ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಸೈಲೆಂಟ್ ಆಗಿ ರಿಲೀಸ್ ಆದ ಮ್ಯಾಕ್ಸ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಸಹ ‘ಮ್ಯಾಕ್ಸ್’ ಸಿನಿಮಾದ ಬಗ್ಗೆ ಬಹಳ ಒಳ್ಳೆಯ ವಿಮರ್ಶೆಗಳು ಪ್ರಕಟವಾಗಿದೆಲ ಮೊದಲ ದಿನವೇ ಸಿನಿಮಾದ ಬಗ್ಗೆ ಬಹಳ ಒಳ್ಳೆಯ ವಿಮರ್ಶೆಗಳು ವ್ಯಕ್ತವಾಗಿರುವ ಕಾರಣ ಸುದೀಪ್, ‘ಮ್ಯಾಕ್ಸ್’ ಚಿತ್ರತಂಡದೊಂದಿಗೆ ಸೆಲೆಬ್ರೇಷನ್ ಮಾಡಿದ್ದಾರೆ.
ಸುದೀಪ್ ಮನೆಯಲ್ಲಿ ‘ಮ್ಯಾಕ್ಸ್’ ತಂಡಕ್ಕೆ ಪ್ರತ್ಯೇಕ ಪಾರ್ಟಿ ಕೊಟ್ಟಿದ್ದಾರೆ ಸುದೀಪ್. ಚಿತ್ರತಂಡದ ಜೊತೆಗೆ ಸುದೀಪ್ ಪತ್ನಿ ಪ್ರಿಯಾ ಸುದೀಪ್ ಸಹ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ. ಸುದೀಪ್, ಪ್ರಿಯಾ ಹಾಗೂ ಪಾರ್ಟಿಗೆ ಹಾಜರಾಗಿದ್ದ ಎಲ್ಲರೂ ‘ಮ್ಯಾಕ್ಸ್’ ಹೆಸರಿನ ಟಿ-ಶರ್ಟ್ಗಳನ್ನು ಧರಿಸಿ, ಕೇಕ್ ಸೆಲೆಬ್ರೇಟ್ ಮಾಡಿದ್ದಾರೆ.
ಪಾರ್ಟಿಯ ಚಿತ್ರಗಳು ವಿಡಿಯೋಗಳು ವೈರಲ್ ಆಗುತ್ತಿದ್ದು, ಸುದೀಪ್ ಹಾಗೂ ಅವರ ಪತ್ನಿ ಪ್ರಿಯಾ ಅವರು ಪರಸ್ಪರ ಹೆಗಲ ಮೇಲೆ ಕೈ ಹಾಕಿಕೊಂಡು ‘ಮ್ಯಾಕ್ಸ್’ ಸಿನಿಮಾದಲ್ಲಿ ಸುದೀಪ್ ಮಾಡಿರುವ ಸಿಗ್ನೇಚರ್ ಮೂವ್ ಒಂದನ್ನು ಮಾಡಿರುವ ಕ್ಯೂಟ್ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸುದೀಪ್ ಅಭಿಮಾನಿಗಳು ‘ಮ್ಯಾಕ್ಸ್’ ಪಾರ್ಟಿಯ ಚಿತ್ರ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ..
ನಿನ್ನೆ ಬಿಡುಗಡೆ ಆಗಿರುವ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಒಂದೇ ರಾತ್ರಿಯಲ್ಲಿ ನಡೆಯುವ ಕತೆಯಾಗಿದ್ದು, ಕತೆಯಲ್ಲಿ ಒಳ್ಳೆಯ ವೇಗವಿದೆ. ಸುದೀಪ್ ನಟನೆ ಸಹ ಬಹಳ ಚೆನ್ನಾಗಿದೆ ಎನ್ನಲಾಗುತ್ತಿದೆ. ಸಿನಿಮಾದ ಆಕ್ಷನ್ ಮತ್ತು ಸಂಗೀತದ ಬಗ್ಗೆಯೂ ಪ್ರಶಂಸೆ ವ್ಯಕ್ತವಾಗುತ್ತಿದೆ. ‘ಮ್ಯಾಕ್ಸ್’ ಸಿನಿಮಾ ಅನ್ನು ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಖ್ಯಾತ ತಮಿಳು ನಿರ್ಮಾಪಕ ಕಲೈಪುಲಿ ಬಂಡವಾಳ ಹೂಡಿದ್ದಾರೆ.