ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾ 25 ದಿನ ಪೂರೈಸಿದೆ. ಎರಡೂವರೆ ವರ್ಷಗಳ ಬಳಿಕ ತೆರೆಗೆ ಬಂದ ಸುದೀಪ್ ಸಿನಿಮಾ ನೋಡಿ ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ. ಮ್ಯಾಕ್ಸ್ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಮಾಡಿದ್ದಕ್ಕೆ ವಿಡಿಯೋ ಮೂಲಕ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.
ಮ್ಯಾಕ್ಸ್ ಸಿನಿಮಾವನ್ನು 25 ದಿನಗಳಿಗೆ ಕರೆದುಕೊಂಡ ಬಂದ ನನ್ನ ಸ್ನೇಹಿತರಿಗೆ ಥ್ಯಾಂಕ್ಸ್ ಎಂದು ಸುದೀಪ್ ಹೇಳಿದ್ದಾರೆ. ಕರ್ನಾಟಕ, ಆಂಧ್ರ, ತಮಿಳುನಾಡಿನಲ್ಲಿ ಸಿನಿಮಾ ಹಿಟ್ ಆಗಿದೆ. ಎಲ್ಲರಿಗೂ ಬಿಗ್ ಥ್ಯಾಂಕ್ಸ್ ಎಂದು ಸುದೀಪ್ ತಿಳಿಸಿದ್ದಾರೆ.
ನೀವೆಲ್ಲಾ ತುಂಬಾ ಸಕ್ಸಸ್ ಫುಲ್ ಆಗಿ ಮ್ಯಾಕ್ಸ್ ಸಿನಿಮಾವನ್ನು ಓಡಿಸಿದ್ದೀರಿ. ಎರಡೂವರೆ ವರ್ಷದ ನಂತರ ಬಂದಿರುವ ನನ್ನ ಚಿತ್ರದ ಮೇಲೆ ನೀವು ತೋರಿಸಿದ ಪ್ರೀತಿ, ಬೆಂಬಲಕ್ಕೆ ಇಡೀ ತಂಡದ ಪರವಾಗಿ ಧನ್ಯವಾದಗಳು ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಡಿಸೆಂಬರ್ 25, 2024 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಮ್ಯಾಕ್ಸ್ ಸಿನಿಮಾಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್ ಆಗಿದ್ದಾರೆ. ಇಂದಿಗೂ ಹಲವು ಕಡೆಗಳಲ್ಲಿ ಮ್ಯಾಕ್ಸ್ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಅಲ್ಲದೆ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಕನ್ನಡ ಚಲನಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಮ್ಯಾಕ್ಸ್ ಸಿನಿಮಾ ಒಟಿಟಿಗೆ ಎಂಟ್ರಿ ಕೊಡಲು ರೆಡಿಯಾಗುತ್ತಿದೆ ಎಂದು ವರದಿಯಾಗಿದೆ. Zee5 ನಲ್ಲಿ ಚಲನಚಿತ್ರವನ್ನು ಸ್ಟ್ರೀಮ್ ಮಾಡಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ. 2025 ರ ಜನವರಿ 31 ಒಟಿಟಿಗೆ ಬರಲಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ತಂಡವಾಗಲಿ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.