ದಾವಣಗೆರೆ:- ಹಸುಗಳ ಕೆಚ್ಚಲು ಕೊಯ್ದವರನ್ನು ಎನ್ಕೌಂಟರ್ ಮಾಡಿ ಎಂದು ರೇಣುಕಾಚಾರ್ಯ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಹಸುಗಳ ಕೆಚ್ಚಲು ಕೊಯ್ಡ ಪ್ರಕರಣ – ಓರ್ವ ಆರೋಪಿ ಅರೆಸ್ಟ್!
ಈ ಸಂಬಂಧ ಮಾತನಾಡಿದ ಅವರು, ಪಕ್ಷಾತೀತವಾಗಿ ಈ ಪ್ರಕರಣವನ್ನು ಖಂಡಿಸಬೇಕು. ಹಸುಗಳನ್ನು ದೇವರು ಎಂದು ಸಮಾಜ ಪೂಜಿಸುತ್ತದೆ. ಮತಾಂಧರು ವಿಕೃತ ಮನಸ್ಸಿನಿಂದ ಈ ಕೃತ್ಯ ನಡೆಸಿ ಹಿಂದೂ ಧರ್ಮಕ್ಕೆ ಅಪಮಾನ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಜಮೀರ್ ಅಹ್ಮದ್ ಕ್ಷೇತ್ರದಲ್ಲಿ ಇಂತಹ ದುರ್ಘಟನೆ ನಡೆದಿದೆ. ಈ ಕೃತ್ಯ ನಡೆಸಿದ್ದು ಭಯೋತ್ಪಾದಕ ಅಲ್ಪಸಂಖ್ಯಾತರು. ಈ ಘಟನೆಗೆ ಕೇವಲ ಜಮೀರ್ ಮಾತ್ರ ಅಲ್ಲ, ಇಡೀ ಕಾಂಗ್ರೆಸ್ ಕಾರಣ. ಅಲ್ಪಸಂಖ್ಯಾತ ಗೂಂಡಾಗಳು ಅಟ್ಟಹಾಸದಿಂದ ಮೆರೆಯುತ್ತಿದ್ದಾರೆ. ಇಂತಹ ಕೃತ್ಯ ನಡೆಸಿದವರನ್ನು ಬಂಧಿಸುವುದಷ್ಟೇ ಅಲ್ಲ, ಎನ್ಕೌಂಟರ್ ಮಾಡಿ ಬಿಸಾಕಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.