ಹೈದರಾಬಾದ್:- ಹೈದರಾಬಾದ್ನ ಮೇಡ್ಚಲ್ ಮಲ್ಕಾಜ್ಗಿರಿ ಜಿಲ್ಲೆಯ ಕೀಸರ ಪೊಲೀಸ್ ಠಾಣಾ ವ್ಯಾಪ್ತಿಯ ರಾಂಪಳ್ಳಿಯ ಸತ್ಯನಾರಾಯಣ ಕಾಲೋನಿಯಲ್ಲಿ ಹೃದಯ ಸ್ತಂಭನದಿಂದ ಮೆಡಿಕಲ್ ಸಿಬ್ಬಂದಿ ಹಠಾತ್ ಸಾವನ್ನಪ್ಪಿದ ಘಟನೆ ಜರುಗಿದೆ.
ಎಕ್ಸ್ನಲ್ಲಿ ಹಂಚಿಕೊಂಡಿರುವ ಮೆಡಿಕಲ್ ಸ್ಟೋರ್ನ ಸಿಸಿಟಿವಿ ದೃಶ್ಯದಲ್ಲಿ ಮೆಡಿಕಲ್ ಸ್ಟೋರ್ ನ ಬಿಲ್ಲಿಂಗ್ ಕೌಂಟರ್ನಲ್ಲಿ ಕೆಲಸ ಮಾಡುತ್ತಿದ್ದ ಮುರಳಿ ಎಂಬಾತ ಇದ್ದಕ್ಕಿದ್ದಂತೆ ನೆಲಕ್ಕೆ ಕುಸಿದು ಬಿದ್ದಿದ್ದಾನೆ. ಸಮೀಪದಲ್ಲೇ ಇದ್ದ ಮತ್ತೊಬ್ಬ ವ್ಯಕ್ತಿ ಆಘಾತದಿಂದ ಆತನತ್ತ ಧಾವಿಸಿ ಆತನನ್ನು ಬದುಕಿಸಲು ಯತ್ನಿಸಿದ. ಆದರೂ ಪ್ರಯೋಜನವಾಗಲಿಲ್ಲ
ಈ ಹಿಂದೆಯೂ ತೆಲಂಗಾಣದಲ್ಲಿ ಇದೇ ರೀತಿಯ ಹೃದಯ ಸ್ತಂಭನದ ಘಟನೆಗಳು ವರದಿಯಾಗಿವೆ. ಕಳೆದ ವರ್ಷ ಮೇಡ್ಚಲ್ನಲ್ಲಿ ಮನೆಯಿಂದ ಹೊರಬಂದ ಕೆಲವೇ ಕ್ಷಣಗಳಲ್ಲಿ ವ್ಯಕ್ತಿಯೊಬ್ಬರು ಹೃದಯ ಸ್ತಂಭನಕ್ಕೆ ಬಲಿಯಾಗಿದ್ದರು. ಅದಕ್ಕೂ ಮುನ್ನ ಸಿಎಂಆರ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೊದಲ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ್ದ ಎನ್ನಲಾಗಿದೆ.