ಹುಬ್ಬಳ್ಳಿ: ವಾರ್ಡ್ ನಂ. 48ರ ವ್ಯಾಪ್ತಿಯ ಮಾರುತಿ ನಗರ( ಕೈಗಾರಿಕಾವಸಾಹತು ಸ್ಲಂ)ದ ನಿವಾಸಿಗಳಿಗೆ ಹಕ್ಕಪತ್ರ ವಿತರಣೆ ಹಾಗೂ ವಾರ್ಡ್ ನಂ. 47ರ ವ್ಯಾಪ್ತಿಯ ಜೈ ಹನುಮಾನ ನಗರದ ನಿವಾಸಿಗಳಿಗೆ ಸ್ಲಂ ಬೋರ್ಡ್ನಿಂದ ನಿರ್ಮಿಸುತ್ತಿರುವ ಮನೆಗಳ ಕುರಿತಂತೆ ಇಲ್ಲಿಯ ಹುಬ್ಬಳ್ಳಿಯ ಪ್ರವಾಸಿ ಮಂದಿರದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಅವರು ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಶಾಸಕ ಟೆಂಗಿನಕಾಯಿ ಮಾತನಾಡಿ, ಗೋಕುಲ ರಸ್ತೆಯ ಮಾರುತಿ ನಗರದಲ್ಲಿ ಒಟ್ಟು 186 ಮನೆಗಳಿದ್ದು, ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲು ಇರುವ ಅಡೆತಡೆಗಳನ್ನು ಶೀಘ್ರ ನಿವಾರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸರ್ವೇ ಕಾರ್ಯ ನಡೆಸಲು ಎರಡು ವಾರ ತೆಗೆದುಕೊಳ್ಳಿ. ಶೀಘ್ರವಾಗಿ ಎಡಿಎಲ್ಆರ್, ಡಿಡಿಎಲ್ಆರ್, ತಹಸೀಲ್ದಾರ್, ಮಹಾನಗರ ಪಾಲಿಕೆ ಹಾಗೂ ಸ್ಲಂ ಬೋರ್ಡ್ ಅಧಿಕಾರಿಗಳ ಸಭೆ ಕರೆಯಬೇಕೆಂದು ತಹಸೀಲ್ದಾರ್ ಕಲಗೌಡ ಪಾಟೀಲ ಅವರಿಗೆ ಸೂಚಿಸಿದರು.
ಮಹಿಳೆಯರೇ “ಸೆಕ್ಸ್” ವೇಳೆ ನಿಮಗೆ ಸಿಕ್ಕಾಪಟ್ಟೆ ನೋವಾಗುತ್ತಾ..? ಕಡಿಮೆ ಮಾಡೋ ಟಿಪ್ಸ್ ಇಲ್ಲಿದೆ ನೋಡಿ
ವಾರ್ಡ್ ನಂ. 47ರ ವ್ಯಾಪ್ತಿಯ ವಿದ್ಯಾನಗರದ ವಿನಾಯಕ ನಗರದಲ್ಲಿ ಜೈ ಹನುಮಾನ ನಗರದ ಸ್ಲಂನಲ್ಲಿ ಸ್ಲಂ ಬೋರ್ಡ್ನಿಂದ ನಿರ್ಮಿಸುತ್ತಿರುವ ಮನೆಗಳ ಕುರಿತಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಶಾಸಕ ಮಹೇಶ ಟೆಂಗಿನಕಾಯಿ, ಫಲಾನುಭವಿಗಳಿಗೆ ಸೂಚನಾ ಪತ್ರ ನೀಡಬೇಕು. ಹಾಗೂ ಡಿ.ಡಿ ಕಟ್ಟಿಸಿಕೊಳ್ಳಬೇಕು ಎಂದು ಸ್ಲಂ ಬೋರ್ಡ್ ಅಧಿಕಾರಿಗಳಿಗೆ ಸೂಚಿಸಿದರು.
ಪಾಲಿಕೆ ಸದಸ್ಯರಾದ ಉಮೇಶಗೌಡ ಕೌಜಗೇರಿ, ತಿಪ್ಪಣ್ಣ ಮಜ್ಜಗಿ, ರೂಪಾ ಶೆಟ್ಟಿ, ಕಿಶನ ಬೆಳಗಾವಿ, ತಹಸೀಲ್ದಾರ್ ಕಲಗೌಡ ಪಾಟೀಲ, ಸ್ಲಂ ಬೋರ್ಡ್ ಅಧಿಕಾರಿಗಳು ಹಾಗೂ ಮಾರುತಿ ನಗರ ಹಾಗೂ ಜೈ ಹನುಮಾನ ನಗರದ ಪ್ರಮುಖರು ಉಪಸ್ಥಿತರಿದ್ದರು.