ಫ್ಯಾಷನ್ (Fashion) ಅಂತ ಬಂದರೆ ಸೀರೆಯಲ್ಲೂ ವಿವಿಧ ರೀತಿಯ ಟ್ರೆಂಡ್ಗಳಿವೆ. ಸದ್ಯ ನಾರಿಮಣಿಯರ ಗಮನ ಸೆಳೆದಿರೋದು ಇಂಡೋ-ವೆಸ್ಟರ್ನ್ ಡಿಸೈನ್ನ ಮ್ಯಾಚಿಂಗ್ (Indo Western Saree) ಸೀರೆಗಳು. ಇದು ಸೀರೆ ಪ್ರಿಯರನ್ನು ಆವರಿಸಿಕೊಂಡಿದೆ. ಮಾರುಕಟ್ಟೆಯಲ್ಲಿ ಬೇಡಿಕೆ ಕೂಡ ಹೆಚ್ಚಾಗಿದೆ.
ಇದುವರೆಗೂ ಇಂಡೋ-ವೆಸ್ಟರ್ನ್ ಲುಕ್ ನೀಡುತ್ತಿದ್ದ, ರೆಡಿಮೇಡ್ ಟಾಪ್ಗಳ ಜಾಗಕ್ಕೆ ಇದೀಗ ಮತ್ತೊಂದು ಸ್ಟೈಲಿಂಗ್ ಕಾನ್ಸೆಪ್ಟ್ ಸೇರಿಕೊಂಡಿದೆ. ಅದೇ ಸೀರೆಯಲ್ಲಿ ಲಭ್ಯವಿರುವ ಬ್ಲೌಸನ್ನು ವೆಸ್ಟರ್ನ್ ಲುಕ್ನಲ್ಲಿ ವಿನ್ಯಾಸಗೊಳಿಸಿ ಧರಿಸುವುದು ಟ್ರೆಂಡಿಯಾಗಿದೆ. ಸಿನಿಮಾ ನಟಿಯರು ಧರಿಸುವ ವೆಸ್ಟರ್ನ್ ಲುಕ್ ನೀಡುವ ಹಾಲ್ಟರ್ ನೆಕ್ನ ಸೀರೆ ಬ್ಲೌಸ್ ಮ್ಯಾಚಿಂಗ್ ಕಾನ್ಸೆಪ್ಟ್ ಕೂಡ ಯುವತಿಯರನ್ನು ಸೆಳೆದಿದೆ. ಪರಿಣಾಮ, ಇದೀಗ ಡಿಸೈನರ್ ಬ್ಲೌಸ್ ಲೋಕದಲ್ಲಿ ಅಂದರೇ, ಬ್ಲೌಸ್ ಸ್ಟಿಚ್ ಮಾಡುವ ಬೋಟಿಕ್ಗಳಲ್ಲಿ ಹಾಗೂ ಬ್ಲೌಸ್ ಡಿಸೈನರ್ಗಳ ಲೋಕದಲ್ಲಿ ಇಂತಹ ವಿನ್ಯಾಸಕ್ಕೆ ಬೇಡಿಕೆ ಹೆಚ್ಚಾಗಿದೆ.
