ಹುಬ್ಬಳ್ಳಿ: ಉಣಕಲ್ನ ಅಚ್ಚವ್ವ ಕಾಲನಿಯಲ್ಲಿ ಆಗಿರುವ ಘಟನೆ ಮನಸ್ಸಿಗೆ ಬಹಳ ನೋವು ತಂದಿದ್ದು ಇಂಥ ಘಟನೆ ಆಗದಂತೆ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಎಚ್ಚರವಹಿಸಬೇಕು ಎಂದು ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಸಿಎಚ್ . ವಿ.ಎಸ್.ವಿ. ಪ್ರಸಾದ ಅವರು ತಿಳಿಸಿದ್ದಾರೆ.
ಈ ಕುರಿತು ಸಾಂತ್ವನ ಹೇಳಿದ ಅವರು ತಾವು ಪೂಜೆ ಮಾಡುವ ಸ್ಥಳ ಹಾಗೂ ಅಡುಗೆ ಮಾಡುವ ಸ್ಥಳ ಪ್ರತ್ಯೇಕ ಮಾಡಿಕೊಳ್ಳಬೇಕು. ಇದರಿಂದ ಅವಘಡ ತಪ್ಪಿಸಬಹುದೆಂಬುದು ನನ್ನ ನಂಬಿಕೆ. ಒಂಬತ್ತು ಜನ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ಸ್ಥಿತಿ ಗಂಭೀರವಾಗಿದೆ. ಅವರು ಶೀಘ್ರ ಗುಣಮುಖರಾಗಲೆಂದು ಅಯ್ಯಪ್ಪ ಸ್ವಾಮಿಯಲ್ಲಿ ಪ್ರಾರ್ಥಿಸುತ್ತೇನೆ. 4
ಅವರಿಗೆ ಎಲ್ಲ ರೀತಿಯ ಅಗತ್ಯ ವೈದ್ಯಕೀಯ ನೆರವು ನೀಡುವುದಾಗಿ ಕೆಎಂಸಿಆರ್ಐ ನಿರ್ದೇಶಕ ಡಾ.ಎಸ್.ಎಫ್. ಕಮ್ಮಾರ ಅವರಿಗೆ ತಿಳಿಸಿದ್ದೇನೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಮಹೇಶ ಟೆಂಗಿನಕಾಯಿ ಅವರು ಕಿಮ್ಸ್ ಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿರುವುದು ನನಗೆ ತುಂಬಾ ಸಂತೋಷವೆನಿಸಿದೆ ಎಂದು