನಡ ಸಿನಿ ಇಂಡಸ್ಟ್ರಿಯಲ್ಲೂ ಪಾರದರ್ಶಕತೆ ಬರಬೇಕು..ಹಾಗಾಗಿ ಕೇರಳದ ಹೇಮಾ ಕಮಿಟಿಯಂತೆ ಇಲ್ಲೂ ನಿವೃತ್ತ ನ್ಯಾಯಮೂರ್ತಿಗಳನೇತೃತ್ವದಲ್ಲಿ ಕಮಿಟಿ ರಚಿಸಬೇಕೆಂದು ಫೈರ್ ಒಕ್ಕೂಟ ಆಗ್ರಹಿಸಿದೆ..ಇಂದು ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಮನವಿ ಸಲ್ಲಿಸಿದೆ.
PM ಮೋದಿ ಮಹಾರಾಷ್ಟ್ರದ ಪ್ರತಿಯೊಬ್ಬ ವ್ಯಕ್ತಿಯ ಕ್ಷಮೆಯಾಚಿಸಬೇಕು: ರಾಹುಲ್ ಗಾಂಧಿ!
ಹೇಮಾ ಕಮಿಟಿಯ ವರದಿ ಕೇರಳ ಸಿನಿರಂಗವನ್ನೇ ತಲ್ಲಣಗೊಳಿಸಿದೆ. ಕೇರಳದ ಸಿನಿರಂಗವನ್ನೇ ದಶಕಗಳಿಂದ ಆಳುತ್ತಿರುವ ನಾಯಕರನ್ನ ದಂಗುಬಡಿಸಿದೆ..ಇದೇ ಆರೋಪ ಕಾಲಿವುಡ್,ಬಾಲಿವುಡ್,ಟಾಲಿವುಡ್ ಗಳಲ್ಲೂ ಕೇಳಿಬರ್ತಿದೆ..ನಮ್ಮ ಸ್ಯಾಂಡಲ್ ವುಡ್ ನಲ್ಲೂ ಈ ಆರೋಪ ಗಂಭೀರ ಸ್ವರೂಪ ಪಡೆದುಕೊಂಡಿದೆ..ಯಾಕಂದ್ರೆ ಹಳೆ ಹೊಸಬ ನಾಯಕ,ನಾಯಕಿಯರು,ಸಹಕಲಾವಿದರ ನೇತೃತ್ವದ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಆಂಡ್ ಇಕ್ವಾಲಿಟಿ ಸಂಸ್ಥೆ ದೊಡ್ಡ ಮಟ್ಟದ ಧ್ವನಿಎತ್ತಿದೆ..ಇಂದು ಸಿಎಂ ಸಿದ್ದರಾಮಯ್ಯನವರನ್ನ ಭೇಟಿ ಮಾಡಿ ಕೇರಳದಂತೆ ಇಲ್ಲೂ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಕಮಿಟಿಯನ್ನ ರಚಿಸುವಂತೆ ಒತ್ತಾಯಿಸಿದೆ..
ಇನ್ನು ಕನ್ನಡ ಚಲನಚಿತ್ರೋಧ್ಯಮದಲ್ಲಿ ಮಹಿಳಾ ಕಲಾವಿದರು ಸಮಸ್ಯೆ ಹಾಗೂ ಶೋಷಣೆಗೆ ಗುರಿಯಾಗಿದ್ದಾರೆ..ಅದಕ್ಕೆ ನಾವೇ ಬೆಸ್ಟ್ ಎಕ್ಸಾಂಪಲ್..ಬಣ್ಣದ ಚಿತ್ತಾರದ ಕಸನು ಕಂಡು ನಾವು ಸಿನಿಮಾ ರಂಗಕ್ಕೆ ಬರ್ತೇವೆ..ಆದ್ರೆ ಪುರುಷ ಪ್ರದಾನ ಸಮಾಜದಲ್ಲಿ ಹೆಣ್ಣುಮಕ್ಕಳನ್ನ ಬೇರೆಯದೇ ರೀತಿಯಲ್ಲಿ ನೋಡ್ತಾರೆ..ಕೆಲವರು ಶೋಷಣೆಗೂ ಗುರಿಯಾಗಿದ್ದಾರೆ..ಮುಂದಿನ ತಮ್ಮಭವಿಷ್ಯದ ದೃಷ್ಟಿಯಿಂದ ಕೆಲವರು ಶೋಷಣೆಗೆ ಗುರಿಯಾದ್ರೂ ಬಹಿರಂಗವಾಗಿ ವಿರೋಧಿಸ್ತಿಲ್ಲ.ಅದನ್ನ ಬಹಿರಂಗಪಡಿಸುತ್ತಲೂ ಇಲ್ಲ..