ಸೀರೆಗಳಿಗೆ ಮೊದಲಿನಿಂದಲೂ ಮ್ಯಾಚಿಂಗ್ ಬ್ಲೌಸ್ ಧರಿಸುವ ಕಾನ್ಸೆಪ್ಟ್ ಎವರ್ಗ್ರೀನ್ ಫ್ಯಾಷನ್ ಟ್ರೆಂಡ್ನಲ್ಲಿತ್ತು. ಕಾಲ ಕ್ರಮೇಣ, ಈ ಕಾನ್ಸೆಪ್ಟ್ ಬದಲಾಗಿ ಮಿಸ್ ಮ್ಯಾಚ್, ಕಾಂಟ್ರಾಸ್ಟ್, ರೆಡಿಮೇಡ್ ಬ್ಲೌಸ್ ಹೀಗೆ ನಾನಾ ಬಗೆಯಲ್ಲಿ ಸೀರೆ ಪ್ರಿಯರನ್ನು ಸೆಳೆದವು. ಇತ್ತೀಚೆಗೆ, ಬ್ಲೌಸ್ ಡಿಸೈನರ್ಗಳು ಯುವತಿಯರಿಗೆ ಸೀರೆಯಲ್ಲೂ ಗ್ಲಾಮರಸ್ ಲುಕ್ ನೀಡುವ ಸಲುವಾಗಿ ಟ್ರೆಡಿಷನಲ್ ಲುಕ್ ನೀಡುವ ಬ್ಲೌಸ್ಗಳ ಬದಲಿಗೆ ಇಂಡೋ-ವೆಸ್ಟರ್ನ್ ಲುಕ್ ನೀಡುವ ಬ್ಲೌಸ್ಗಳು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಇದರಿಂದ ಕಾರ್ಪೋರೇಟ್ ಕ್ಷೇತ್ರದ ಹಾಗೂ ಈ ಜನರೇಷನ್ ಹುಡುಗಿಯರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಮ್ಯಾಚಿಂಗ್ ಸೀರೆ ಬ್ಲೌಸ್ ಡಿಸೈನ್ನಲ್ಲಿ ಹಿಟ್ ಲಿಸ್ಟ್ ಸೇರಿದೆ.
ಮೊದಲಿನಿಂದಲೂ ಮ್ಯಾಚಿಂಗ್ ಬ್ಲೌಸ್ ಸ್ಟಿಚ್ಚಿಂಗ್ ಕಾನ್ಸೆಪ್ಟ್ ಇದ್ದೇ ಇದೆ. ಆದರೆ, ಇದೀಗ ಇಂದಿನ ಯುವತಿಯರ ಅಭಿಲಾಷೆಯಂತೆ, ವೆಸ್ಟರ್ನ್ ಕ್ರಾಪ್ ಟಾಪ್ಗಳಂತೆ ಕಾಣುವ ಬ್ಲೌಸ್ ಸ್ಟಿಚ್ ಮಾಡುವುದು ಹೆಚ್ಚಾಗಿದೆ. ಇದು ನೋಡಲು ಡಿಫರೆಂಟ್ ಲುಕ್ ನೀಡುತ್ತದೆ. ಅಲ್ಲದೇ, ಸಾಮಾನ್ಯ ಬ್ಲೌಸ್ಗಳ ಸ್ಟಿಚ್ಚಿಂಗ್ಗೆ ಹೋಲಿಸಿದಲ್ಲಿ ಇವುಗಳ ವಿನ್ಯಾಸಕ್ಕೆ ಬೆಲೆ ಹೆಚ್ಚು. ಆದರೂ ಯುವತಿಯರು ಇತ್ತೀಚೆಗೆ, ಈ ವಿನ್ಯಾಸಗಳನ್ನೇ ಪ್ರಿಫರ್ ಮಾಡುತ್ತಿದ್ದಾರೆ.
ಫ್ಯಾಷನ್ ಟಿಪ್ಸ್:
ನಿಮ್ಮ ಬಳಿಯಿರುವ ಪರ್ಫೆಕ್ಟ್ ರೆಡಿಮೇಡ್ ಕ್ರಾಪ್ ಟಾಪ್ ಸ್ಟಿಚ್ಚಿಂಗ್ ಅಳತೆಗೆ ನೀಡಿ.
ನಿಮಗೆ ಹೊಂದುವಂತಹ ವೆಸ್ಟರ್ನ್ ವಿನ್ಯಾಸದ ಕ್ರಾಪ್ ಟಾಪ್ನಂತೆಯೇ ವಿನ್ಯಾಸ ಮಾಡಿಸಿ.
ಸೀರೆಯಲ್ಲೆ ದೊರೆಯುವ ಬ್ಲೌಸ್ ಪೀಸ್ನಿಂದಲೇ ಇವನ್ನು ವಿನ್ಯಾಸ ಮಾಡಿಸಬಹುದು.