ಬೆಂಗಳೂರು:– ಬೆಂಗಳೂರು ಸೇರಿ ರಾಜ್ಯದಲ್ಲಿ ಮೇ. 19 ರತನಕ ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರಿನಲ್ಲಿ ಮುಂದಿನ 4 ದಿನ ಬಿರುಗಾಳಿ ಸಮೇತ ಮಳೆ ಆಗುವ ಸಾಧ್ಯತೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನೂ 4 ದಿನ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಿಗೂ ಮಳೆ ಅಲರ್ಟ್ ನೀಡಲಾಗಿದೆ. ಬಿರುಗಾಳಿ ಸಹಿತ ಮಳೆಯಾರ್ಭಟದ ಮುನ್ಸೂಚನೆ ನೀಡಿದೆ ಹವಾಮಾನ ಇಲಾಖೆ.
ಕಾರ್ಖಾನೆಯಲ್ಲಿ ಎಲ್ಪಿಜಿ ಅನಿಲ ಸೋರಿಕೆ.. ಬೆಂಕಿ ಅವಘಡದಿಂದ ಕಾರ್ಮಿಕ ಸಾವು!
ಇವರೆಗೂ ಮಂಡ್ಯ: 129ಮಿ.ಮೀ, ರಾಮನಗರ: 113.5ಮಿ.ಮೀ, ಬೆಂಗಳೂರು (ಯು & ಆರ್): 99.5ಮಿ.ಮೀ, ಕೋಲಾರ: 85.5ಮಿ.ಮೀ, ತುಮಕೂರು: 82ಮಿ.ಮೀ, ಮೈಸೂರು: 74.5ಮಿ.ಮೀ ಮಳೆಯಾಗಿದೆ. ದಕ್ಷಿಣ ಕನ್ನಡ: 56ಮಿ.ಮೀ, ಚಿಕ್ಕಮಗಳೂರು: 54.5ಮಿ.ಮೀ, ಚಾಮರಾಜನಗರ: 52ಮಿ.ಮೀ, ಬೆಳಗಾವಿ: 47.5ಮಿ.ಮೀ, ಕೊಡಗು: 45.5ಮಿ.ಮೀ, ಚಿಕ್ಕಬಳ್ಳಾಪುರ: 44.5ಮಿ.ಮೀ, ಶಿವಮೊಗ್ಗ: 24ಮಿ.ಮೀ ಮಳೆಯಾಗಿದೆ. ಇನ್ನೂ 4 ದಿನ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಿಗೂ ಮಳೆ ಅಲರ್ಟ್ ನೀಡಲಾಗಿದೆ. ಬಿರುಗಾಳಿ ಸಹಿತ ಮಳೆಯಾರ್ಭಟದ ಮುನ್ಸೂಚನೆ ನೀಡಿದೆ ಹವಾಮಾನ ಇಲಾಖೆ.
ಸಾಮಾನ್ಯವಾಗಿ ನೈಋತ್ಯ ಮುಂಗಾರು ಭಾರತವನ್ನು ಮೇ 22 ರ ಸಮಯದಲ್ಲಿ ಪ್ರವೇಶಿಸುತ್ತಿತ್ತು. ಆದರೆ ಈ ವರ್ಷ ಮೂರು ದಿನ ಮುಂಚಿತವಾಗಿ ಮುಂಗಾರು ಮಳೆ ದೇಶಕ್ಕೆ ಎಂಟ್ರಿ ನೀಡಲಿದೆ. ಈ ವರ್ಷದ ಜೂನ್ ತಿಂಗಳಿನಿಂದ ಸೆಪ್ಟೆಂಬರ್ ನಡುವೆ ದೇಶದಾದ್ಯಂತ ಮಾನ್ಸೂನ್ ಮಳೆಯು ದೀರ್ಘಾವಧಿಯ ಸರಾಸರಿ ಸಾಮಾನ್ಯಕ್ಕಿಂತ ಹೆಚ್ಚು ಆಗಿರಬಹುದು ಎಂದು ಹೇಳಲಾಗಿದೆ.