ಚೆನ್ನೈ ವಿರುದ್ಧ ಆರ್ಸಿಬಿ ಗೆಲ್ಲೋದು ಫಿಕ್ಸ್ ಆಗಿದ್ದು, ಪಂದ್ಯಕ್ಕೂ ಮುನ್ನವೇ ಅಚ್ಚರಿಯ ಮಾಹಿತಿ ಹೊರ ಬಿದ್ದಿದೆ. ಮೇ 18ರಂದು ಶನಿವಾರ ನಡೆಯಲಿರುವ ಆರ್ಸಬಿ ಮತ್ತು ಚೆನ್ನೈ ಪಂದ್ಯಕ್ಕಾಗಿ ಬಕಪಕ್ಷಿಗಳಂತೆ ಕಾಯುತ್ತಿದ್ದಾರೆ. ಈ ವರ್ಷದ ಬಿಗ್ಗೆಸ್ಟ್ ಐಪಿಎಲ್ ಮ್ಯಾಚ್ ಎಂದೇ ಈ ಮ್ಯಾಚ್ನ್ನು ಪರಿಗಣಿಸಲಾಗಿದೆ.
ದೇವರನಾಡು ಕೇರಳದಲ್ಲಿ ಮಳೆಯ ಆರ್ಭಟ.. ಈ ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಣೆ..!
ಹೌದು, ಈಗಾಗಲೇ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಅಧಿಕೃತವಾಗಿ ಐಪಿಎಲ್ ಪ್ಲೇಆಫ್ಗೆ ಲಗ್ಗೆಯಿಟ್ಟಿದೆ. ಆದರೆ ಉಳಿದ 2 ಸ್ಥಾನಕ್ಕಾಗಿ 3 ತಂಡಗಳ ನಡುವೆ ಬಿಗ್ ಫೈಟ್ ಏರ್ಪಟ್ಟಿದೆ. ಅದರಲ್ಲಿಯೂ ಪ್ಲೇಆಫ್ನ 4ನೇ ಸ್ಥಾನಕ್ಕಾಗಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಆರ್ಸಿಬಿ ನಡುವೆ ಸಾಕಷ್ಟು ಫೈಪೋಟಿಯ ಲೆಕ್ಕಾಚಾರಗಳು ನಡೆಯುತ್ತಿದೆ.
ಇದರ ಭಾಗವಾಗಿ ಮೇ 18ರಂದು ನಡೆಯಲಿರುವ ಪಂದ್ಯದ ಮೇಲೆ ಈ ಎರಡು ತಂಡಗಳ ಅಭಿಮಾನಿಗಳು ಮಾತ್ರವಲ್ಲದೇ ಐಪಿಎಲ್ ಕ್ರಿಕೆಟ್ ಅಭಿಮಾನಿಗಳು ಹಾಗೂ ಕ್ರಿಕೆಟ್ ದಿಗ್ಗಜರುಗಳೇ ಕಾಯುತ್ತಿದ್ದಾರೆ. ಇದರ ನಡುವೆ ಹೊಸ ವಿಚಾರವೊಂದು ಇದೀಗ ಸಖತ್ ಸದ್ದು ಮಾಡಲಾರಂಭಿಸಿದೆ. ಹೌದು, ಆರ್ಸಿಬಿ ಗೆಲ್ಲಲಿದೆ ಎಂಬ ಅಂಶವೊಂದು ಹರಿದಾಡುತ್ತಿದೆ. ಹೌದು, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯದಲ್ಲಿ ಯಾವ ತಂಡ ಗೆಲ್ಲಲಿದೆ ಎಂದು ಸ್ಟಾರ್ ಸ್ಪೋರ್ಟ್ ಒಂದು ಪ್ರಶ್ನೆಯನ್ನು ತನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿತ್ತು. ಇದಕ್ಕೆ ಕೋಟ್ಯಾಂತರ ಕ್ರಿಕೆಟ್ ಹಾಗೂ ಐಪಿಎಲ್ ಅಭಿಮಾನಿಗಳು ಪ್ರತಿಕ್ರೀಯೆ ನೀಡಿದ್ದು, ಇದೀಗ ಇದರ ಉತ್ತರವನ್ನು ಸ್ಟಾರ್ ಸ್ಟೋರ್ಟ್ಸ್ ಹಂಚಿಕೊಂಡಿದೆ.
