ಮುಂಬೈ : ಟೀಂ ಇಂಡಿಯಾದ ಮಾಜಿ ಆಟಗಾರ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅವರು ಮಹಿಳಾ ದಿನಾಚರಣೆ ಹಿನ್ನೆಲೆ ತಮ್ಮ ಎಕ್ಸ್ ಖಾತೆಯಲ್ಲಿ ಭಾವುಕ ಕ್ಷಣವೊಂದರ ಫೋಟೊವನ್ನು ಹಂಚಿಕೊಂಡಿದ್ದೂ ಅಂದಿನ ಘಟನೆಯ ಕುರಿತು ಕಿರು ಟಿಪ್ಪಣಿಯನ್ನು ಬರೆದುಕೊಂಡಿದ್ದಾರೆ.
“ವರ್ಷಗಳು ಉರುಳಿದಂತೆ ಭಾರತ ಮತ್ತು ಜಗತ್ತಿನಾದ್ಯಂತ ಕ್ರೀಡೆಯಲ್ಲಿ ಮಹಿಳೆಯರು ಮುಂಚೂಣಿಗೆ ಬರುತ್ತಿದ್ದು, ಇದು ತುಂಬಾ ಸ್ಫೂರ್ತಿದಾಯಕವಾಗಿದೆ. 26/11ರ ದಾಳಿಯ ನಂತರ, ಭಾರತವು ಇಂಗ್ಲೆಂಡ್ ಎದುರು ಪಂದ್ಯವೊಂದನ್ನು ಜಯಿಸಿತ್ತು ಹಾಗೂ ಇದು ಇಡೀ ದೇಶದ ಪಾಲಿಗೆ ಭಾವುಕ ಕ್ಷಣವಾಗಿತ್ತು. ಈ ಭಾವುಕ ಕ್ಷಣವನ್ನು ನಾನು ಮೊತ್ತಮೊದಲ ಬಾರಿಗೆ ಹಂಚಿಕೊಂಡಿದ್ದು ಮಹಿಳಾ ಮೈದಾನದ ಸಿಬ್ಬಂದಿಯೊಬ್ಬರ ಬಳಿ. ಆ ಕ್ಷಣ ನನ್ನ ಪಾಲಿಗೆ ಇಂದೂ ಕೂಡ ವಿಶೇಷವಾಗಿ ಉಳಿದಿದೆ” ಎಂದು ಸಚಿನ್ ತಮ್ಮ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ. ಜತೆಗೆ ಕ್ರೀಡಾ ಕ್ಷೇತ್ರದಲ್ಲಿಯೂ ಇಂದು ಮಹಿಳೆಯರು ಸಾಧಿಸುತ್ತಿರುವ ಸಾಧನೆಯನ್ನು ಕೂಡ ಕೊಂಡಾಂಡಿದ್ದಾರೆ.