ಇನ್ನು ಕೆಲವರು ಮಾತನಾಡಿದ್ರೂ ಇಂಡಸ್ಟ್ರಿಯಲ್ಲಿ ಅವರನ್ನ ಒಟ್ಟಾಗಿ ಮೂಲೆಗುಂಪು ಮಾಡುವ ಪ್ರಯತ್ನಗಳು ನಡೆಯುತ್ವೆ..ಕೆಲಸದ ವೇಳೆ ಮಹಿಳೆಯರಿಗೆ ಸರಿಯಾದ ಸೌಲಭ್ಯಗಳಿಲ್ಲದೆ ಕಿರಿಕಿರಿ ಅನುಭವಿಸಬೇಕು..ಕೆಲವು ಕಡೆ ನಾವು ಸಹಕರಿಸಬೇಕು..ಇಲ್ಲವಾದರೆ ನಮ್ಮನ್ನ ಇಂಡಸ್ಟ್ರಿ ಯಿಂದಲೇ ದೂರ ಇಡುವ ಕೆಲಸ ಮಾಡ್ತಾರೆ..ಹಾಗಾಗಿ ಕೇರಳ ಸರ್ಕಾರ ೨೦೧೭ ರಲ್ಲಿ ಹೇಮಾ ಕಮಿಟಿಯನ್ನರಚಿಸಿತ್ತು..ಆ ಕಮಿಟಿ ಚಿತ್ರರಂಗದಲ್ಲಿ ಆಗುತ್ತಿರುವ ಮಹಿಳಾ ಶೋಷಣೆಯ ಬಗ್ಗೆ ಸಂಪೂರ್ಣ ವರದಿ ನೀಡಿದೆ.. ನಮ್ಮ ಇಂಡಸ್ಟ್ರಿಯೂ ಪಾರದರ್ಶಕವಾಗಿರಬೇಕು..ಹೆಣ್ಣುಮಕ್ಕಳಿಗೆ ಸುರಕ್ಷತೆ ಸಿಗಬೇಕು..ಆ ನಿಟ್ಟಿನಲ್ಲಿ ಕೇರಳದ ಹೇಮಾ ಕಮಿಟಿಯಂತೆಯೇ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಕಮಿಟಿಯನ್ಮ ಮಾಡಿ,ಅದರಲ್ಲಿ ನಮ್ಮನ್ನೂ ಸೇರಿಸಿ ಎಂದು ಬೇಡಿಕೆ ಇಟ್ಟಿದ್ದಾರೆ.
ಕನ್ನಡ ಸಿನಿರಂಗದ ಶೋಷಣೆಯ ಬಗ್ಗೆ ಧ್ವನಿ ಎತ್ತಿರುವ ಫೈರ್ ಸಂಸ್ಥೆಯ ಹಲವು ಹಿರಿಕಿರಿಯ ನಾಯಕ,ನಾಯಕಿಯರು,ಸಹಕಲಾವಿದರು ಬೆಂಬಲ ವ್ಯಕ್ತಪಡಿಸಿದ್ದಾರೆ..ಸುದೀಪ್,ಕಿಶೋರ್,ದಿಗಂತ್,ಸಿಹಿ ಕಹಿ ಚಂದ್ರು,ವಿನಯ್ ರಾಜ್ ಕುಮಾರ್,ನಟಿ ಪೂಜಾಗಾಂಧಿ,ನೀತು ಶೆಟ್ಟಿ,ಶೃತಿ ಹರಿಹರನ್,ಐಂದ್ರಿತಾ ರೈ,ಅಮೃತಾ ಅಯ್ಯಂಗಾರ್,ಚೈತ್ರಾ ಜೆ ಅಚಾರ್,ನಿರ್ದೇಶಕ ಬಿ.ಸುರೇಶ್,ಪವನ್ ಕುಮಾರ್,ಚೈತನ್ಯ,ಕೆ.ಎಂ.ಗಿರಿರಾಜ್,ಬಿಎಂ ಜಯತೀರ್ಥ,ಸಾಹಿತಿ ವಿಜಯ್ ಶಂಕರ್ ಸೇರಿ ಹಲವರು ಸಾಥ್ ನೀಡಿದ್ದಾರೆ.
ಒಟ್ನಲ್ಲಿ ಕೇರಳದಲ್ಲಿ ತಲ್ಲಣ ಮೂಡಿಸಿರುವ ಮೀಟೂ ಪ್ರಕರಣ ಸ್ಯಾಂಡಲ್ ವುಡ್ ನಲ್ಲೂನಸದ್ದುಮಾಡ್ತಿದೆ..ಹೇಮಾ ಕಮಿಟಿಯಂತೆಯೇ ಇಲ್ಲೂ ನಿವೃತ್ತ ನ್ಯಾಯಮೂರ್ತಿಗಳ ಕಮಿಟಿ ರಚನೆಗೆ ಫೈರ್ ಎಂಬ ಸಂಸ್ಥೆಯ ನಿಯೋಗ ಸಿಎಂಗೆ ಮನವಿ ಸಲ್ಲಿಸಿದೆ..ಸಿಎಂ ಕೂಡ ಭರವಸೆ ನೀಡಿದ್ದಾರೆ..ಆದ್ರೆ ಕಮಿಟಿ ರಚನೆ ಯಾವಾಗ ಅನ್ನೋದು ಪ್ರಶ್ನೆಯಾಗಿಯೇ ಉಳಿದಿದೆ.