ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ ಎಂಬುವವರಿಂದ ನಾಯಿ ಮಾಂಸ ದಂಧೆ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಸರಕು ಸಾಗಾಟದ ಹಡಗಿನಲ್ಲಿ ಅಗ್ನಿ ಅವಘಡ: ಬೆಂಕಿ ನಂದಿಸಿದ ಇಂಡಿಯನ್ ಕೋಸ್ಟ್ ಗಾರ್ಡ್!
ನಗರದ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಸಾವಿರಾರು ಕೆಜಿ ಶಂಕಿತ ನಾಯಿ ಮಾಂಸವನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದು ರಾಜಸ್ಥಾನದಿಂದ ಬೆಂಗಳೂರಿಗೆ ನಾಯಿ ಮಾಂಸ ಸರಬರಾಜು ಆಗುತ್ತಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ. ರಾಷ್ಟ್ರ ಜಾಗೃತಿ ಸಂಘಟನೆ ಅಧ್ಯಕ್ಷ ಪುನೀತ್ ಕೆರೆಹಳ್ಳಿ ನೇತೃತ್ವದಲ್ಲಿ ಹಲವು ಹಿಂದು ಕಾರ್ಯಕರ್ತರು ದಾಳಿ ನಡೆಸಿದ ವೇಳೆ ಮಾಂಸದ ಪಾರ್ಸೆಲ್ಗಳಲ್ಲಿ ನಾಯಿ ಮಾಂಸ ಕಂಡುಬಂದಿದೆ.
ಆದರೆ, ಈ ಆರೋಪಗಳನ್ನು ಅಬ್ದುಲ್ ರಜಾಕ್ ಅಲ್ಲಗಳೆದಿದ್ದಾರೆ. ನಾಯಿ ಮಾಂಸದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಹಿಂದು ಸಂಘಟನೆಗಳು ದಾಳಿ ಮಾಡಿದ್ದು, ಈ ವೇಳೆ ಸಾವಿರಾರು ಕೆ.ಜಿ ಮಾಂಸ ಪತ್ತೆಯಾಗಿದೆ. ಆದರೆ, ಎರಡು ದಿನಕ್ಕೊಮ್ಮೆ ಜೈಪುರದಿಂದ ಬೆಂಗಳೂರಿಗೆ ಕುರಿ ಮಾಂಸ ಬರುತ್ತದೆ. ಇವತ್ತು ಎರಡು ಸಾವಿರ ಕೆಜಿ ಮಾಂಸ ಬಂದಿದೆ. ಹನ್ನೆರಡು ವರ್ಷದಿಂದ ಈ ವ್ಯವಹಾರ ನಡೆಯುತ್ತಿದೆ. ಆಹಾರ ಇಲಾಖೆ ಅಧಿಕಾರಿಗಳು ಬೇಕಿದ್ದರೆ ಬಂದು ಚೆಕ್ ಮಾಡಲಿ ಎಂದು ಅಬ್ದುಲ್ ರಜಾಕ್ ಹೇಳಿದ್ದಾರೆ.
ಮಾಂಸದ ಪಾರ್ಸೆಲ್ಗಳಲ್ಲಿ ಪ್ರಾಣಿಯ ಬಾಲ ಉದ್ದವಾಗಿರೋದು ಕಂಡುಬಂದಿದ್ದರಿಂದ, ಕುರಿ ಬಾಲ ಈ ರೀತಿ ಇರುತ್ತದಾ ಎಂದು ಹಿಂದು ಕಾರ್ಯಕರ್ತರು ಪ್ರಶ್ನಿಸಿದ್ದಾರೆ. ಈ ವೇಳೆ ರಾಜಸ್ಥಾನ ಕುರಿಗಳಿಗೆ ಇದೇ ರೀತಿ ಬಾಲ ಉದ್ದವಾಗಿರುತ್ತೆ, ಅದನ್ನು ನಾಯಿ ಎನ್ನುತ್ತಿದ್ದಾರೆ ಎಂದು ಮುಸ್ಲಿಂ ಮುಖಂಡ ಹೇಳಿದ್ದಾರೆ
ಸ್ಥಳಕ್ಕೆ ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. 5 ಬಾಕ್ಸ್ಗಳಲ್ಲಿ ಇದ್ದ ಕುರಿ ಮಾಂಸದ ಸ್ಯಾಂಪಲ್ ತೆಗೆದುಕೊಂಡಿದ್ದೇವೆ. ಮೇಲ್ನೋಟಕ್ಕೆ ಇದು ಕಳಪೆಯಾಗಿ ತೋರುತ್ತಿದೆ ಅಧಿಕಾರಿ ಹೇಳಿದ್ದಾರೆ.