ಅಚ್ಚರಿ ಎನ್ನುವಂತೆ ಇದರಲ್ಲಿ 100 ಪ್ರತಿಶದ ಆಧಾರದ ಮೇಲೆ ಹಂಚಿಕೆ ಮಾಡಲಾಗಿದ್ದು, ಇದರ ಪ್ರಕಾರ ಮೇ 18ರ ಆರ್ಸಿಬಿ vs ಚೆನ್ನೈ ಪಂದ್ಯದಲ್ಲಿ ಚೆನ್ನೈ 45.25% ಹಾಗೂ ಆರ್ಸಿಬಿ ತಂಡ 54.75%ರಷ್ಟು ಗೆಲ್ಲುವ ಸಾಧ್ಯತೆ ಇದೆ ಎಂದು ಅಭಿಮಾನಿಗಳು ಉತ್ತರಿಸಿದ್ದಾರೆ. ಈ ಮೂಲಕ ಆರ್ಸಿಬಿ ಚೆನ್ನೈ ತಂಡವನ್ನು ಸೋಲಿಸಿ ಪ್ಲೇಅಫ್ಗೆ ಲಗ್ಗೆಯಿಡಲಿದೆ ಎಂದು ಉತ್ತರಿಸಿದ್ದಾರೆ.
ಮೊದಲಿಗೆ ಇದೇ ಮೇ 18ರಂದು ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಭರ್ಜರಿಯಾಗಿ ಗೆಲುವು ದಾಖಲಿಸಬೇಕಿದೆ. ಆಗ ಆರ್ಸಿಬಿ 14 ಪಂದ್ಯದಿಂದ 14 ಅಂಕಗಳಿಸುತ್ತದೆ. ಅತ್ತ ಚೆನ್ನೈ ಸೋತರೆ ಅದೂ ಸಹ 14 ಅಂಕಕ್ಕೆ ಬಂದು ನಿಲ್ಲುತ್ತದೆ. ಇದರಿಂದಾಗಿ ಆರ್ಸಿಬಿ ರನ್ರೇಟ್ ಅನ್ನು ಅಂದು ಗಮನದಲ್ಲಿಟ್ಟುಕೊಳ್ಳಬೇಕು. ರನ್ರೇಟ್ ಹೆಚ್ಚಿದ್ದರೆ ಮಾತ್ರ ಆರ್ಸಿಬಿ ಪ್ಲೇಆಫ್ ಹೋಗಬಹುದು.
ಅದರ ಲೆಕ್ಕಾಚಾರದ ಪ್ರಕಾರ ಆರ್ಸಿಬಿ ಮೊದಲು ಬ್ಯಾಟಿಂಗ್ ಮಾಡಿದ್ರೆ 18 ರನ್ಗಳಿಂದ ಜಯಗಳಿಸಬೇಕು. ಇಲ್ಲ ಚೇಸಿಂಗ್ ಮಾಡಿದ್ರೆ 18.1 ಓವರ್ಗಳಲ್ಲಿ ಪಂದ್ಯ ಗೆಲ್ಲಬೇಕು. ಒಂದು ವೇಳೆ ಇದು ಆದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಆಫ್ ತಲುಪಲಿದೆ. ಇದರಲ್ಲಿ ಕೊಂಚವೇ ಎಡವಿದರೂ ತಂಡ ಪ್ಲೇಆಫ್ ಕನಸು ಮೇ 18ರಂದೇ ಭಗ್ನವಾಗಲಿದೆ.